Posts

ಮಾನವ ಜನಾಂಗದ ಮೊಟ್ಟಮೊದಲ ತಾಯಿ "ಶತರೂಪ"

Image
    ಶತರೂಪಾಳು ಮಾನವ ಜನಾಂಗದ ಮೊಟ್ಟಮೊದಲ ತಾಯಿಯಾಗಿ, ಆದಿಮಾತೆಯಾಗಿದ್ದಾಳೆ. ಈಕೆಯು ಸ್ವಯಂಭು ಮನುವಿನ ಪತ್ನಿ. ಮನು ಮತ್ತು ಶತರೂಪಾರವರುಗಳಿಂದಲೆ ಮಾನವ ಸೃಷ್ಟಿಯ ಆರಂಭವಾಯಿತು. 'ತತೋ ಮನುಷ್ಯಾ ಅಜಾಯಂ ತಾಃ' ಎಂದ ಶ್ರುತಿಯು ಹೇಳುತ್ತದೆ.     ಮನು ಮತ್ತು ಶತರೂಪಾ ಇವರಿಬ್ಬರು ಬ್ರಹ್ಮನ ಶರೀರದಿಂದ ಹುಟ್ಟಿದವರು. ಅವನ ಎಡಭಾಗದಿಂದ ಮನು ಮತ್ತು ಬಲ ಭಾಗದಿಂದ ಶತರೂಪಾರವರುಗಳು ಪ್ರಾದುರ್ಭಾವಗೊಂಡರು. ಕೇವಲ ಮಾನವನೇ ಅಲ್ಲ, ನೂರಾರು ಸಾವಿರಾರು ಪ್ರಾಣಿಗಳೂ ಕೂಡ ಇವರಿಬ್ಬರುಗಳ ಸಂತಾನವಾಗಿದೆ - ಎಂದು ಬೃಹದಾರಣ್ಯಕ ಉಪನಿಷತ್ತು ಹೇಳುತ್ತದೆ.     ಶತರೂಪಾಳು ಬಹಳ ಮುಗ್ಧ ಸ್ವಭಾವದ, ಲಜ್ಜೆಯನ್ನು ಹೊಂದಿದ್ದ ಹೆಣ್ಣಾಗಿದ್ದಳು, ಮುಂದೆ ಜಗತ್ತಿನಲ್ಲಿ ಹೆಣ್ಣು ಎಂಬುವಳು ಹೀಗೆಯೇ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಳು.     ಶತರೂಪಾಳು ತನ್ನ ಇಷ್ಟದಂತೆ ಯಾವ ರೂಪವನ್ನು ಬೇಕಾದರೂ ಪಡೆಯುವವಳಾಗಿದ್ದಳು. ಮನುವನ್ನು ಸಂಧಿಸಬೇಕಾದ ಪ್ರಥಮ ಸಮಾಗಮದ ಸಮಯದಲ್ಲಿ ಆಕೆಯು ನೂರಾರು ರೂಪಗಳನ್ನು ಧರಿಸಿದಳು. ಈ ರೀತಿಯಲ್ಲಿ ಆಕೆ ಮನುವಿನ ದೃಷ್ಟಿಯಿಂದ ಬಚ್ಚಿಟ್ಟಕೊಳ್ಳಲು ಪ್ರಯತ್ನಿಸಿದಳು ಆದರೆ ಮನುವು ಅವಳನ್ನು ಎಲ್ಲ ರೂಪಗಳಲ್ಲಿಯೂ ಕಂಡುಹಿಡಿದು, ಅವಳು ಯಾವ ರೂಪವನ್ನು ಪಡೆಯುವಳೋ ಅದೇ ರೂಪವನ್ನು ತಾನೂ ಪಡೆದು ಅವಳನ್ನು ಸಂಧಿಸಿದನು.     ಈ ರೀತಿಯಲ್ಲಿ ನೂರಾರು ರೂ...

ಪರಶುರಾಮನ 41 ಅಸ್ತ್ರಗಳು

ವಿಷ್ಣುಧರ್ಮೋತ್ತರ ಪುರಾಣದಲ್ಲಿ ಹೇಳಿರುವಂತೆ ಪರಶುರಾಮನ 41 ಅಸ್ತ್ರಗಳು. 1) ಬ್ರಹ್ಮಾಸ್ತ್ರ 2) ವೈಷ್ಣವಾಸ್ತ್ರ 3) ರೌದ್ರಾಸ್ತ್ರ 4) ಆಗ್ನೇಯಾಸ್ತ್ರ 5) ವಾಸವಾಸ್ತ್ರ 6) ನೈಋತ್ಯಾಸ್ತ್ರ 7) ಯಾಮ್ಯಾಸ್ತ್ರ 8) ಕೌಬೇರಾಸ್ತ್ರ 9) ವಾರುಣಾಸ್ತ್ರ 10) ವಾಯವ್ಯಾಸ್ತ್ರ 11) ಸೌಮ್ಯಾಸ್ತ್ರ 12) ಸೌರಾಸ್ತ್ರ 13) ಪಾರ್ವತಾಸ್ತ್ರ 14) ಚಕ್ರ 15) ವಜ್ರ 16) ಪಾಶ 17) ಸರ್ಪಾಸ್ತ್ರ 18) ಗಾಂಧರ್ವಾಸ್ತ್ರ 19) ಸ್ವಾಪನಾಸ್ತ್ರ 20) ಭೌತಾಸ್ತ್ರ 21) ಪಾಶುಪತಾಸ್ತ್ರ 22) ಐಶಿಕಾಸ್ತ್ರ 23) ತರ್ಜನಾಸ್ತ್ರ 24) ಪ್ರಾಸಾಸ್ತ್ರ 25) ಗಾರುಡಾಸ್ತ್ರ 26) ನರ್ತನಾಸ್ತ್ರ 27) ಅಸ್ರರೋಧನ 28) ಆದಿತ್ಯಾಸ್ತ್ರ 29) ರೈವತಾಸ್ತ್ರ 30) ಮಾನವಾಸ್ತ್ರ 31) ಅಕ್ಷಿಸಂತರ್ಜನಾಸ್ತ್ರ 32) ಭೀಮಾಸ್ತ್ರ 33) ಜುಂಭ್ರಣಾಸ್ತ್ರ 34) ರೋಧನಾಸ್ತ್ರ 35) ಸೌಪರ್ಣಾಸ್ತ್ರ 36) ಪರ್ಜನ್ಯಾಸ್ತ್ರ 37) ರಾಕ್ಷಸಾಸ್ತ್ರ 38) ಮೋಹನಾಸ್ತ್ರ 39) ಕಾಲಾಸ್ತ್ರ 40) ದಾನವಾಸ್ತ್ರ 41) ಬ್ರಹ್ಮಶಿರಸಾಸ್ತ್ರ

ಸೆರಗಿನಲ್ಲಿ ಗಂಟುಹಾಕಿ

    ಒಮ್ಮೆ ಸಾತ್ಯಕಿ, ಅರ್ಜುನ, ಕೃಷ್ಣ ಈ ಮೂವರೂ ಸೇರಿ ಒಂದು ಕಾಡಿನಲ್ಲಿ ಸಂಚರಿಸುತ್ತಿರುವಲ್ಲಿ ದಾರಿ ತಪ್ಪಿದರೂ. ಕಗ್ಗತ್ತಲೆಯಲ್ಲಿ ತಂಗುವದಕ್ಕೆ ಮತ್ತೆಯಾವ ಸ್ಥಲವೂ ಸಿಕ್ಕದೆ ಒಮದು ಮರದ ಮೇಲೆಯೇ ಮಲಗಿರಬೇಕಾಯಿತು. ಹಿಂಸ್ರಮೃಗಗಳ ಭೀತಿಯಿರುವದೆಂಬ ಕಾರಣದಿಂದ ತಮ್ಮೊಳಗೆ ಇಬ್ಬರು ನಿದ್ರಿಸುತ್ತಿರುವಲ್ಲಿ ಮೂರನೆಯವನೊಬ್ಬನು ಎಚ್ಚರವಾಗಿರಬೇಕೆಂದು ಏರ್ಪಡಿಸಿಕೊಂಡರು.     ಸಾತ್ಯಕಿಉ ಮೊದಲನೆಯ ಕಾವಲುಗಾರನಾದನು. ಅವನು ತನ್ನ ಸರದಿಯು ಮುಗಿದಕೂಡಲೆ ಅರ್ಜುನನ್ನು ದಡಕ್ಕನೆ ಎಬ್ಬಿಸಿದನು "ಯಾವದಾದರೂ ಪ್ರಾಣಿಯು ಬಂದಿತ್ತೇನು?" ಎಂದು ಅರ್ಜುನನು ಕೇಳಿದ್ದಕ್ಕೆ ಸಾತ್ಯಕಿಯು ಪಿಸುಮಾತಿನಲ್ಲಿ "ದೆವ್ವ ದೆವ್ವ! " ಎಂದನು. ಅರ್ಜುನನು " ಛೇ! ಹುಚ್ಚ, ಎಂಥ ಮಾತಿದು!" ಎನ್ನಲು, "ಹಾಸ್ಯದ ಮಾತಲ್ಲವಯ್ಯ, ನಾನು ಎಷ್ಟೇ ಪ್ರಯತ್ನಮಾಡಿದರೂ ಅದನ್ನು ಓಡಿಸುವದಾಗಲಿಲ್ಲ. ಹೇಗಾದರೂ ಆಗಲಿ, ಈಗ ನೀನೇ ನೋಡುವೆಯಲ್ಲ!" ಎಂದು ಸಾತ್ಯಕಿಯು ಮಲಗಿಕೊಂಡುಬಿಟ್ಟನು.     ಅರ್ಜುನನು ಧನುರ್ಧಾರಿಯಾಗಿ ಕಾವಲಿಗೆ ನಿಂತನು. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಭಯಂಕರವಾದ ಕುಳ್ಳ ಆಕೃತಿಯು ಕಾಣಿಸಿಕೊಂಡಿತು, ಅರ್ಜುನನನ್ನು ಕೆಳಗೆ ಇಳಿಯುವಂತೆ ಸನ್ನೆಮಾಡಿತು. "ಎಲಾ, ಯಾರೋ ನೀನು? ಏನಾಗಬೇಕು ನಿನಗೆ ?" ಎಂದು ಅರ್ಜುನನು ಗರ್ಜಿಸಿದನು. "ನಾನು ಈ ಮರದಲ್ಲಿರುವ ದೆವ್ವವು, ಇಲ್ಲಿ ನೀವಿರಬಾರದು. ಕೂಡಲೆ ಹೊರಡಿರಿ...

ಕಣ್ಣೀರಿನ ಅಳತೆಯಿಂದ ದುಃಖದ ಪ್ರಮಾಣ ಅಳೆಯಲು ಸಾಧ್ಯವೇ?

Image
    ಭೌತಿಕವಿಜ್ಞಾನದ ಪ್ರಯೋಜನಗಳನ್ನು ಪ್ರತ್ಯಕ್ಷವಾಗಿ ಪಡೆದುಕೊಂಡು ನವನಾಗರಿಕತೆಯ ಹೆಸರಿನಲ್ಲಿ ದೇಹಾತ್ಮಬುದ್ಧಿಯನ್ನೇ ದೃಢಪಡಿಸಿಕೊಂಡು ಇಂದ್ರಿಯಲೋಲುಪರಾಗಿ ಬಾಳುತ್ತಿರುವ ಈಗಿನ ಜನರಿಗೆ ವೇದಾಂತವೆಂದರೆ ಒಂದು ಬಗೆಯ ಔದಾಸೀನ್ಯವುಂಟಾಗುವದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಭೋಗಾಸಕ್ತಿ, ಪ್ರಾಪಂಚಿಕಸುಖಗಳಲ್ಲಿ ಭಾರತೀಯರನ್ನು ಹಿಂದಕ್ಕೆ ಹಾಕಿ ಉತ್ತುಂಗಶಿಖರವನ್ನೇರಿರುವ ಪಾಶ್ಚಾತ್ತ್ಯರೂ ಇತ್ತೀಚಿಗೆ ಅದೇಕೋ, ವೇದಾಂತದಕಡೆಗೆ ತಿರುಗುತ್ತಿರುವದನ್ನು ನೋಡಿದರೆ ವಿಚಾರವಂತರಾದವರಿಗೆ ಭೌತಿಕವಿಜ್ಞಾನದಲ್ಲಿ ಏನೋ ಕೊರತೆಯಿರಬೇಕು; ಅದರಿಂದ ಸಿಗಲಾರದ ಸುಖವು ವೇದಾಂತದಿಂದ ದೊರಕಬಹುದು - ಎಂದು ಅನಿಸಿರಬೇಕು. ಈ ಸಂದರ್ಭದಲ್ಲಿ ಭೌತಿಕವಿಜ್ಞಾನದ ಪರಿಮಿತಿಯನ್ನೂ ಅದರ ಶೋಧಗಳ ಪರಿಣಾಮವನ್ನೂ ಕುರಿತು ವಿಚಾರಮಾಡುವದು ವೇದಾಂತದಕಡೆಗೆ ಅಭಿರುಚಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತದೆ ಎಂದು ಭಾವಿಸಬಹುದು.     ಮೇಲುನೋಟಕ್ಕೆ ಭೌತಿಕವಿಜ್ಞಾನವು ಮಾನವನಿಗೆ ಬಹಳ ಉಪಕಾರಿಯಾಗಿರುವದರಲ್ಲಿ ಸಂಶಯವಿಲ್ಲ. ಈ ವಿಜ್ಞಾನದ ಬಲದಿಂದ ಮಾನವನು ತನ್ನ ಆಹಾರ, ವಿಹಾರ, ವಿಚಾರ, ಸಮಾಜ, ಆರೋಗ್ಯ, ವಿದ್ಯಾಭ್ಯಾಸ, ಆರ್ಥಿಕ, ರಾಜಕೀಯವೇ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದ್ದಾನೆ ಮತ್ತು ಈ ವಿಜ್ಞಾನವು ಬರಿಯ ಆಕಾಶಪುರಾಣದಂತಲ್ಲ ಇದು ತನ್ನ ಶೋಧಗಳ ಫಲವನ್ನು ಮಾನವನ ಜೀವಿತಕಾಲದಲ್ಲಿಯೇ ಒದಗಿಸಿಕೊಟ್ಟಿದೆ. ಇಷ್ಟೇ ಅ...

ಶ್ರೀ ಯದುಗಿರಿನಾಯಿಕಾ ಸುಪ್ರಭಾತಂ

Image
ಶ್ರೀಯಾದವಕ್ಷಿತಿಭೃದೀಶವಿಶಾಲವಕ್ಷಃ ಸೌಢಾಂತರೋಜ್ಜ್ವಲಮನೋಹರದಿವ್ಯಮೂರ್ತೇ | ಕ್ಷೀರಾಂಬುಧಿಪ್ರಿಯಸುತೇ! ಪ್ರಣತೇಷ್ಟದಾತ್ರಿ ! ಯದ್ವದ್ರಿನಾಥದಯಿತೇ ! ತವ ಸುಪ್ರಭಾತಂ ||1|| ಕಲ್ಯಾಣತೀರ್ಥಮವಗಾಹ್ಯ ಸುತೀರ್ಥಪೂರ್ಣ ಸೌವರ್ಣಭದ್ರಕಲಶಾನ್ ಶಿರಸಾ ವಹಂತಃ | ತಿಷ್ಠಂತಿ ವೈದಿಕಶಿಖಾಮಣಯಃ ಪ್ರಹೃಷ್ಟಾ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||2|| ಏತೇಪಿ ನಾರದಮುಖಾಸ್ಸುರವೈಣಿಕಾಶ್ಚ ತ್ವತ್ಪಾದಪಂಕಜವಿಲೀನನಿಜಾಂತರಂಗಾಃ | ಗಾಯಂತಿ ತೇ ಗುಣಗಣಾನ್ನಿಗಮಾಂತಗಮ್ಯಾನ್ ಯದ್ವದ್ರಿನಾಥದಯತೇ! ತವ ಸುಪ್ರಭಾತಂ ||3|| ಇಂದ್ರಾನಲಾಂತಕಮುಖಾಶ್ಚ ದಿಶಾಮಧೀಶಾಃ ಸಂಪ್ರಾಪಿತೋನ್ನತಪದಾಸ್ತ್ವದಪಾಂಗಲೇಶೈಃ | ತ್ವಾಂ ಸಂಸ್ತುವಂತಿ ವಿಹಿತಾಂಜಲಯಃ ಪ್ರಕಾಮಂ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||4|| ದೇವಿ! ತ್ವಯಾ ಸುಚರಿತಸ್ಯ ಸುತೇ ಪ್ರಸಾದಾ- ದ್ಯಾದೃಗ್ವಿಧಾಃ ಪ್ರಕಟಿತಾಃ ಕರುಣಾತರಂಗಾಃ | ತಾದೃಗ್ವಿಧಾನಿಹ ತರಂಗಯ ಮಯ್ಯಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||5|| ಯೈರುನ್ನತಿಂ ಸಮಗಮನ್ನ ಚ ಶಂಕರಾದ್ಯಾಃ ಯಾನೀಹತೇ ಹರಿರಪಿ ತ್ರಿಜಗದ್ವಿಧಾನೇ | ಮಾತಸ್ತ್ವಮದ್ಯ ಸಮುದಂಚಯ ತಾನಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||6|| ಸದ್ಯಃ ಪ್ರಫುಲ್ಲಕರಪದ್ಮಗಳನ್ಮಧೂಲ- ಪಾನೋನ್ಮುಖಾ ಮಧುಕರಾಸ್ತವ ಸುಪ್ರಭಾತಂ | ಶಂಸಂತಿ ಝಂಕೃತಿಮಿಷೇಣ ಕಿಲಾದ್ಯ ದೇವಿ! ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||7|| ಕರ್ಣಾವತಂಸಿತಸರೋಜಯುಗೇ ಪ್ರಫುಲ್ಲೇ ಸದ್ಯಸ್ಸಮುನ್ಮಿಷ...

ಪ್ರದಕ್ಷಿಣೆಯ ರಹಸ್ಯ

Image
    "ಮರವ ಕಂಡಲ್ಲಿ ಸುತ್ತುವರಯ್ಯಾ" ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವುಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮುರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾಲ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ.     ಬಲಗೈಯನ್ನು ಇಳಿ...

ಶ್ರೀಬ್ರಹ್ಮಚೈತನ್ಯಾಷ್ಟಕ (ಕುರ್ತಕೋಟಿಯ ಶ್ರೀಮಹಾಭಗವತರವರ ಅನುಗ್ರಹಿಸಿರುವ ಗ್ರಂಥದಿಂದ )

Image
ಜನ್ಮಾದ್ಯಸ್ಯ ಯತಸ್ತಥಾಪಿ ಯ ಇಹ ಗ್ರಾಮೇ ತು ಗೋನ್ದಾವಲೌ ಸಂಭೂತಃ ಖಲು ಭೂಸುರೀಯಸುಕುಲೇ ಲೋಕೋದ್ದಿಧೀರ್ಷಾ ವಶಾತ್ || ಯಶ್ಚಾನನ್ದಮಯೋಪಿ ಮೂರ್ತಕೃಪಯಾ ದೇಹೀವ ಮೂರ್ತ್ಯಾನಯಾ | ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||1|| ಈ ಪ್ರಪಂಚದ ಜನ್ಮಸ್ಥಿತಿಲಯಗಳು ಯಾವಾತನಿಂದಲೇ ಆಗುವವೋ, ಆದರೂ ಯಾವಾತನು ಲೋಕವನ್ನು ಉದ್ಧಾರಮಾಡಬೇಕೆಂಬ ಇಚ್ಛೆಯಿಂದ ಗೋಂದಾವಲಿಯೆಂಬ ಗ್ರಾಮದಲ್ಲಿ ಬ್ರಾಹ್ಮಣಕುಲದಲ್ಲಿ ಹುಟ್ಟಿದನೋ, ಯಾವಾತನು ಆನಂದ ಸ್ವರೂಪನೇ ಆದರೂ ದೇಹಿಗಳ ಮೇಲಿನ ಕೃಪೆಯಿಂದ ಈ ಶರೀರವನ್ನು ತೆಗೆದುಕೊಂಡು ದೇಹಿಯಂತೆ ತೋರಿಕೊಳ್ಳುತ್ತಿರುವನೋ ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಭಜಿಸುತ್ತೇನೆ. ಗತ್ವಾನಿರ್ವಚನೀಯಮೇಕಮಪಿ ಯಂ ಶ್ರೀಬ್ರಹ್ಮಚೈತನ್ಯಸ- ನ್ನಾಮಾಪಾರಮರಪಣ್ಡಿತಾನ್ತಮಮಿತೈಃ ಸಪ್ರೇಮ ಸಂಗೀಯತೇ | ಯಶ್ಚಶ್ರೀ ಪುರುಷೋತ್ತಮೋಪಿ ವಿದಿತಃ ಸತ್ಪೂರುಷಃ ಸಾಂಪ್ರತಂ ಸಾಷ್ಟಾಂಗ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||2|| ಇಂಥ ಸ್ವರೂಪದವನೆಂದು ಹೇಲಲಿಕ್ಕೆ ಬಾರದಿರುವ ಯಾವ ಒಬ್ಬನನ್ನು ಪಾಮರರಿಂದ ಹಿಡಿದು ಪಂಡಿತರವರೆಗೂ ಲೆಕ್ಕವಿಲ್ಲದಷ್ಟು ಜನರು ಸೇರಿ, ಶ್ರೀಬ್ರಹ್ಮ ಚೈತನ್ಯನೆಂಬ ಒಂದು ನಾಮವನ್ನೇ ಪ್ರೇಮದಿಂದೂಡಗೂಡಿ ಗಾನಮಾಡುತ್ತಿರುವರೋ, ಯಾವಾತನು ಶ್ರೀ ಪುರುಷೋತ್ತಮನಾದ ಶ್ರೀಮಹಾವಿಷ್ಣುವೇ ಆದರೂ ಈಗ ಸತ್ಪುರುಷನೆಂಬ ಹೆಸರಿಂದ ಪ್ರಖ್ಯಾತಿಯನ್ನು ಹೊಂದಿರುವನೋ, ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್...