ಹರಿಯೇ ಸರ್ವೋತ್ತಮನು (ಶ್ರೀಮಧ್ವಾಚಾರ್ಯರವರ ಕೃತಿ)

ಕುರು ಭುಙ್ಕ್ಷ್ವ ಚ ಕರ್ಮ ನಿಜಂ ನಿಯತಂ
ಹರಿಪಾದವಿನಮ್ರಧಿಯಾ ಸತತಮ್ |
ಹರಿರೇವ ಪರೋ ಹರಿರೇವ ಗುರು
ರ್ಹರಿರೇವ ಜಗತ್ಪಿತೃಮಾತೃಗತಿಃ ||1||
ಯಾವಾಗಲೂ ಶ್ರೀಹರಿಯ ಪಾದಕ್ಕೆರಗಿದ ಬುದ್ಧಿಯಿಂದೊಡಗೂಡಿ ಸ್ವಕರ್ಮವನ್ನು ಮಾಡಿ ಫಲವನ್ನನುಭವಿಸುತ್ತಿರು. ಹರಿಯೇ, ಸರ್ವೋತ್ತಮನು, ಹರಿಯೇ ಗುರುವು, ಹರಿಯೇ ಜಗತ್ತಿಗೆ ತಂದೆಯು, ತಾಯಿಯು, ಗತಿಯು.

ನ ತತೋಸ್ತ್ಯಪರಂ ಜಗತೀಡ್ಯತಮಂ
ಪರಮಾತ್ಪರತಃ ಪುರುಷೋತ್ತಮತಃ |
ತದಲಂ ಬಹುಲೋಕವಿಚಿನ್ತನಯಾ
ಪ್ರವಣಂ ಕುರು ಮಾನಸಮಿಶಪದೇ ||2||
ಜಗತ್ತಿನಲ್ಲಿ ಪರಾತ್ಪರನಾದ ಆ ಪುರುಷೋತ್ತಮನಿಗಿಂತಲೂ ಹೆಚ್ಚಾಗಿ ಸ್ತೋತ್ರಕ್ಕೆ ತಕ್ಕದ್ದು ಮತ್ತೊಂದು ಇಲ್ಲ ಆದ್ದರಿಂದ ಲೋಕಚಿಂತೆಯನ್ನು ಬಹುವಾಗಿ ಹಚ್ಚಿಕೊಳ್ಳುವದನ್ನು ಸಾಕುಮಾಡು ಈಶ್ವರನ ಪಾದದಲ್ಲಿಯೇ ಮನಸ್ಸನ್ನು ತಿರುಗಿಸಿಕೊ.

ಯತತೋಪಿ ಹರೇಃ ಪದಸಂಸ್ಮರಣೇ
ಸಕಲಂ ಹ್ಯಘಮಾಶು ಲಯಂ ವ್ರಜತಿ |
ಸ್ಮರತಸ್ತು ವಿಮುಕ್ತಿಪದಂ ಪರಮಂ
ಸ್ಫುಟಮೇಷ್ಯತಿ ತತ್ಕಿಮಪಾಕ್ರಿಯತೇ ||3||
ಹರಿಯ ಪಾದದ ನೆನಹಿಗೆಂದು ಪ್ರಯತ್ನಮಾಡಿದರೂ ಸಾಕು, ಅಂಥವನ ಪಾಪವೆಲ್ಲವೂ ಲಯವಾಗುವದು; ಸ್ಮರಣೆಯನ್ನೇ ಮಾಡುವವನಿಗಂತೂ ಎಲ್ಲಕ್ಕೂ ಹೆಚ್ಚಿನ ಮೋಕ್ಷ ಸ್ಥಾನವು ತಾನೇ ದೊರಕುವದು. ಇಂಥ ಸ್ಮರಣೆಯನ್ನು ಬಿಡುವದೇಕೆ?

ಶೃಣುತಾಮಲಸತ್ಯವಚಃ ಪರಮಂ
ಶಪಥೇರಿತಮುಚ್ಛ್ರಿತಬಾಹುಯುಗಮ್ |
ನ ಹರೇಃ ಪರಮೋ ನ ಹರೇಃ ಸದೃಶಃ
ಪರಮಂ ಸ ತು ಸರ್ವಚಿದಾತ್ಮಗಣಾತ್ ||4||
ಶಪಥಪೂರ್ವಕವಾಗಿ ಎರಡು ಕೈಗಳನ್ನೂ ಎತ್ತಿ ಸಾರಿಹೇಳಿದ ಈ ನಿರ್ದುಷ್ಟವಾದ ಹೆಚ್ಚಿನ ಸತ್ಯವಚನವನ್ನು ಕೇಳಿರಿ: ಹರಿಗಿಂತ ಹೆಚ್ಚಿನವನು ಇಲ್ಲ ಹರಿಗೆ ಸಮನಾದವನೂ ಇಲ್ಲ; ಆತನೇ ಎಲ್ಲಾ ಜೀವಸಮೂಹಕ್ಕಿಂತಲೂ ಉತ್ಕೃಷ್ಟನು.

ಯದಿ ನಾಮ ಪರೋ ನ ಭವೇತ್ಸು ಹರಿಃ
ಕಥಮಸ್ಯ ವಶೇ ಜಗದೇತದಭೂತ್ |
ಯದಿ ನಾಮ ನ ತಸ್ಯ ವಶೇ ಸಕಲಂ
ಕಥಮೇವ ತು ನಿತ್ಯಸುಖಂ ನ ಭವೇತ್ ||5||
ಆ ಹರಿಯು ಸರ್ವೋತ್ತಮನಲ್ಲದಿದ್ದರೆ, ಈ ಜಗತ್ತೆಲ್ಲವೂ ಆತನ ವಶವಾದದ್ದು ಹೇಗೆ? ಇದೆಲ್ಲವೂ ಆತನ ವಶದಲ್ಲಿಲ್ಲವೆಂದರೆ ಇದರಲ್ಲಿ ನಿತ್ಯಸುಖವೇತಕ್ಕಿಲ್ಲ?

ನ ಚ ಕರ್ಮ ವಿಮಾಮಲ ಕಾಲಗುಣ
ಪ್ರಭೃತೀಶಮಚಿತ್ತನು ತದ್ಧಿ ಯತಃ |
ಚಿದಚಿತ್ತನು ಸರ್ವಮಸೌ ತು ಹರಿ
ರ್ಯಮಯೇದಿತಿ ವೈದಿಕಮಸ್ತಿ ವಚಃ ||6||
ಕರ್ಮ, ಅವಿದ್ಯೆ, ಪಾಪ, ಕಾಲ, ತ್ರಿಗುಣ, ಇವು ಯಾವವೂ ಸ್ವತಂತ್ರ ಕಾರಣವಲ್ಲ; ಏಕೆಂದರೆ ಇದೆಲ್ಲವೂ ಜಡಸ್ವರೂಪವಾಗಿರುವದು. ಈ ಹರಿಯೋ ಎಂದರೆ ಚೇತನಾ ಚೇತನರೂಪವಾದ ಪ್ರಪಂಚವೆಲ್ಲವನ್ನೂ ಆಳುವನೆಂಬ ಶ್ರುತಿವಚನವಿರುವದು.

ವ್ಯವಹಾರಭಿದಾಪಿ ಗುರೋರ್ಜಗತಾಂ
ನ ತು ಚಿತ್ತಗತಾ ಸ ಹಿ ಚೋದ್ಯಪರಮ್ |
ಬಹವಃ ಪುರುಷಾಃ ಪುರುಷಪ್ರವರೋ
ಹರಿರಿತ್ಯವದತ್ಯ್ವಯಮೇವ ಹರಿಃ |||7||
ಭೇದವು ವ್ಯಾವಹಾರಕವೆಂಬುದೂ ಜಗದ್ಗುರುವಾದ ವೇದವ್ಯಾಸದೇವರಿಗೆ ಸಮ್ಮತವಲ್ಲ; ಏಕೆಂದರೆ ಈ ವಿಷಯದಲ್ಲಿ ಪ್ರಶ್ನೆಯನ್ನು ಮಾಡಲಾಗಿ, "ಪುರುಷರು ಅನೇಕ, ಹರಿಯು ಪುರುಷೋತ್ತಮನು' ಎಂದು ವೇದವ್ಯಾಸರೂಪನಾದ ಆ ಹರಿಯೇ ಹೇಳಿರುತ್ತಾನೆ.

ಚತುರಾನನಪೂರ್ವವಿಮುಕ್ತಗಣಾ
ಹರಿಮೇತ್ಯ ತು ಪೂರ್ವವದೇವ ಸದಾ |
ನಿಯತೋಚ್ಚವಿನೀಚತಯೈವ ನಿಜಾಂ
ಸ್ಥಿತಿಮಾಪುರಿತಿ ಸ್ಮ ಪರಂ ವಚನಮ್ ||8||
ಬ್ರಹ್ಮನೇ ಮೊದಲಾದ ಮುಕ್ತರು ಹರಿಯನ್ನು ಹೊಂದಿಯೂ ಮನ್ನಿನಂತೆಯೇ ಯಾವಾಗಲೂ ತಾರತಮ್ಯದಿಂದಲೇ ಇದ್ದುಕೊಂಡು ತಮ್ಮ ತಮ್ಮ ಸ್ವರೂಪಾನಂದವನ್ನು ಹೊಂದುವರು ಎಂದು ಹೆಚ್ಚಿನ ಶಾಸ್ತ್ರವಚನವಿರುವದು.

ಆನನ್ದತೀರ್ಥಸನ್ನಾಮ್ನಾ ಪೂರ್ಣಪ್ರಜ್ಞಾಭಿಧಾಯುಜಾ |
ಕೃತಂ ಹರ್ಯಷ್ಟಕಂ ಭಕ್ತ್ಯಾ ಪಠತಃ ಪ್ರೀಯತೇ ಹರಿಃ ||
ಆನಂದತೀರ್ಥವೆಂಬ ಉತ್ತಮವಾದ ಹೆಸರಿನಿಂದಲೂ ಪೂರ್ಣ ಪ್ರಜ್ಞರೆಂಬ ಹೆಸರಿನಿಂದಲೂ ಒಡಗೂಡಿದವರಿಮದ ರಚಿತವಾದ ಈ ಹರ್ಯಷ್ಟಕವನ್ನು ಪಠಿಸಿದಾತನಿಗೆ ಹರಿಯು ಪ್ರೀತನಾಗುವನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ