ನರಸಿಂಹ ಶತಕ -2

2 ಸೀಸ  :

    ಪದ್ಮಲೋಚನ ಸೀಸ ಪದ್ಯಮುಲ್ ನೀಮೀದ
    ಚೆಪ್ಪಬೂನಿತಿನಯ್ಯ ಚಿತ್ತಗಿಂಪು
    ಯತಿ ಗಣ ಪ್ರಾಸ ಲಕ್ಷಣಮು ಚೂಡಗಲೇದು
    ಪಂಚಕಾವ್ಯ ಶ್ಲೋಕ ಪಠನ ಲೇದು
    ಅಮರ ಕಾಂಡ ತ್ರಯಂ ಬರಸಿ ಚೂಡಗ ಲೇದು
    ಶಾಸ್ತ್ರೀಯ ಗ್ರಂಥಮುಲ್ ಚದುವ ಲೇದು
    ನೀಕಟಾಕ್ಷಂಬುನ ನೇ ರಚಿಂಚೆದಗಾನಿ
    ಪ್ರಜ್ಞನಾಯದಿಕಾದು ಪ್ರಸ್ತುತಿಂಪ


ತೇಟಗೀತೆ :
    ದಪ್ಪುಗಲಿಗಿನ ಸದ್ಭಕ್ತಿ ತಕ್ಕುವೌನೆ
    ಚಿರುಕುನಕು ವಂಕ ಬೋತೇಮಿ ಚಿಡುನೆತೀಪು ||ಭೂ||

ಅನುವಾದ :
    ಪದ್ಮಲೋಚನ ಸೀಸ ಪದ್ಯಗಳ ನಿನ್ಮೇಲೆ
    ಹೇಳೆ ಹೊರಟಿಹೆ ನಾನು ಆಲಿಸಯ್ಯ
    ಯತಿಗಣ ಪ್ರಾಸದಾ ಲಕ್ಷಣ ಶೋಧಿಸಲಿಲ್ಲ
    ಪಂಚಕಾವ್ಯ ಶ್ಲೋಕ ಪಠಿಸಲಿಲ್ಲ
    ಅಮರ ಕಾಂಡತ್ರಯ ವರಸಿ ನೋಡಲೆ ಇಲ್ಲ
    ಶಾಸ್ತ್ರೀಯ ಗ್ರಂಥವ ಓದಲಿಲ್ಲ
    ನಿಮ್ಮ ಕಟಾಕ್ಷದಿಂ ರಚಿಸುವೆನೆ ಹೊರತು
    ಪ್ರಜ್ಞೆ ಎನ್ನದುಮಲ್ಲ ಕೀರ್ತಿ ಪಡೆಯೆ

ತೇಟಗೀತೆ :
    ತಪ್ಪುತಲೆದೋರೆ ಸದ್ಭಕ್ತಿ ಕಡಿಮೆ ಯಹುದೆ
    ಕರ್ವದಲಿ ಡೊಂಕು ತಾನಿರೆ ಕೆಡುಗೆಸಿಹಿಯು ||ಭೂ||

ತಾತ್ಪರ್ಯ :
    "ಕಮಲಕಣ್ಣನೆ, ನಿನ್ನನ್ನು ಕುರಿತು ಸೀಸ ಪದ್ಯಗಳನ್ನು ರಚಿಸುತ್ತೇನೆ ಆಲಿಸು ಯತಿಗಣ ಪ್ರಾಸ ಲಕ್ಷಣ ಶೋಧಿಸಲಿಲ್ಲ ಪಂಚಕಾವ್ಯ, ಅಮರಕಾಂಡ, ಶಾಸ್ತ್ರೀಯ ಗ್ರಂಥ ಓದಲಿಲ್ಲ ನಿನ್ನ ಕಟಾಕ್ಷದಿಂದ ಬರೆಯುತ್ತೇನೆ. ಕೀರ್ತಿ ಪ್ರತಿಷ್ಠೆಗಳಿಗಲ್ಲ ಈ ಪದ್ಯಗಳಲ್ಲಿ ತಪ್ಪು ತಲೆದೋರಿದರೆ ಕಬ್ಬು ಡೊಂಕಾದರೂ ಸಿಹಿ ಕಡಿಮೆಯಾಗದಂತೆ ಸದ್ಭಕ್ತಿಯಿಂದ ಬರೆಯುತ್ತೇನೆ".

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ