ಹರಿಯೇ ಸರ್ವೋತ್ತಮನು (ಶ್ರೀಮಧ್ವಾಚಾರ್ಯರವರ ಕೃತಿ)
ಕುರು ಭುಙ್ಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಮ್ | ಹರಿರೇವ ಪರೋ ಹರಿರೇವ ಗುರು ರ್ಹರಿರೇವ ಜಗತ್ಪಿತೃಮಾತೃಗತಿಃ ||1|| ಯಾವಾಗಲೂ ಶ್ರೀಹರಿಯ ಪಾದಕ್ಕೆರಗಿದ ಬುದ್ಧಿಯಿಂದೊಡಗೂಡಿ ಸ್ವಕರ್ಮವನ್ನು ಮಾಡಿ ಫಲವನ್ನನುಭವಿಸುತ್ತಿರು. ಹರಿಯೇ, ಸರ್ವೋತ್ತಮನು, ಹರಿಯೇ ಗುರುವು, ಹರಿಯೇ ಜಗತ್ತಿಗೆ ತಂದೆಯು, ತಾಯಿಯು, ಗತಿಯು. ನ ತತೋಸ್ತ್ಯಪರಂ ಜಗತೀಡ್ಯತಮಂ ಪರಮಾತ್ಪರತಃ ಪುರುಷೋತ್ತಮತಃ | ತದಲಂ ಬಹುಲೋಕವಿಚಿನ್ತನಯಾ ಪ್ರವಣಂ ಕುರು ಮಾನಸಮಿಶಪದೇ ||2|| ಜಗತ್ತಿನಲ್ಲಿ ಪರಾತ್ಪರನಾದ ಆ ಪುರುಷೋತ್ತಮನಿಗಿಂತಲೂ ಹೆಚ್ಚಾಗಿ ಸ್ತೋತ್ರಕ್ಕೆ ತಕ್ಕದ್ದು ಮತ್ತೊಂದು ಇಲ್ಲ ಆದ್ದರಿಂದ ಲೋಕಚಿಂತೆಯನ್ನು ಬಹುವಾಗಿ ಹಚ್ಚಿಕೊಳ್ಳುವದನ್ನು ಸಾಕುಮಾಡು ಈಶ್ವರನ ಪಾದದಲ್ಲಿಯೇ ಮನಸ್ಸನ್ನು ತಿರುಗಿಸಿಕೊ. ಯತತೋಪಿ ಹರೇಃ ಪದಸಂಸ್ಮರಣೇ ಸಕಲಂ ಹ್ಯಘಮಾಶು ಲಯಂ ವ್ರಜತಿ | ಸ್ಮರತಸ್ತು ವಿಮುಕ್ತಿಪದಂ ಪರಮಂ ಸ್ಫುಟಮೇಷ್ಯತಿ ತತ್ಕಿಮಪಾಕ್ರಿಯತೇ ||3|| ಹರಿಯ ಪಾದದ ನೆನಹಿಗೆಂದು ಪ್ರಯತ್ನಮಾಡಿದರೂ ಸಾಕು, ಅಂಥವನ ಪಾಪವೆಲ್ಲವೂ ಲಯವಾಗುವದು; ಸ್ಮರಣೆಯನ್ನೇ ಮಾಡುವವನಿಗಂತೂ ಎಲ್ಲಕ್ಕೂ ಹೆಚ್ಚಿನ ಮೋಕ್ಷ ಸ್ಥಾನವು ತಾನೇ ದೊರಕುವದು. ಇಂಥ ಸ್ಮರಣೆಯನ್ನು ಬಿಡುವದೇಕೆ? ಶೃಣುತಾಮಲಸತ್ಯವಚಃ ಪರಮಂ ಶಪಥೇರಿತಮುಚ್ಛ್ರಿತಬಾಹುಯುಗಮ್ | ನ ಹರೇಃ ಪರಮೋ ನ ಹರೇಃ ಸದೃಶಃ ಪರಮಂ ಸ ತು ಸರ್ವಚಿದಾತ್ಮಗಣಾತ್ ||4|| ಶಪಥಪೂರ್ವಕವಾಗಿ ಎರಡು ಕೈಗಳನ್ನೂ ಎತ್ತಿ ಸಾರಿಹೇಳಿದ ಈ ನಿರ್ದುಷ...