ಹೋಳಿ ಮತ್ತು ಬಣ್ಣದ ಮಾತು
ಇಂದಿನ(1-8-16) # ವಿಶ್ವವಾಣಿ ಕಥಾಕಾಲಂನಲ್ಲಿ "ಹೋಳಿ ಮತ್ತು ಬಣ್ಣದ ಮಾತು" ಧನ್ಯವಾದಗಳು Phaneesh Basavani # ವಿ + ಅಂದು ಕಾಮನಹಬ್ಬದ ಸಂಭ್ರಮ, ಹುಡುಗರೂ, ಮುದುಕರೂ, ಕೆಲವು ಜನ ಹೆಣ್ಣು ಮಕ್ಕಳೂ ಕೂಡ ಕಾಮಣ್ಣನ ಮೇಲಣ ಭಂಡಭಂಡಪದಗಳನ್ನು ಹೇಳುತ್ತಾ, ಮನೆಮನೆಗೆ ನುಗ್ಗಿ ಸೌದೆಬೆರಣಿಗಳನ್ನು ಕದಿಯುತ್ತಾ ಅಲೆದಾಡುವುದೇ ರೂಡಿ. ದೊಡ್ಡವರೇ ಅವಕಾಶಕೊಟ್ಟ ಮೇಲೆ ಹುಡುಗರ ಕೋತಿಚೇಷ್ಟೆಗಳಿಗೆ ಕೊನೆಯೆಲ್ಲಿ ? ಆ ಹುಡುಗರು ಅಲ್ಲಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಊರ ಮುಂದಕ್ಕೆ ಬಂದರು ಅಲ್ಲಿ ಅರಳಿಕಟ್ಟೆಯ ಮೇಲೆ ನೆಶ್ಯತಿಕ್ಕುತ್ತಾ ಕುಳಿತಿದ್ದ ಸರಗೂರಿನ ಸಂಗಣ್ಣನನ್ನು ಕಂಡರು. ಸಂಗಣ್ಣ ಸ್ವಲ್ಪ ಪೆದ್ದು, ಸ್ವಂತಬುದ್ಧಿಯಿಲ್ಲ. ಅವನನ್ನು ನೋಡಿದೊಡನೆಯೆ ಗುರು "ಎಲೋ ಪ್ರಸಾದ, ಸಿಕ್ಕಿದನಪ್ಪ ಎಳೆನಿಂಬೆಕಾಯಿ! ಏನಾದರೂ ಒಂದು ತಮಾಷೆಮಾಡಬೇಕಲ್ಲಾ! ಅದಕ್ಕೆಲ್ಲಾ ನೀನೇ ಸರಿ, ನಿನ್ನ ಬುದ್ಧಿಕಲಾಕೌಶಲ ಪ್ರಾರಂಭವಾಗಲಿ! ಹೂ, ಜಾಗ್ರತೆ!"ಎಂದ. ಹನುಮಂತದೇವರನ್ನು ಹೊಗಳಿದಷ್ಟೂ ಅವನಿಗೆ ಶೌರ್ಯ ಹೆಚ್ಚುತ್ತಿತಂತೆ; ನಮ್ಮ ಗುರುಗೂ ಅಷ್ಟೆ! ಪ್ರಸಾದ ಹೊಗಳುತ್ತಲೂ ಹುಡುಗರೆಲ್ಲ ಅವನನ್ನು ಮತ್ತಷ್ಟು ಉಬ್ಬಿಸಿ ಅಟ್ಟಕ್ಕೇರಿಸಿದರು. ಗುರುನೂ ಸ್ವಲ್ಪ ಯೋಚಿಸಿ "ನೀವೆಲ್ಲಾ ನಾನು ಮಾಡಿದ ಹಾಗೆ ಮಾಡಬೇಕು. ಎಲ್ಲರೂ ಗಂಭೀರವಾಗಿ ನನ್ನ ಹಿಂದೆ ಬನ್ನಿ, ತಿಳಿಯಿತೋ? ಎಂದು ಹೇಳುತ್ತಾ ಮೆಲ್ಲ ಮೆಲ್ಲಗೆ ಮಹದೇವ...