ಸನ್ನತಿ ಚಂದಮ್ಮ

ಗುಲ್ಬರ್ಗಾ ಜಿಲ್ಲೆಗೆ ಸಮಿಪದಲ್ಲಿರುವ ಭೀಮಾನದಿ ತೀರದಲ್ಲಿ ಸನ್ನತಿ ಎಂಬ ಊರಿನಲ್ಲಿ ಶ್ರೀ ಚಂದ್ರಲಾದೇವಿಯ ದೇವಸ್ಥಾನವಿರುವುದು. ಈಕೆ ಸೀತಾದೇವಿ, ಶ್ರೀರಾಮದೇವರ ಪಟ್ಟಾಭಿಷೇಕ ಸಮಯದಲ್ಲಿ ಸಮುದ್ರರಾಜನಿಗೆ ಆಹ್ವಾನ ಕೊಡಲಿಲ್ಲವೆಂದು ಸಮುದ್ರ ರಾಜನು ಶ್ಯಾಪ ಕೊಟ್ಟನಂತೆ. ತಿರುಗಿ ಭೂಮಿ ಮೇಲೆ ಪುಟ್ಟಿದಳಂತೆ ಸೀತಾಮಾತೆ, ಪರಮಾತ್ಮನು ನಾರಾಯಣ ಮುನಿಯಾಗಿ ಪುಟ್ಟಿದನಂತೆ. ಈ ಚಂದ್ರಲಾದೇವಿಗೆ ನಾರಾಯಣ ಮುನಿಗೆ ಲಗ್ನವಾಯಿತಂತೆ ಸಮುದ್ರರಾಜ ಅಸುರನಾಗಿ ಪುಟ್ಟಿದನಂತೆ ಆತನನ್ನು ಪರಮಾತ್ಮ ಸಂಹಾರ ಮಾಡಿದನಂತೆ ಚಂದ್ರಲಾದೇವಿ ಈ ಸನ್ನತಿ ಕ್ಷೇತ್ರದಲ್ಲಿ ನಿಂತು ಬೇಡಿದ ಭಕ್ತರಿಗೆ ಇಷ್ಟಾರ್ಥ ಕೊಡುತ್ತಿರುವಳು. ಇಲ್ಲಿ ಸೀತಾದೇವಿ ಎರಡು ಪಾದಗಳಿವೆ. ಪುರಾತನ ದೊಡ್ಡ ದೇವಸ್ಥಾನವಿದೆ.

"ಭೃಗುಮುನಿ ಶ್ರೀಹರಿ ಎದೆಗೊದಿಯಲು ನೀ
ಆಗಲಿ ಬಂದೆಯೇ ಚಂದ್ರಲಾಂಬೆ |
ವಿಗಡ ಜನರನು ಮೋಹ ಬಡಿಸಿ ಕಲಿ
ಯುಗಾದಿಗೆ ಬಂದೆ ಚಂದ್ರಲಾಂಬೆ ||

ಗುರುಪ್ರಾಣೇಶರ ವಚನದಂತೆ ನಿನ
ಸ್ಮರಿಸುತ ಬದುಕುವೆ ಚಂದ್ರಲಾಂಬೆ |
ಧರಿಯೊಳು ಸನ್ನತಿ ಕ್ಷೇತ್ರ ನಿವಾಸಿನಿ
ವರದ ವಿಠಲನ ತೋರೆ ಚಂದ್ರಲಾಂಬೆ ||

ಎಂದು ಹರಿದಾಸರು ಹಾಡಿರುವರು. ಚಂದ್ರಲಾದೇವಿಯನ್ನು ಪೂಜಿಸಿ ಸೀರೆ ಕುಬಸ ಉಡಿ ತುಂಬುವರು.
ಅಲ್ಲಿಂದ ಕೊಲ್ಲಾಪುರಕ್ಕೆ ಬಂದು ಇಲ್ಲಿ ಜಗಜ್ಜನನಿಯಾದ ಶ್ರೀ ಮಹಾಲಕ್ಷ್ಮೀ ಶ್ರೀ ವೆಂಕಟೇಶನ ಕಲ್ಯಾಣೋತ್ಸವ ನಿಮಿತ್ತ ಮತ್ತು ಭಕ್ತರ ಪ್ರಾರ್ಥನಾಸಾರ ಕೊಲ್ಲೊಪುರಕ್ಕೆ ಬಂದು ನೆಲೆಸಿರುವಳು. ಲಕ್ಷ್ಮಿಯ ದಿವ್ಯ ದರ್ಶನ ಪಡೆದು ಈಕೆಗೆ ಸೀರೆ ಕುಬಸ ಮರದ ಬಾಗಿನ ಸಾಮಾನು ಪುಠಾಣಿ ಕೊಬ್ರಿ ಬಟ್ಲು ವುಡಿ ತುಂಬಬೇಕು. ವಿಗ್ರಹವು ಬಲು ಸುಂದರವಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ