ನರಸಿಂಹ ಶತಕ - 3

3. ಸೀಸ :
    ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ
    ದುರಿತ ಜಾಲಮುಲೆಲ್ಲ ದೋಲ ವಚ್ಚು
    ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ
    ಬಲು ವೈನ ರೋಗಮು ಲ್ಬಾಪವಚ್ಚು
    ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ
    ರಿಪು ಸಂಘಮುಲ ಸಂಹ ರಿಂಚವಚ್ಚು
    ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ
    ದಂಡ ಹಸ್ತುನಿ ಬಂಟ್ಲ ದರುಮ ವಚ್ಚು

ತೇಟಗೀತೆ :
    ಭಳಿರ ನೇ ನೀ ಮಹಾಮಂತ್ರ ಬಲಮು ಚೇತ
    ದಿವ್ಯ ವೈಕುಂಠ ಪದವಿ ಸಾದಿಂಪವಚ್ಚು ||ಭೂ||

ಅನುವಾದ :
    ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ
    ದುರಿತ ಜಾಲಗಳನು ದೂಡಬಹುದು
    ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ
    ಬಲವಾದ ರೋಗವ ನೀಗಬಹುದು
    ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ
    ರಿಪುಸಂಘ ಸಂಹಾರ ಮಾಡಬಹುದು
    ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ
    ದಂಡಹಸ್ತ ಭಟರ ಅಟ್ಟಬಹುದು
   
ತೇಟಗೀತೆ :
    ಬಲರೆ ನಾ ನಿನ್ನ ಯಾ ನಾಮ ಮಂತ್ರ ಬಲದಿ
    ದಿವ್ಯ ವೈಕುಂಠ ಪದವಿಯ ಪಡೆಯಬಹುದು ||ಭೂ||

ತಾತ್ಪರ್ಯ : ಶ್ರೀ ನರಸಿಂಹ ಮೂರ್ತಿಯ ಪವಿತ್ರ ನಾಮ ಬಲದಿಂದ, ಪಾಪ ಸಮೂಹವನ್ನು ಹೋಗಲಾಡಿಸಬಹುದು. ಬಲವಾದ ರೋಗಗಳನ್ನು ಗುಣ ಮಾಡಬಹುದು. ವೈರಿಗಳನ್ನು ಸಂಹಾರ ಮಾಡಬಹುದು. ಯಮದೂತರನ್ನು ದೂರ ಓಡಿಸಬಹುದು. ಕೊನೆಗೆ ವೈಕುಂಠ ಪದವಿಯನ್ನೂ ಪಡೆಯಬಹುದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ