Posts

ಲಲಿತಾ ತ್ರಿಶತೀ (ಏಕಾರಾದಿನಾಮ) - 4. ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ

Image
ವರ್ತಮಾನ ಕಾಲದಲ್ಲಿ ಇಯತ್ತೆಯಿಂದ ಪರಿಚ್ಛೆನ್ನ ವಸ್ತುವು ಏತತ್ ಎಂದೂ ಅನಿಶ್ಚಿತವಾದ ಪರೋಕ್ಷ ವಸ್ತುವು ತತ್ ಎಂದೂ ಕರೆಯಲ್ಪಡುವುವು. "ಇತಿ" ಶಬ್ದವು ಈ ರೀತಿಯಾಗಿ ಎಂಬ ಅರ್ಥಕ್ಕೆ ಬೋಧಕವಾಗಿದೆ. ಇಯತ್ತಾ ಪರಿಚ್ಛೇದ ರೂಪದಿಂದಾಗಲಿ ಅನಿಶ್ಚಿತ ಪರೋಕ್ಷರೂಪದಿಂದಾಗಲಿ ದೇವಿಯು ನಿರ್ದೇಶಿಸಲಿ ಅಶಕ್ಯಳಾಗಿರುವಳು. ಲೋಕದಲ್ಲಿ ವಿಶೇಷ ಧರ್ಮಸಹಿತವಾದ ಪದಾರ್ಥವು ಪರೋಕ್ಷ ಅಥವಾ ಪ್ರತ್ಯಕ್ಷ ಎಂಬ ಬಗೆಯಿಂದ ನಿರ್ದೇಶಿಸಲು ಅರ್ಹವಾಗಿದೆ. ಒಂದ ಶಬ್ದವು ಒಂದು ವ್ಯಕ್ತಿಯನ್ನು ಬೋಧಿಸಲು ಪ್ರವರ್ತಿಸಬೇಕಾದರೆ ವ್ಯಕ್ತಿಯಲ್ಲಿ ಜಾತಿ, ಗುಣ, ಕ್ರಿಯಾ ಸಂಬಂಧಗಳ ಪೈಕಿ ಯಾವುದಾದರೊಮದು ಇರುವುದು ಅವಶ್ಯಕವು. ಪರಬ್ರಹ್ಮ ವಸ್ತುವು "ಅಶಬ್ಧಮಸ್ಪರ್ಶಮ್ರೂಪಮವ್ಯಯಂ" ನಿರ್ಗುಣಂ ನಿಷ್ಕಲಂ ಎಂಬ ಶ್ರುತಿಯಿಂದ ಜಾತ್ಯಾದಿ ಧರ್ಮರಹಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಅಂತಹ ವಸ್ತುವು ಯಾವ ಸಾಧನದಿಂದ ಯಾವ ವಚನದಿಂದ ನಿರ್ದೇಶಿಸಲು ಅರ್ಹವಾದೀತು? ಶಬ್ದವು ನಿರ್ದೇಶಿಸಲು ಅನರ್ಹವೆಂಬ ಅರ್ಥವನ್ನು "ಯದ್ವಾಚಾನಭ್ಯುದಿತಂ" ಎಂಬ ಶ್ರುತಿಯು ಬೋಧಿಸುತ್ತದೆ. ಆದ್ದರಿಂದ ಏತತ್ ತತ್ ಎಂಬುದಾಗಿ ನಿರ್ದೇಶಿಸಲು ಅನರ್ಹಗಳು ಅಥವಾ ಪ್ರತ್ಯಕ್ಷಾದಿ ಪ್ರಮಾಣಕ್ಕೆ ಗೋಚರವಾಗಿ ಉತ್ತರ ಕಾಲದಲ್ಲಿ ಬರುವ ಕಾರ್ಯವು ಏತತ್ ಎಂದೂ ಪರೋಕ್ಷವಾಗಿ ಪೂರ್ವಕಾಲದಲ್ಲಿರುವ ವ್ಯವಹಿತ ವಸ್ತುವು ತತ್ ಎಂದೂ ಹೇಳಲ್ಪಡುವುದು. ಇತಿ ಶಬ್ದವನ್ನು ಏತತ್ + ತತ್ ಎಂಬ ಎರಡು ಶಬ್ದಗ...

ಜೀವನ್ಮುಕ್ತಿಯೂ ವಿದೇಹಮುಕ್ತಿಯೂ

    ಮುಕ್ತಿ ಎಂದರೇನು? ಎಂಬ ವಿಷಯದಲ್ಲಿಯೂ ವಾದವಿವಾದಗಳಿಲ್ಲದೆ ಇಲ್ಲ, ಜೀವನು ಸಂಸಾರದಲ್ಲಿ ಧರ್ಮಾಧರ್ಮಾಗಳಿಂದ ಶರೀರವನ್ನು ಒಂದೊಂದಾಗಿ ಧರಿಸುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುವನು. ಈ ಸುಖ ದುಃಖಗಳಿಂದಲೂ ಇವಕ್ಕೆ ಕಾರಣವಾಗಿರುವ ರಾಗದ್ವೇಷಾದಿಗಳಿಂದಲೂ ಬಿಡುಗಡೆಯನ್ನು ಹೊಂದುವದೇ ಮುಕ್ತಿ ಎಂದು ಸಾಮಾನ್ಯವಾಗಿ ಎಲ್ಲಾವಾದಿಗಳೂ ಒಪ್ಪುತ್ತಾರೆ. ಈ ಮುಕ್ತಿಯು ನಿತ್ಯವಾಗಿರುತ್ತದೆ ಎಂಬುದೂ ಎಲ್ಲಾ ವಾದಿಗಳಿಗೂ ಸಮ್ಮತವಾಗಿರುತ್ತದೆ ಎಂದಿಟ್ಟುಕೊಳ್ಳಬಹುದು.     ಶ್ರೀ ಶಂಕರಾಚಾರ್ಯರವರಿಗೆ ಸಮ್ಮತವಾದ ಅದ್ವೈತಸಿದ್ದಾಂತದಲ್ಲಿ ಮಾತ್ರ ಒಂದು ವಿಶೇಷರೀತಿಯ ಅಭ್ಯುಪಗಮವಿದೆ. ಬಂಧವು ಪರಮಾರ್ಥವಾಗಿದ್ದರೆ ಅದು ಎಂದಿಗೂ ಹೋಗಲಾರದು; ಏಕೆಂದರೆ ನಿತ್ಯವಾಗಿರುವ ಬಂಧವು ಜೀವನ ಸ್ವಭಾವವಾಗಿದ್ದರೆ ಸೂರ್ಯನಿಗೆ ಸ್ವಭಾವವಾಗಿರುವ ಬಿಸಿ ಬೆಳಕುಗಳು ಹೇಗೆ ತೊಲಗಲಾರವೋ ಹಾಗೆ ಬಂಧವೊ ತೊಲಗಲಾರದೆಂದೇ ಒಪ್ಪಬೇಕಾಗುತ್ತದೆ. ಇದೂ ಅಲ್ಲದೆ ನಿತ್ಯವಾದ ವೋಕ್ಷವು ಸಾಧನದಿಂದ ಉಂಟಾಗುತ್ತದೆ ಎಂದು ಕಲ್ಪಿಸುವದೂ ದೃಷ್ಟವಿರುದ್ಧವಾಗಿರುತ್ತದೆ. ಯಾವದು ಕೃತಕವೋ, ಯಾವದು ಸಾಧನದಿಂದ ಹೊಸದಾಗಿ ಉಂಟಾಗತಕ್ಕದ್ದೋ, ಅದು ಆದಿಯುಳ್ಳದ್ಧಾದ್ದರಿಂದ ಕೊನೆಯುಳ್ಳದ್ದೂ ಆಗಿರಬೇಕು ಎಂಬುದು ಸ್ಪಷ್ಟ. ಆದ್ದರಿಂದ ವೋಕ್ಷವು ಹೊಸದಾಗಿ ಉಂಟಾಗತಕ್ಕದ್ದಲ್ಲ ಎಂಬುದು ಈ ಸಿದ್ದಾಂತದ ಮುಖ್ಯೋಪದೇಶವಾಗಿರುತ್ತದೆ.     ಹಾಗಾದರೆ ಬಂಧಮೋಕ್...

ಯಾವ ಹೆಸರಿನಿಂದ ಕರೆಯಲಿ ?

Image
    ಪರಮೇಶ್ವರನಿಗೆ ಯಾವ ಹೆಸರು ಸಲ್ಲುವದು? ಆತನನ್ನು ಯಾವ ಹೆಸರಿನಿಂದ ಕರೆಯುವದು ಸರಿ? ಶಿವನೆಂದು ಶೈವರು, ವಿಷ್ಣುವೆಂದು ವೈಷ್ಣವರು, ಶಕ್ತಿಯೆಂದು ಶಾಕ್ತೇಯರು, ಸೂರ್ಯನೆಂದು ಸೌರರು, ಗಣಪತಿಯೆಂದು ಗಾಣಾಪತ್ಯರು, ಅರ್ಹಂತನೆಂದು ಜೈನರು, ಬುದ್ಧನೆಂದು ಬೌದ್ಧರು, ಅಹುರಮಜ್ದನೆಂದು ಪಾರ್ಸಿಯರು, ಅಲ್ಲಾಹನೆಂದು ಮುಸಲ್ಮಾನರು, ಯಹೋವನೆಂದು ಯಹೋದಿಯರು, ತಂದೆ ಅಥವಾ ಕರ್ತ ಎಂದು ಕ್ರೈಸ್ತರು - ಹೀಗೆ ಬಗೆಬಗೆಯಾಗಿ ಕರೆದಿರುತ್ತಾರೆ ಇವುಗಳಲ್ಲಿ ಯಾವದನ್ನು ಇಟ್ಟುಕೊಳ್ಳುವದು ಸರಿ ?     ಈ ಪ್ರಶ್ನೆಗೆ ಉತ್ತರವನ್ನು ಹೇಳುವದರಲ್ಲಿ ಕೆಲವರು ತಮ್ಮ ತಮ್ಮ ಧರ್ಮವನ್ನು ಎತ್ತಿಹಿಡಿದು ನಾವು ಇಟ್ಟುಕೊಂಡಿರುವ ಹೆಸರೇ ಸರಿ, ಮಿಕ್ಕವರದು ಸರಿಯಲ್ಲ ಅಥವಾ ನಮ್ಮ ಹೆಸರಿನಷ್ಟು ಉತ್ತಮವಲ್ಲ ಎಂಬ ಅಭಿಪ್ರಾಯವನ್ನು ಹೊರಡಿಸಿರುತ್ತಾರೆ. ಆದರೆ ಪ್ರಪಂಚದಲ್ಲಿರುವ ಧಾರ್ಮಿಕವಾಙ್ಮಯದಲ್ಲೆಲ್ಲ ಅತ್ಯಂತ ಪುರಾತನವಾದ ಋಗ್ವೇದದಲ್ಲಿ ಒಂದು ಋಷಿವಾಕ್ಯವು ಕಂಡುಬರುತ್ತದೆ. "ಏಕಂ ಸದ್ವಿಪ್ರಾ ಬಹುಧಾ ವದನ್ತಿ " ಇರುವದು ಒಂದು¯ ಅರಿತವರು ಅದನ್ನು ಹಲವು ಬಗೆಯಾಗಿ ಕರೆಯುತ್ತಿರುವರು. ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಯಮ, ಮಾತರಿಶ್ವ ಎಲ್ಲಾ ಆತನ ಹೆಸರುಗಳೇ (ಋ.ಮಂ 1-23-164). ಈ ಋಷಿವಾಕ್ಯದ ಅಭಿಪ್ರಾಯವನ್ನು ಸ್ವಲ್ಪ ಒಳಹೊಕ್ಕು ನೋಡುವದಕ್ಕೆ ಪ್ರಯತ್ನಿಸೋಣ.     ಇರವದೆಲ್ಲ ಒಂದೇ, ನಮ್ಮ ಇಡಿಯ ಜಗತ್ತಿಗೆ ...

ಮಹಾಮಸ್ತಕಾಭಿಷೇಕ

Image
    ಜಗತ್ತಿನಲ್ಲಿ ಪ್ರತಿಮೆಗಳು ಪ್ರತೀಕಗಳು ಹಲವಾರು ನ್ಯೂಯಾರ್ಕಿನ ಸ್ವಾತಂತ್ರ್ಯ ದೇವಿ, ಜಪಾನಿನ ಬುದ್ಧ, ಇವುಗಳ ಮಧ್ಯೆ ಶ್ರವಣ ಬೆಳಗೊಳದ ಬಾಹುಬಲಿ ವಿಗ್ರಹವೂ ಇದೆ ಎಂದರೆ ಇಲ್ಲಿನ ಪ್ರಾಚೀನತೆ ಪಾವಿತ್ರ್ಯಗಳಿಂದಾಗಿ ಇದಕ್ಕೆ ಪ್ರಾಮುಖ್ಯ ಪ್ರಾಧಾನ್ಯ ಹೆಚ್ಚು.     ಬಾಹುಬಲಿ ವಿಗ್ರಹಗಳೇ ಹಲವಾರು, ಕಾರ್ಕಳ, ವೇಣೂರು, ಮೂಡಬಿದಿರೆ, ಧರ್ಮಸ್ಥಳ - ಮೊದಲಾದವೆಲ್ಲ ಕಂಡುಬರುವ ವಿಗ್ರಹಗಳೂ ಐತಿಹಾಸಿಕವೇ ಆದ್ರೂ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಹಿನ್ನೆಲೆಯೇ ಬೇರೆ, ಅದರ ಎತ್ತರವೇ ಬೇರೆ. ಔನ್ನತ್ಯಮುಂ ನುತಸೌಂದರ್ಯಮುಂ, ಊರ್ಜಿತ ಅತಿಶಯಮುಂ ತನ್ನಲ್ಲಿ ನಿಂದಿರ್ದುದೇಂ ಕ್ಷಿತಿ ಸಂಪೂಜ್ಯವೋ ಗೊಮ್ಮಟೇಶ್ವರ ಜಿನ ಶ್ರೀ ರೂಪಂ - ಬೊಪ್ಪಣ್ಣ ಪಂಡಿತನಿಂದ ಈ ರೀತಿಯಾಗಿ ಕೀರ್ತಿಸಲ್ಪಟ್ಟ ಮೂರ್ತಿಯನ್ನು ಗಂಗ ರಾಚಮಲ್ಲನ ಸೇನಾಧಿಪತಿ ಚಾವುಂಡರಾಯ ಕ್ರಿ.ಶ. 981ನೇ ವರ್ಷದಲ್ಲಿ ಪ್ರತಿಷ್ಠಾಪಿಸಿದ್ದಾಗಿ ಜಗತ್ಪ್ರಸಿದ್ಧವಾಗಿದೆ. ಇಂದ್ರಗಿರಿಯ ಬೆಟ್ಟದ ತುದಿಯಲ್ಲಿ ನಲವತ್ತು ಕಿಲೋಮೀಟರಿಗೂ ಹೆಚ್ಚು ದೂರಕ್ಕೂ ಬರಿಕಣ್ಣಿಗೆ ಕಾಣುವ ವಿಗ್ರಹ, ತನ್ನ ಸೌಂದರ್ಯದಿಂದ, ಸಮತೂಕದ ಅವಯವ ವಿವರದಿಂದ, ತ್ಯಾಗ ವೈರಾಗ್ಯಗಳ ವಿಪುಲ ಪರಿಪುಷ್ಟಿಯಿಂದ ಮನಸ್ಸಿನಲ್ಲೂ ಪಡಿಮೂಡುತ್ತವೆ. (ಬಾಹುಬಲಿ ಮನ್ಮಥನೇ ಎಂಬುದು ಬೇರೆಯೇ ವಿಷಯ)     ಬಾಹುಬಲಿ ಆದಿ ತೀರ್ಥಂಕರ ವೃಷಭದೇವನ ದ್ವಿತೀಐ ಪುತ್ರ. ಭರತ ಚಕ್ರಿಯ...

ರುದ್ರಾಕ್ಷಿ

Image
ರುದ್ರಾಕ್ಷಮೂಲಮ್ ತತ್ ಬ್ರಹ್ಮಾ ತನ್ನಾಲಮ್ ವಿಷ್ಣುಃ ಏವ ಚ | ತನ್ಮುಖಮ್ ರುದ್ರಃ ಇತಿ ಆಹುಃ ತದ್ಬಿಂದುಃ ಸರ್ವದೇವತಾಃ || ರುದ್ರಾಕ್ಷಿಯ ಬುಡದಲ್ಲಿ ಬ್ರಹ್ಮನು, ರಂಧ್ರದಲ್ಲಿ ವಿಷ್ಣುವು, ಮುಖಗಳಲ್ಲಿ ರುದ್ರನೂ ಇರುತ್ತಾರೆ. ಮುಳ್ಳಿನ ತುದಿಯಲ್ಲಿ ಎಲ್ಲ ದೇವತೆಗಳು ಇರುತ್ತಾರೆ. ಗ್ರಹಣೇ ವಿಷುವೇ ಚ ಏವಮ್ ಅಯನೇ ಸಂಕ್ರಮೇ ಅಪಿ ಚ | ದರ್ಶೇಷು ಪೂರ್ಣಮಾಸೇ ಚ ಪೂರ್ಣೇಷು ದಿವಸೇಷು ಚ | ರುದ್ರಾಕ್ಷಧಾರಣಾತ್ ಸದ್ಯಃ ಸರ್ವಪಾಪೈಃ ಪ್ರಮುಚ್ಯತೇ || ಅಮಾವಸೆ, ಹುಣ್ಣಿಮೆ, ಉತ್ತರಾಯಣ ಮತ್ತು ದಕ್ಷಿಣಾಯನಗಳ ಪ್ರಾರಂಭದ ದಿನ ಸಂಕ್ರಮಣ,ವಿಷುವ ಸಂಕ್ರಮಣ, ಗ್ರಹಣದ ದಿನಗಳಲ್ಲಿ ರುದ್ರಾಕ್ಷಿಯನ್ನು ಧರಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ. ಚತುರ್ದಶಮುಖಮ್ ಚ ಅಕ್ಷಮ್ ರುದ್ರನೇತ್ರಸಮುದ್ಭವಮ್ | ಸರ್ವವ್ಯಾಧಿಹರಮ್ ಚ ಏವ ಸರ್ವದಾ ಆರೋಗ್ಯಮ್ ಆಪ್ನುಯಾತ್ || ಹದಿನಾಲ್ಕು ಮುಖದ ರುದ್ರಾಕ್ಷಿಯು ರುದ್ರನ ನೇತ್ರದಿಂದಲೇ ಉಂಟಾಗುತ್ತದೆ. ಇದನ್ನು ಧರಿಸುವುದರಿಂದ ಎಲ್ಲ ರೋಗಗಳು ನಾಶಾವಾಗಿ ಆರೋಗ್ಯವು ಸಿದ್ಧಿಸುತ್ತದೆ. ತ್ರಯೋದಶಮ್ ತು ಮುಖಮ್ ತು ಅಕ್ಷಮ್ ಕಾಮದಮ್ ಸಿದ್ಧಿದಮ್ ಶುಭಮ್ | ತಸ್ಯಾಃ ಧಾರಣಮಾತ್ರೇಣ ಕಾಮದೇವಃ ಪ್ರಸೀದತಿ || ಹದಿಮೂರು ಮುಖದ ರುದ್ರಾಕ್ಷಿಯು ಮನಸ್ಸಿನ ಕಾಮನೆಗಳನ್ನು ಮತ್ತು ಸಿದ್ಧಿಗಳನ್ನು ಉಂಟುಮಾಡುತ್ತದೆ. ಇದನ್ನು ಧರಿಸುವವರು ಕಾಮದೇವನ ಅನುಗ್ರಹವನ್ನು ಹೊಂದುತ್ತಾರೆ. ರುದ್ರಾಕ್ಷಮ್ ದ್ವಾದಶಮುಖಮ್ ಮಹಾವಿಷ್ಣುಸ್ವರೂಪಕಮ್ ...

ರಥಸಪ್ತಮಿ

Image
    ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಪ್ರತಿವರ್ಷವೂ ಚಾಂದ್ರಮಾನರೀತಿಯಾಗಿ ಮಾಘಶುಕ್ಲ ಸಪ್ತಮಿ ದಿನ ಆಚರಿಸುವ 'ರಥಸಪ್ತಮಿ' ಹಬ್ಬವು ಒಂದಾಗಿರುವರು. ಆ ದಿನ ನದಿಯಲ್ಲಿ ಸ್ನಾನಮಾಡುವಾಗ ಏಳು ಎಕ್ಕದ ಎಲೆಗಳನ್ನು ಮೈಮೇಲೆ ಧಿರಿಸಿ ನೀರಿನಲ್ಲಿ ಮುಳುಗಿ ಏಳುತ್ತಾರೆ. ಅನಂತರ ತುಳಸೀಕಟ್ಟೆಯ ಮುಂದೆ ರಂಗವಲ್ಲಿಯಿಂದ 'ರಥ'ವನ್ನು ಬರೆದು ಸೂರ್ಯನನ್ನು ಪೂಜಿಸುತ್ತಾರೆ. ದೇವಾಲಯಗಳಲ್ಲಿ ದೇವರಿಗೆ 'ಸೂರ್ಯಮಂಡಲೋತ್ಸವ'ವನ್ನು ನಡೆಯಿಸುತ್ತಾರೆ. ರಥಸಪ್ತಮಿ ದಿನ ನಡೆಯಬೇಕಾದ ವ್ರತವಿಧಾನವೂ ಕಥೆಯೂ ಪುರಾಣಗಳಲ್ಲಿವೆ. ಪದ್ಮಕಯೋಗವೆನಿಸಿದ ಈ ದಿನವು ಸಾವಿರಸೂರ್ಯಗ್ರಹಣಗಳಿಗೆ ಸಮವಾದ ಪುಣ್ಯ ಕಾಲವೆಂದೂ ವಿಶೇಷವಾಗಿ ಸೂರ್ಯನನ್ನು ಪೂಜಿಸಬೇಕೆಂದೂ ದೀಪಗಳನ್ನು ಬೆಳಗಿ ನದಿಯಲ್ಲಿ ಬಿಡಬೇಕೆಂದೂ ಮಕರಶುಕ್ಲಸಪ್ತಮಿಯೆನಿಸಿದ ಈ ದಿನವು ಸಕಲಪಾಪಗಳನ್ನೂ ಕಳೆಯುವ ಶಕ್ತಿಯುಳ್ಳದ್ದೆಂದೂ ಧರ್ಮಶಾಸ್ತ್ರಗಳಲ್ಲಿ ವಿವರಿಸಿದೆ. ಆದ್ದರಿಂದ ಈ ಹಬ್ಬದ ವಿಚಾರವಾಗಿ ಸ್ವಲ್ಪ ತಿಳಿಯೋಣ.     ವೇದೇತಿಹಾಸಪುರಾಣಗಳಲ್ಲಿ ಸೂರ್ಯನನ್ನು ಸ್ತುತಿಸುವ ಮಂತ್ರಗಳೂ, ಸೂಕ್ತಗಳೂ, ಸ್ತೋತ್ರಪಾಠಗಳೂ ವಿಪುಲವಾಗಿವೆ. ಮಾನವನಿಗೆ ಆರೋಗ್ಯವನ್ನು ಕೊಡುವವನೇ ಸೂರ್ಯನು. ಸೂರ್ಯನು ಎಲ್ಲಾ ಪ್ರಾಣಿವರ್ಗ, ಸಸ್ಯವರ್ಗ, ಮನುಷ್ಯ್ರು, ದೇವತೆಗಳಿಗೂ 'ಮಿತ್ರ'ನೆನಿಸಿದ್ದಾನೆ. ಆತನ ಬೆಳಕು, ಶಾಖಗಳಿಲ್ಲೆ ಜೀವನವೇ ಇಲ್ಲ. ಅವನೇ 'ಅನ್ನದಾತ'ನೆಂದೂ ಶಾಸ್ತ್ರಗಳಲ್...

ಮೂವತ್ತು ಭಾವಗೀತೆಗಳ ಪುಷ್ಪಮಾಲೆ

Image
ತೂಮಣಿ ಮಾಡುತ್ತು ಚುಟ್ರುಮ್ ವಿಳಕ್ಕೆರಿಯ ದೂಪಮ್ ಕಮಳ್ ತ್ತುಯಿಲಣೈ ಮೇಲ್ ಕಣ್ವಳರುಮ್ ಮಾಮಾನ್ ಮಗಳೇ ಮಣಿಕ್ಕದವಂ ತಾಳ್ ತೆರುವಾಯ್ ಮಾಮಿರ್ ಅವಳೈ ಎಳುಪ್ಪೀರೋ, ಉನ್ ಮಗಳ್ ತಾನ್ ಊಮೆಯೋ ಅನ್ರಿ ಚ್ಯೆವುಡೋ ಅನನ್ದಲೋ ಏಮಪ್ಪೆರುನ್ದುಯಿಲ್ ಮನ್ದಿರಪ್ಪಟ್ಟಾಳೋ ಮಾಮಾಯನ್ ಮಾದವನ್ ವೈಗುನ್ದ ನೆನ್ನೆನ್ರು ನಾಮಮ್ ಪಲವುಮ್ ನವಿನ್ರೇಲೋ ರೆಮ್ಬಾವಾಯ್     ಎಂತಹ ಸುಂದರವಾದ ವರ್ಣನೆ. ಒಳಗೆ ಮಾನವ ಮಗಳು ನಿದ್ರಿಸುತ್ತಿದ್ದಾಳೆ. ಆ ಗೃಹವಾದರೋ ಪರಿಶುದ್ಧವಾದ ಮಾಣಿಕ್ಯದಿಂದ ಕಟ್ಟಲ್ಪಟ್ಟಿದೆ. ಸುತ್ತಲೂ ದೀಪಗಳು ಉರಿಯುತ್ತಿವೆ. ಅಗರು, ಹಾಲು ಮಡ್ಡಿ ಮುಂತಾದ ಧೂಫ ಘಮಘಮಿಸುತ್ತಿದೆ. ಅವಳು ಹಂಸತೂಲಿಕಾಕಲ್ಪದಲ್ಲಿ ಮಲಗಿ ನಿದ್ರಿಸುತ್ತಿದ್ದಾಳೆ. ಹೊರಗಿನಿಂದ ಬಾಲೆಯರು ಅವಳನ್ನು ಎಬ್ಬಿಸುತ್ತಿದ್ದಾರೆ. "ಏಳು, ಮಾವನ ಮಗಳೇ, ಚಿಲಕವನ್ನು ತೆಗೆಯುವವಳಾಗು." ಉಹುಂ, ಶ್ರೀ ಕೃಷ್ಣಾನುಭಾವದ ರಸದಲ್ಲಿ ತಲ್ಲಿನಳಾಗಿರುವ ಅವಳು ಏಳುವುದಿಲ್ಲ. ಆಗ ಬಾಲೆಯರು ಅವಳ ತಾಯಿಗೆ ಹೇಳುತ್ತಾರೆ. 'ಅತ್ತೆಯವರೆ ನೀವಾದರೂ ಅವಳನ್ನು ಎಬ್ಬಿಸಿ. ಅವಳೇನು ಮೂಕಿಯೋ, ಕಿವುಡಿಯೋ ಅಥವಾ ಸೋಮಾರಿಯೋ ಕೇಳಿ ಯಾರಾದರೂ ಇವಳಿಗೆ ಮಂಕುಬೂದಿ ಚೆಲ್ಲಿದ್ದಾರೇನು? ಮಂತ್ರ ಮಗ್ಧಳನ್ನಾಗಿ ಮಾಡಿದ್ದಾರೇನು? ಅಥವಾ ಇವಳ ನೆರೆಮನೆಯಲ್ಲೇ ಶ್ರೀಕೃಷ್ಣನಿರುವುದರಿಂದ ರಾತ್ರಿಯೆಲ್ಲಾ, ಅವನು ಇವಳೊಡನಿದ್ದು ಈಗ ತಾನೇ ಎದ್ದು ಹೋಗಿರಬಹುದಾದ್ದರಿಂದ ಈಕೆ ಇನ್ನೂ ಅದೇ ತನ್ಮಯತೆಯಲ್ಲಿದ್ದಾಳೋ...