ನರಸಿಂಹ ಶತಕ - 1

1 ಸೀಸ :

    ಶ್ರೀ ಮನೋಹರ ಸುರಾರ್ಚಿತ ಸಿಂದು ಗಂಭೀರ
    ಭಕ್ತವತ್ಸಲ ಕೋಟಿ ಭಾನು ತೇಜ
    ಕಂಜನೇತ್ರ ಹಿರಣ್ಯ ಕಶ್ಯಪಾಂತಕ ಶೂರ
    ಸಾಧು ರಕ್ಷಣ ಶಂಖ ಚಕ್ರಹಸ್ತ
    ಪ್ರಹ್ಲಾದ ವರದ ಪಾಪದ್ವಂಸ ಸರ್ವೇಶ
    ಕ್ಷೀರ ಸಾಗರ ಶಾಯಿ ಕೃಷ್ಣವರ್ಣ
    ಪಕ್ಷಿವಾಹನ ನೀಲ ಭ್ರಮರ ಕುಂತಲ ಜಾಲ
    ಪಲ್ಲವಾರುಣ ಪಾದ ಪದ್ಮಯುಗಳ

ತೇಟಗೀತೆ :
    ಚಾರು ಶ್ರೀ ಚಂದನಾಗರು ಚರ್ಚಿತಾಂತ
    ಕುಂದಕುಟ್ಮಲದಂತ ವೈಕುಂಠಧಾಮ
    ಭೂಷಣ ವಿಕಾಸ ಶ್ರೀ ಧರ್ಮಪುರನಿವಾಸ
    ದುಷ್ಟ ಸಂಹಾರ ನರಸಿಂಹ ದುರಿತ ದೂರ

ತಾತ್ಪರ್ಯ :
    ಶ್ರೀ ಲಕ್ಷ್ಮೀರಮಣನೆ ಸುರರಿಂದ ಪೂಜೆಗೊಂಡು ಸಮುದ್ರದಂತೆ ಗಂಭೀರನೆ, ಭಕ್ತರನ್ನು ಸಲಹುವವನೆ, ಕೋಟಿ ಸೂರ್ಯರ ಪ್ರಕಾಶ ಉಳ್ಳವನೆ, ಪದ್ಮಾಕ್ಷ, ರಕ್ಕಸರ ಕೊಂದ ಶೂರನೆ, ಸಾಧು ನಜ ರಕ್ಷಕ, ಶಂಕು ಚಕ್ರ ಧರಿಸಿ, ಪ್ರಹ್ಲಾದನ ಸಲಹಿದವನೆ, ಪಾಪ ಧ್ವಂಸನೆ, ಸರ್ವೇಶ, ಕ್ಷೀರ ಸಾಗರ ಶಯನನೆ, ಗರುಡವಾಹನನೆ ಭ್ರಮರದಂಥ ಮುಂಗುರುಳು, ನಸುಗೆಂಪುಪಾದಗಳುಳ್ಳವನೆ, ಶ್ರೀಗಂಧ ಅಗರುಗಳನ್ನು ಲೇಪಿಸಿಕೊಂಡವನೆ, ಮಲ್ಲಿಗೆಯಂತೆ ದಂತಗಳುಳ್ಳವನೆ, ದುರಿತಗಳ ದೂರವಿಡುವವನೆ, ಶ್ರೀಯೊಡನೆ ಧರ್ಮಪುರಿ ವಾಸ ನರಸಿಂಹನೆ(ನಿನಗೆ ನಮಸ್ಕರಿಸುವೆನು)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ