ಸಂಕ್ಷೇಪ ರಾಮಾಯಣ

    ದಶರಥ ಅಂತ ಒಬ್ಬ, ಹಾಗೆಂದರೆ? ಕರ್ಮೇಂದ್ರಿಯಗಳು ಐದು, ಜ್ಞಾನೇಂದ್ರಿಯಗಳು ಐದು, ಇವು ಹತ್ತೂ ಸೇರಿಸಿ ರಥಮಾಡಿಕೊಂಡು ಹತ್ತಿ ಸವಾರಿಮಾಡಿದ ಅವನು ಅಂದರೆ ಇಂದ್ರಿಯಗಳನ್ನು ಸ್ವಾಧೀನಮಾಡಿಕೊಂಡವನು ಯಾರೇ ಆಗಲಿ ಅವನು ದಶರಥ. ಅಂಥವನು ಯಾವಾಗಲೂ ಸಂತೋಷವನ್ನೇ ಪಡೆಯುತ್ತಾನೆ. ಆ ಸಂತೋಷವೇ ರಾಮ; ಅವನೇ ಆನಂದ ಅವನ ತಮ್ಮಂದಿರು ಲಕ್ಷ್ಮಣ, ಭರತ, ಶತ್ರುಘ್ನ ಆನಂದದ ಬೆಳಕು ಮಹಾನಂದ, ಆತ್ಮಾನಂದ, ಬ್ರಹ್ಮಾನಂದ.
   
    ಸೀತಮ್ಮನಿಗೆ ತಾಯಿ, ತಂದೆ ಇಲ್ಲ, ಹಾಗೇ ತಾನಾಗೇ ಬಂದವಳು. ಸೀತೆ ಜ್ಞಾನಾಂಬಿಕೆ. ಜನಕರಾಜ ಯಜ್ಞ ಮಾಡಿದ, ಸಾಧನೆಮಾಡಿದ, ಜ್ಞಾನಾಂಬಿಕೆ ಸಿಕ್ಕಳು. ರಾಮ ಧನಸ್ಸು ಮುರಿದ, ಧನಸ್ಸು ಎಂದರೆ ಶರೀರ ಇದನ್ನು ಮುರಿದ ಅಂದರೆ ಸ್ಥೂಲಶರೀರ ದಾಟಿಹೋಗಿ ಸೀತೆಯನ್ನು ಪಡೆದ ರಾಮ ಎಂದರೆ ಆನಂದ; ಸೀತೆ ಎಂದರೆ ಜ್ಞಾನ ಎರಡೂ ಬಂದದ್ದು ಅಂದರೆ ಜ್ಞಾನಾನಂದ ಎಂಬುದು ಮೂಡಿಬಂತು.

    ಇನ್ನು ಮಾಯಾಮೃಗ, ಅದು ಜಿಂಕೆ. ಬಂಗಾರದ ಜಿಂಕೆ ಅಂದಮೇಲೆ ಇದ್ದಕಡೆ ಇರೋದಿಲ್ಲ ಅದನ್ನು ಹಿಡಿದುಕೊಂಡು ಬಾ ಎಂದಳು ಸೀತಮ್ಮ ರಾಮ ಕೊಂದೇಬಿಟ್ಟ ಅಂದರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ ಅದನ್ನು ಕೊಂದು ಬಿಟ್ಟ ಅಂದರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತುಹೋಗುತ್ತದೆ ಎಂಬ ಮಾತು ಅದು.

    ರಾವಣ ಹತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಶರಥ ಅದನ್ನೇ ರಥಮಾಡಿಕೊಂಡು ಸವಾರಿ ಮಾಡಿದ, ಅಂದರೆ ಅದನ್ನು ತಾನು ಹೇಳಿದಂತೆ ಕೇಳುವಂತೆ ಸ್ವಾಧೀನಮಾಡಿಕೊಂಡಿದ್ದ, ಅದೇ ರಾವಣಾಸುರ ಜ್ಞಾನೇಂದ್ರಿಯ ಕಮೇಂದ್ರಿಯಗಳನ್ನು ತಲೆತುಂಬ ತುಂಬಿಕೊಂಡು ಅದನ್ನೇ ಹೊತ್ತುಕೊಂಡು ಓಡಾಡುತ್ತಾ ಇದ್ದ ಅವು ಅವನ ತಲೆಯ ಮೇಲೆ ಕುಳಿತು ಅವನನ್ನೇ ಆಟ ಆಡಿಸುತ್ತಿತ್ತು. ಅಂದರೆ ಇಂದ್ರಿಯಗಳಿಗೆ ದಾಸನಾಗಿದ್ದ ಇವನಿಗೆ ಇಪ್ಪತ್ತು ಕೈಗಳು, ನಿಜ ನಿಜ ಇಪ್ಪತ್ತು ಕೈಗಳು ಸಪ್ತಧಾತುಗಳು, ಸಪ್ತವ್ಯಸನಗಳು, ಅರಿಷಡ್ವರ್ಗಗಳು ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ ಅವಗಳದೇ ಕಾರುಬಾರು ಹೇಗಿದೆ ನೋಡಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ