ಪಾನಕ ನರಸಿಂಹ

    ವಿಜಯವಾಡ ನಗರದಿಂದ ಸುಮಾರು 14 ಮೈಲು ದೂರದಲ್ಲಿ ಮಂಗಲ ಗಿರಿ ಎಂಬ ಉನ್ನತವಾದ ಗಿರಿ ಇದೆ ಸುಮಾರು 400 ಮೆಟ್ಟಲುಗಳಿವೆ ನೇರವಾದ ಪರ್ವತ ಕಾರಣ ಹತ್ತಲು ಆಯಾಸವಾಗುವದು ಸ್ವಾಭಾವಿಕ ಆದರೂ ಬಂದ ಭಕ್ತರು ಅದನ್ನು ಲೆಕ್ಕಿಸುವುದಿಲ್ಲ ದೇವನ ದರ್ಶನಕ್ಕಾಗಿ ಹೋಗುವುದುಂಟು ಪಾನಕ ನರಸಿಂಹ ಇಲ್ಲಿಯ ಮುಖ್ಯ ದೇವರು ಇಲ್ಲಿ ಆತನಿಗೆ ಪಾನಕವೇ ನೈವೇದ್ಯ. ಕೆಲವರು ತಂಬಿಗೆ ಪಾನಕ ನೈವೇದ್ಯವಿತ್ತರೆ ಕೆಲವರು ಬಿಂದಿಗೆ ಮತ್ತೆ ಕೆಲವರು ಕೊಡ ಅದಕ್ಕೆ ಮಿತಿ ಇಲ್ಲ ಪಾನಕವನ್ನು ಅಲ್ಲಿಯ ಜನರೇ ಸಿದ್ಧ ಮಾಡಿ ತರುತ್ತಾರೆ ಅವರಿಗೆ ಕೊಂಡುಕೊಳ್ಳಬಹುದು.

    ಮಂದಿರದ ಒಂದು ಗೋಡೆಯಲ್ಲಿ ನಾರಸಿಂಹನ ಮುಖ ಮಾತ್ರ ಉದ್ಭವವಾಗಿದೆ, ಭಕ್ತರ ಪಾನಕ ಆ ಉದ್ಭವ ಮೂರ್ತಿಯ ಬಾಯಿಯಲ್ಲಿ ಹಾಕಲಾಗುತ್ತದೆ ಅರ್ಧ ಪಾನಕ ಮುಗಿದ ಕೂಡಲೆ ನರಸಿಂಹನ ಬಾಯಿ ತುಂಬುತ್ತದೆ ಇನ್ನೂ ಹಾಕಿದರೆ ಹೊರಚೆಲ್ಲುತ್ತದೆ ಉಳಿದದ್ದನ್ನು ಪ್ರಸಾದವೆಂದು ಹಿಂದಿರುಗಿಸುತ್ತಾರೆ ಇಲ್ಲಿನ ವೈಶಿಷ್ಠ್ಯವೆಂದರೆ ತಂಬಿಗೆ ಪಾನಕ ಅರ್ಪಿಸಿದರೂ ಅರ್ಧ ತಂಬಿಗೆ ಉಳಿಯುತ್ತದೆ, ಬಿಂದಿಗೆಯಲ್ಲಿ ಅರ್ಧಬಿಂದಿಗೆ, ಕೊಡವನ್ನು ಅರ್ಪಿಸಿದಾಗಲೂ ಅರ್ಧ ಕೊಡ ಮಾತ್ರ ಉಳಿಯುತ್ತದೆ.

    ಪಾನಕ ನರಸಿಂಹನ ಬಗೆಗೆ ಅಲ್ಲಿಯ ಪೂಜಾರಿಗಳು ಪೌರಾಣಿಕ ಕಥೆಯನ್ನು ಈ ರೀತಿ ಹೇಳುವುದುಂಟು ಹಿಂದೆ ಹಿರಣ್ಯಕಶ್ಯಪು ಪ್ರಲ್ಹಾದನಿಗೆ ಸಾಕಷ್ಟು ಕಷ್ಟವನ್ನು ಕೊಟ್ಟನು, ಕೊನೆಗೆ ಭಕ್ತನನ್ನು ರಕ್ಷಿಸಲು ಪರಮಾತ್ಮನೇ ನಾರಸಿಂಹನ ರೂಪದಿಂದ ಬಂದನು ಹಿರಣ್ಯ ಕಶ್ಯಪನ ಸಂಹಾರವಾಯಿತು, ನಾರಸಿಂಹನು ಶಾಂತನಾಗಲಿಲ್ಲ ಪ್ರಲ್ಹಾದನು ಬೆಲ್ಲದ ಪಾನಕವನ್ನು ಸಿದ್ದಪಡಿಸಿ ತನ್ನ ದೇವರಿಗೆ ಅರ್ಪಿಸಿದನು ಅದು ಇಂದಿಗೂ ನಡೆದು ಕೊಂಡು ಬಂದಿದೆ. ನಾರಸಿಂಹನು ತಂಪಾದ ಪಾನಕವನ್ನು ಸ್ವೀಕರಿಸಿ ಶಾಂತನಾದನು ಭಕ್ತನ ಪ್ರಾರ್ಥನೆ ಮತ್ತು ನೈವೇದ್ಯಕ್ಕೆ ತೃಪ್ತಿಹೊಂದಿ ಪ್ರಸನ್ನನಾದನು ಉಳಿದದ್ದನ್ನು ಪ್ರಸಾದವಾಗಿ ಹಿಂದಿರುಗಿಸಿದನು ಇಂದಿಗೂ ಆ ಪದ್ದತಿ ನಡೆದು ಕೊಂಡು ಬಂದಿದೆ ಇನ್ನೊಂದು ವಿಚಿತ್ರ ಸಂಗತಿಯೆಂದರೆ ಅನೇಕ ಭಕ್ತರು ಪಾನಕವನ್ನು ಅರ್ಪಿಸಿ ಪ್ರಸಾದ ಹಂಚುವಾಗ ಸಾಕಷ್ಟು ಬೆಲ್ಲವಾಗಲಿ, ಬೆಲ್ಲದ ನೀರಾಲಿ ಅಲ್ಲಲ್ಲಿ ಬೀಳುವುದುಂಟು ಆದರೆ ಒಂದು ನೊಣವನ್ನಾಗಲಿ ಒಂದು ಇರುವೆಯನ್ನಾಗಲಿ ನಾವು ಕಾಣಲಾರೆವು ಇದಕ್ಕೆ ಕಾರಣ ತಿಳಿಯದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ