ಶ್ರೀ ಗಾಯತ್ರೀ ಸ್ತೋತ್ರಮ್
ನಮಸ್ತೇ ದೇವಿ ಗಾಯತ್ರಿ ಸಾವಿತ್ರಿ ತ್ರಿಪದೇsಕ್ಷರೇ | ಅಜರೇ ಅಮರೇ ಮಾತತ್ರಾಹಿ ಮಾಮ್ ಭವಸಾಗರಾತ್ ||೧|| ಹೇ! ತಾಯೇ; ಈ ಭವ ಸಾಗರದಿಂದ ನನ್ನನ್ನು ಕಾಪಾಡು.ಮೂರು ಅಕ್ಷರಗಳಿರುವ ನೀನು ಗಾಯತ್ರಿಯೂ,ಸಾವಿತ್ರಿಯೂ ಆಗಿದ್ದು ಮುಪ್ಪಿಲ್ಲದವಳೂ ಆಗಿರುವುದಲ್ಲದೆ ಅಮರಳೂ ಆಗಿರುವೆ. ಮಾತೆಯೇ ನಿನಗಿದೋ ಪ್ರಣಾಮಗಳು. ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೆಮಾತೃಕೇ | ಬ್ರಹ್ಮವಿದ್ಯೆ ಮಹಾವಿದ್ಯೆ ವೇದಮಾತೇನಮೋಸ್ತುತೇ ||೨|| ತಾಯಿಯೇ;ವೇದಮಾತೆಯೇ,ಮಹಾವಿದ್ಯಾಪ್ರದಾಯಿನಿಯೇ,ಬ್ರಹ್ಮ ವಿದ್ಯಾಪಾರಂಗತಳೇ,ಸೂರ್ಯನೊಡನೆ ಸದಾ ಇರುವ ಮಾತೆಯೇ ನಿನಗಿದೋ ಪ್ರಣಾಮಗಳು. ಅನಂತಕೋಟಿ ಬ್ರಹ್ಮಾಂಡವ್ಯಾಪಿನಿ ಬ್ರಹ್ಮಚಾರಿಣಿ | ನಿತ್ಯಾನಂದೇ ಮಹಾಮಾಯೇ ಪರೇಶಾನಿ ನಮೋಸ್ತುತೇ ||೩|| ಹೇ! ಅಮ್ಮಾ; ಬ್ರಹ್ಮಚಾರಿಣಿಯೇ,ಬ್ರಹ್ಮಾಂಡವನ್ನು ವ್ಯಾಪಿಸಿರುವವಳೇ,ನಿರಂತರ ಆನಂದ ದಾಯಕಿಯಾಗಿ ಮಾಯಾಸ್ವರೂಪಿಣಿಯೂ ಆಗಿರುವ ಮಾತೆಯೇ, ನಿನಗಿದೋ ಪ್ರಣಾಮಗಳು. ತ್ವಂ ಬ್ರಹ್ಮಾ ತ್ವಂ ಹರಿ: ಸಾಕ್ಷಾದ್ ರುದ್ರಸ್ತ್ವಮಿಂದ್ರ ದೇವತಾ | ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮ್ ಅಗ್ನಿರಶ್ವಿನೌ ಭಗ: ||೪|| ಹೇ! ಅಮ್ಮಾ: ನೀನು ಬ್ರಹ್ಮ ಸ್ವರೂಪಿಯು. ನೀನು ಹರಿ ಸ್ವರೂಪಳು.ಸಾಕ್ಷಾತ್ ರುದ್ರ ಸ್ವರೂಪಿಣಿಯೂ ಇಂದ್ರ ದೇವತೆಯೂ ಆಗಿರುವೆ.ನೀನೇ ಸೂರ್ಯ,ಚಂದ್ರ, ಅಗ್ನಿ,ವರುಣ,ಅಶ್ವಿನೀ ದೇವತೆಯರೂ ಆಗಿರುವೆ.ತಾಯ...