Posts

ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು

    ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು : ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ ಸರ್ವಭೂತದಯಾ ಪುಷ್ಪಂ ಸತ್ಯಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ಧ್ಯಾನಪುಷ್ಪಂ ತಪಃ ಪುಷ್ಪಂ ಕ್ರಿಯಾಪುಷ್ಪಂ ಆರ್ಚತಿ ತುಷ್ಯತಿ ಕೇಶವ ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ. ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ...

ಲಲಿತಾ ತ್ರಿಶತೀ - 17 ಓಂ ಕಮ್ರವಿಗ್ರಹಾಯೈ ನಮಃ

Image
ಗಾಂಭೀರ್ಯ, ಧೈರ್ಯ, ಮಾಧುರ್ಯ, ಮುಂತಾದ ಬಹು ಗುಣಗಳಿಂದ ಕೂಡಿ ಅತ್ಯಂತ ಮನೋಹರವಾದ ಮೂರ್ತಿಯುಳ್ಳವಳು. "ಆನಂದ ರೂಪಮಮೃತಂ ಯದ್ವಿಭಾತಿ" ಎಂಬ ಶ್ರುತಿಯು ಬ್ರಹ್ಮ ಸ್ವರೂಪವನ್ನು ಆನಂದ ರೂಪವೆಂದು ಭೋಧಿಸಿ ಅತಿ ಮನೋಹರತ್ವವನ್ನು ಸೂಚಿಸುತ್ತದೆ. ಆದ್ದರಿಂದ ಆನಂದ ರೂಪತ್ವದಿಂದ ಅತಿ ಮನೋಹರವಾದ ಮೂರ್ತಿಯುಳ್ಳವಳು. ಲಲಿತಾ ರೂಪಳು ಎಂದು ತಾತ್ಪರ್ಯವು, ಕಮ್ರಃ ವಿಗ್ರಹಃ ಯಸ್ಯಾಃ ಎಂದು ವಿಗ್ರಹವು (ಮುಂದುವರೆಯುವುದು...)

ಲಲಿತಾ ತ್ರಿಶತೀ -16 ಓಂ ಕಂಜಲೋಚನಾಯೈ ನಮಃ

Image

ನಂಬಿಕೆ, ಅರಿವುಗಳೆರಡೂ ಶ್ರೇಯಸ್ಸಾಧನವೇ......

    'ನಂಬು, ನಂಬು - ನಾರಾಯಣನ' ಎಂದು ಭಕ್ತರು ಹಾಡಿರುತ್ತಾರೆ. ಇಲ್ಲಿ ನಂಬಿಕೆ - ಎಂಬುದು ಯಾವದು? ನಾರಾಯಣನೆಂದರೆ ಯಾರು? ನಾರಾಯಣನೆಂದರೆ ನರರಿಗೆಲ್ಲ ಆಶ್ರಯನಾಗಿರುವ ಪರಮಾತ್ಮನು. ಪರಮಾತ್ಮನೊಬ್ಬನಿದ್ದಾನೆ; ಅವನು ನಮಗೆಲ್ಲ ಅಂತರಾತ್ಮನು. ಆತನಲ್ಲಿ ಶ್ರದ್ಧಾ ಭಕ್ತಿಗಳುಂಟಾದರೆ ನಮಗೆ ಇಹಲೋಕದಲ್ಲಿ ಸುಖವೂ ಪರದಲ್ಲಿ ಶ್ರೇಯಸ್ಸೂ ಉಂಟಾಗುತ್ತದೆ - ಎಂಬ ದೃಢವಿಶ್ವಾಸವೇ ನಂಬಿಕೆ.     ಇದೊಂದು ಮಹಾತತ್ತ್ವವು. ಇದನ್ನು ಸುಮ್ಮನೆ ನಂಬಿಕೊಂಡಿರುವದಕ್ಕೂ ಅರಿತುಕೊಳ್ಳುವದಕ್ಕೂ ಹೆಚ್ಚು ಕಡಿಮೆಯಿದೆ. ಸಮಿಪದ ಕಾಡಿನಲ್ಲಿ ಒಂದು ಹುಲಿಯಿದೆ - ಎಂದು ಆ ಊರಿನವರಿಗೆಲ್ಲ ನಂಬಿಕೆಯಿರಬಹುದು, ಆದರೆ ಕಾಡಿನಲ್ಲಿ ಕಟ್ಟಿಗೆಯನ್ನು ತರುವದಕ್ಕೆಂದು ಹೋದವನೊಬ್ಬನು ದೂರದಲ್ಲಿ ಹುಲಿಯನ್ನು ಕಂಡರೆ ಅವನಿಗೆ ಅದರ ಅರಿವೂ ಆಗುವದು. ಹೀಗೆಯೇ ಪರಮೇಶ್ವರನನ್ನು ನಂಬುವದಕ್ಕೂ ಆತನ ಸ್ವರೂಪವನ್ನು ಅರಿತುಕೊಳ್ಳುವದಕ್ಕೂ ವ್ಯತ್ಯಾಸವಿದೆ.     ನಂಬಿಕೆಯು ಅರಿವಲ್ಲವಾದರೂ ಅರಿವನ್ನು ಸಂಪಾದಿಸಿಕೊಳ್ಳುವದಕ್ಕೆ ಅದು ಒಂದು ದೊಡ್ಡ ಸಾಧನವಾಗಿರುತ್ತದೆ. ಯಾವನಿಗೆ ಭಗವಂತನ ಇರುವಿಕೆಯಲ್ಲಿ ನಂಬಿಕೆಯಿಲ್ಲವೋ ಯಾವನಿಗೆ ಭಗವಂತನಿಂದ ಪುರುಷಾರ್ಥಪ್ರಾಪ್ತಿಯಾಗುವದೆಂಬ ವಿಶ್ವಾಸವಿಲ್ಲವೋ ಅವನಿಗೆ ಭಗವಂತನನ್ನು ಅರಿತುಕೊಳ್ಳುವದು ಎಂದಿಗೂ ಸಾಧ್ಯವಿಲ್ಲ. ಅವನು ಎಂದೆಂದಿಗೂ ಭಗವಂತನನ್ನು ಅರಿಯುವದಕ್ಕೆ ಪ್ರಯತ್ನಮಾಡುವ ಸಂಭವವೂ ಇಲ್ಲ....

ನಾಗರ ಪಂಚಮಿ ವ್ರತ

Image
    ಈ ವ್ರತವನ್ನು ಶ್ರಾವಣ ಶುಕ್ಲ ಪಂಚಮಿ ದಿನ ಪ್ರತಿ ವರ್ಷವೂ ಭಕ್ತರು ಆಚರಿಸುತ್ತಾರೆ. ಉಳಿದ ಎಲ್ಲಾ ವ್ರತಗಳಿಗಿಂತಲೂ ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಮಾಡುವರು. ಅಣ್ಣ, ತಮ್ಮ, ಅಕ್ಕ, ತಂಗಿಯಂದಿರುಗಳುಳ್ಲವರು ಈ ದಿನ ಒಟ್ಟುಗೂಡಿ ನಾಗದೇವತೆಯನ್ನು ಪೂಜಿಸಿ 'ತನಿ'ಎರೆದು ತಾವೂ ಎರೆಸಿಕೊಳ್ಳುವ ಪದ್ಧತಿಯಿದೆ.     ವ್ರತಚೂಡಾಮಣಿಯಲ್ಲಿರುವಂತೆ ಹೇಮಾದ್ರಿ - ಎಂಬ ಗ್ರಂಥದ ಪ್ರಭಾಸಖಂಡದಲ್ಲಿರುವ ಭಾಗವೇ ಈ ವ್ರತಕ್ಕೆ ಮೂಲಪ್ರಮಾಣವು. ಅದರಲ್ಲಿ ಶ್ರಾವಣ ಶುಕ್ಲ ಪಂಚಮಿಯ ಷಷ್ಠೀಯುಕ್ತವಾಗಿದ್ದ ದಿನ ನಾಗಪೂಜೆಯನ್ನು ಮಾಡಬೇಕೆಂದೂ ನಾಗಗಳಲ್ಲದ ಸರ್ಪಗಳ ಪೂಜೆಗೆ ಚತುರ್ಥೀ ತಿಥಿಯು ಶ್ರೇಷ್ಠವೆಂದೂ ಹೇಳಿದೆ. ಸಾಮಾನ್ಯವಾಗಿ ಹೆಡೆಯುಳ್ಳ ಹಾವುಗಳನ್ನು ನಾಗಗಳೆಂದೂ ಉಳಿದ ಜಾತಿಯ ಹಾವುಗಳನ್ನು ಸರ್ಪಗಳೆಂದೂ ಕರೆಯುತ್ತಾರೆ. ಹೀಗೆ ನಾಗಪೂಜೆಯನ್ನು ಮಾಡುವವನು ಚತುರ್ಥೀ ದಿನ ಬೆಳಗ್ಗೆ ನಿರಾಹಾರನಾಗಿದ್ದು ರಾತ್ರೆ ಭೋಜನಮಾಡಿ ಪಂಚಮಿ ದಿನ ನಾಗಪೂಜೆಯನ್ನು ಮಾಡಬೇಕು. ಐದು ಹೆಡೆಗಳುಳ್ಳ ಐದು ಹಾವುಗಳನ್ನು ಪೂಜಿಸಬೇಕು. ಇವುಗಳನ್ನು ಬೆಳ್ಳಿಯಿಂದ ಅಥವಾ ಮರದಿಂದ ಮಾಡಿ ಬಿಳಿಯ ಬಣ್ಣವನ್ನು ಹಾಕಿ ಸಿದ್ಧಗೊಳಿಸಿದ ಅಥವಾ ಮಣ್ಣಿನಿಂದ ಮಾಡಿದ ಬಿಂಬಗಳಲ್ಲಿ ಅಥವಾ ರಂಗೋಲಿಯಲ್ಲಿ ಚಿತ್ರವನ್ನು ಬರೆದು ಅರ್ಚಿಸಬೇಕು. ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ - ಮುಂತಾದ ಸುಪ್ರಸಿದ್ಧ ನಾಗಗಳನ್ನು ಈ ಪೂಜೆಯಲ್ಲಿ ಆಹ್ವಾನಿಸಬೇಕು. ಅರಿಸ...

ಶನೈಶ್ಚರ

Image
    ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು.     'ಶನಿ...

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

Image
ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥     ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥     (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ...