Posts

ಮುದುಕಿಯ ಸೂಜಿ

    ಒಬ್ಬ ಮುದುಕಿಯು ಒಂದು ದಿನ ಸಂಜೆಯಲ್ಲಿ ತನ್ನದೊಂದು ಚಿಕ್ಕ ಸೂಜಿಯನ್ನು ಮನೆಯಲ್ಲಿ ಎಲ್ಲಿಯೋ ಕೆಡವಿಕೊಂಡಳು. ಆಕೆಯು ಅದನ್ನು ಹುಡುಕುವದಕ್ಕೆ ಮೊದಲುಮಾಡಿ ಹೊರಕ್ಕೆ ಬಂದು ರಾತ್ರಿಯಾಗುತ್ತಲೂ ಬೀದಿಯಲ್ಲೆಲ್ಲ ಹುಡುಕುವದಕ್ಕೆ ಹೋದಳು.     ಆಗ ದಾರಿಹೋಕನೊಬ್ಬನು "ಏನು ಕಳೆದುಕೊಂಡಿದ್ದೀಯಮ್ಮ?" ಎಂದು ಕೇಳಿದನು. ಆಕೆಯು 'ಅಯ್ಯ, ಒಂದು ಸಣ್ಣ ಸೂಜಿ ಕಳೆದು ಹೋಗಿದೆ; ಎಷ್ಟೋ ಹೊತ್ತಿನಿಂದ ಹುಡುಕಿತ್ತಿದ್ದೇನೆ, ಸಿಕ್ಕಿಲ್ಲ. ನೀನಾದರೂ ಹುಡುಕಿ ಕೊಡಪ್ಪ' ಎಂದಳು. ಆತನು ತುಂಬ ಕನಿಕರದಿಂದ 'ಅಮ್ಮ, ಇದು ರಾತ್ರಿಯ ವೇಳೆ, ಕಳೆದುಕೊಂಡಿರುವದು ಸೂಜಿ. ಹೀಗಿರುವದರಿಂದ ಅದನ್ನು ಎಲ್ಲೆಂದು ಹುಡುಕುವದು? ಇದಿರಲಿ, ನಿನ್ನ ಸೂಜಿಯನ್ನು ಯಾವಾಗ, ಎಲ್ಲಿ ಕೆಡವಿಕೊಂಡೆ? ಹೇಳು' ಎಂದು ಕೇಳಿದನು. ಮುದುಕಿಯು 'ಸ್ವಲ್ಪ ಹೊತ್ತಿನ ಹಿಂದೆ ಚಿಕ್ಕಮನೆಯಲ್ಲಿ ಕೆಡವಿಕೊಂಡೆ' ಎಂದು ಹೇಳಿದಳೂ. ಆಗ ದಾರಿಹೊಕನು ಫಕಾರನೆ ನಕ್ಕು 'ಸರಿ ಯಾಯಿತು, ಒಳಗೆ ಕಳೆದುಕೊಂಡು ಹೊರಗೆ ಹುಡುಕುವದೆ? ಮನೆಯಲ್ಲಿಯೇ ಏತಕ್ಕೆ ಹುಡುಕಲಿಲ್ಲ ?" ಎಂದು ಕೇಳಲು, ಆ ಬೆಪ್ಪಳು "ಅಯ್ಯ, ಮನೆಯಲ್ಲಿ ದೀಪವಿಲ್ಲ. ಇಲ್ಲಿ ಊರ ದೀಪವಿದೆ. ಬೆಳಕಿದ್ದ ಕಡೆ ಹುಡುಕದೆ ಕತ್ತಲೆಯಲ್ಲಿ ಹುಡುಕಿ ಫಲವೇನು?" ಎಂದು ಉತ್ತರ ಕೊಟ್ಟಳಂತೆ !     ನಿಜವಾಗಿ ಜನರು ಪ್ರಪಂಚದ ತತ್ತ್ವವನ್ನು ಹುಡುಕುವದಕ್ಕೆ ಮುದುಕಿಯ ಹಾದಿಯನ್ನೇ ಹಿಡಿಯುತ್ತಿರುವರು. ಏ...

ಶಂಖ

    ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.     ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು ಕೆಲವು ರಾಜ್ರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ ಹಿಂದೂ ಪುರಾಣಗಳ ಪ್ರಕಾರ ಹದಿನೆಂಟುವಾದ್ಯಗಳಲ್ಲಿ ಶಂಖವಾದ್ಯವೂ ಒಂದು ಆದ್ದರಿಮದಲೇ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ. ಶಂಖಂ ಚಂದ್ರಾರ್ಕ ದೈವತ್ವಂ ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ ಏತತ್ ಶಂಖಂ ವ್ರವೂಜಯೇತ್ ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.     ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂ...

ಗುಂಪು - ಮೂಲೆಗುಂಪು

Image
    ಈಗ್ಗೆ ಗುಂಪುಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಒಂದೊಂದು ಗುಂಪೂ ಮತ್ತೆ ಮತ್ತೆ ಕಾರಣಾಂತರಗಳಿಂದ ಒಡೆದುಕೊಂಡು ಮತ್ತಷ್ಟು ಸಂಖ್ಯೆಯನ್ನು ಬೆಳೆಸುತ್ತಿವೆ. ಕೆಲವಂತೂ ಭೀಮನಿಂದ ಸೀಳಲ್ಪಟ್ಟ ಜರಾಸಂಧನಂತೆ ಒಡೆದುಕೊಂಡು ಆತ್ಮನಾಶವನ್ನೇ ತಂದುಕೊಳ್ಳುತ್ತಿವೆ. ಗುಂಪು ಒಡೆದಾಗಲೆಲ್ಲ ಅದರಲ್ಲಿರುವ ಜನರಿಗೆ ಗಾಬರಿಯಾಗಿದ್ದು ಯಾವ ಕಡೆಗೆ ಸೇರಬೇಕೆಂಬುದು ತಿಳಿಯದೆ ಅಲೆದಾಡಿ ಕೊನೆಗೆ ಯಾವದೋ ಗುಂಪಿಗೆ ಸೇರಿ ಅಲ್ಲಿಂದಲೂ ಪಕ್ಷಾಂತರಮಾಡಿ ಕೊನೆಗೆ ಮೂಲೆಗುಂಪಾಗುತ್ತಿದಾರೆ. ಈ ನಾಟಕವನ್ನು ನೋಡುವವರಿಗೆ ತಮಾಷೆಯಾಗಿ ಕಾಣುತ್ತಿದೆ, ನಗುವು ಬರುತ್ತಿದೆ. ವ್ಯಂಗಚಿತ್ರಕಾರ್ರ ಲೇಖನಿಗೂ ತುತ್ತಾಗುತ್ತಿದೆ. ಆದರೆ ಆಯಾ ಗುಂಪಿಗೇ ಸೇರಿರುವವರಿಗೆ ಉಂಟಾಗಿರುವ ನಷ್ಟವು ಮನೋವ್ಯಥೆಯೂ ಅಷ್ಟಿಷ್ಟಲ್ಲ. ಆದರೂ ಗುಂಪು ಹೀಗೆ ಒಡೆಯುವದಕ್ಕೂ ತಾನು ಪ್ರದಾಡುವದಕ್ಕೂ ಕಾರಣವೇನು? ಇದರಲ್ಲಿ ತನ್ನ ಪಾತ್ರವೇನು? ಎಂದು ಆತ್ಮಶೋಧನೆಮಾಡಿಕೊಳ್ಳುವವರು ಮಾತ್ರ ತುಂಬಾ ವಿರಳ.     'ಸಂಘೇ ಶಕ್ತಿಃ ಕಲೌ ಯುಗೇ' ಎಂಬ ನಾಣ್ನುಡಿಯೊಂದುಂಟು. ಕಲಿಯುಗದಲ್ಲಿ ಗುಂಪಿನಲ್ಲಿಯೇ ಶಕ್ತಿಯಿರುವದು - ಎಂಬುದು ನಿಜವಾದರೂ 'ಸಂಘ'ವೆಂದರೇನು? ಅದರ ಉದ್ದೇಶವೇನು? ಎಂಬಿದರ ಮೇಲೆ ಮೇಲಿನ ನಾಣ್ನುಡಿಯನ್ನು ಅನ್ವಯಿಸಿಕೊಳ್ಳಬೇಕು. ಒಬ್ಬೊಬ್ಬನೇ ಮಾಡಲಾಗದ ಕೆಲಸವನ್ನು ಹತ್ತಾರು ಜನರು ಸೇರಿ ಮಾಡಬಹುದು - ಎಂಬುದು ಸಾಮಾನ್ಯವಾದ ಅಭಿಪ್ರಾಯ. ಉದಾಹರಣೆಗೆ ಒಂದು ದೊಡ್ಡ ...

ಲಲಿತಾ ತ್ರಿಶತೀ (ಏಕಾರಾದಿನಾಮ) - 4. ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ

Image
ವರ್ತಮಾನ ಕಾಲದಲ್ಲಿ ಇಯತ್ತೆಯಿಂದ ಪರಿಚ್ಛೆನ್ನ ವಸ್ತುವು ಏತತ್ ಎಂದೂ ಅನಿಶ್ಚಿತವಾದ ಪರೋಕ್ಷ ವಸ್ತುವು ತತ್ ಎಂದೂ ಕರೆಯಲ್ಪಡುವುವು. "ಇತಿ" ಶಬ್ದವು ಈ ರೀತಿಯಾಗಿ ಎಂಬ ಅರ್ಥಕ್ಕೆ ಬೋಧಕವಾಗಿದೆ. ಇಯತ್ತಾ ಪರಿಚ್ಛೇದ ರೂಪದಿಂದಾಗಲಿ ಅನಿಶ್ಚಿತ ಪರೋಕ್ಷರೂಪದಿಂದಾಗಲಿ ದೇವಿಯು ನಿರ್ದೇಶಿಸಲಿ ಅಶಕ್ಯಳಾಗಿರುವಳು. ಲೋಕದಲ್ಲಿ ವಿಶೇಷ ಧರ್ಮಸಹಿತವಾದ ಪದಾರ್ಥವು ಪರೋಕ್ಷ ಅಥವಾ ಪ್ರತ್ಯಕ್ಷ ಎಂಬ ಬಗೆಯಿಂದ ನಿರ್ದೇಶಿಸಲು ಅರ್ಹವಾಗಿದೆ. ಒಂದ ಶಬ್ದವು ಒಂದು ವ್ಯಕ್ತಿಯನ್ನು ಬೋಧಿಸಲು ಪ್ರವರ್ತಿಸಬೇಕಾದರೆ ವ್ಯಕ್ತಿಯಲ್ಲಿ ಜಾತಿ, ಗುಣ, ಕ್ರಿಯಾ ಸಂಬಂಧಗಳ ಪೈಕಿ ಯಾವುದಾದರೊಮದು ಇರುವುದು ಅವಶ್ಯಕವು. ಪರಬ್ರಹ್ಮ ವಸ್ತುವು "ಅಶಬ್ಧಮಸ್ಪರ್ಶಮ್ರೂಪಮವ್ಯಯಂ" ನಿರ್ಗುಣಂ ನಿಷ್ಕಲಂ ಎಂಬ ಶ್ರುತಿಯಿಂದ ಜಾತ್ಯಾದಿ ಧರ್ಮರಹಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಅಂತಹ ವಸ್ತುವು ಯಾವ ಸಾಧನದಿಂದ ಯಾವ ವಚನದಿಂದ ನಿರ್ದೇಶಿಸಲು ಅರ್ಹವಾದೀತು? ಶಬ್ದವು ನಿರ್ದೇಶಿಸಲು ಅನರ್ಹವೆಂಬ ಅರ್ಥವನ್ನು "ಯದ್ವಾಚಾನಭ್ಯುದಿತಂ" ಎಂಬ ಶ್ರುತಿಯು ಬೋಧಿಸುತ್ತದೆ. ಆದ್ದರಿಂದ ಏತತ್ ತತ್ ಎಂಬುದಾಗಿ ನಿರ್ದೇಶಿಸಲು ಅನರ್ಹಗಳು ಅಥವಾ ಪ್ರತ್ಯಕ್ಷಾದಿ ಪ್ರಮಾಣಕ್ಕೆ ಗೋಚರವಾಗಿ ಉತ್ತರ ಕಾಲದಲ್ಲಿ ಬರುವ ಕಾರ್ಯವು ಏತತ್ ಎಂದೂ ಪರೋಕ್ಷವಾಗಿ ಪೂರ್ವಕಾಲದಲ್ಲಿರುವ ವ್ಯವಹಿತ ವಸ್ತುವು ತತ್ ಎಂದೂ ಹೇಳಲ್ಪಡುವುದು. ಇತಿ ಶಬ್ದವನ್ನು ಏತತ್ + ತತ್ ಎಂಬ ಎರಡು ಶಬ್ದಗ...

ಜೀವನ್ಮುಕ್ತಿಯೂ ವಿದೇಹಮುಕ್ತಿಯೂ

    ಮುಕ್ತಿ ಎಂದರೇನು? ಎಂಬ ವಿಷಯದಲ್ಲಿಯೂ ವಾದವಿವಾದಗಳಿಲ್ಲದೆ ಇಲ್ಲ, ಜೀವನು ಸಂಸಾರದಲ್ಲಿ ಧರ್ಮಾಧರ್ಮಾಗಳಿಂದ ಶರೀರವನ್ನು ಒಂದೊಂದಾಗಿ ಧರಿಸುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುವನು. ಈ ಸುಖ ದುಃಖಗಳಿಂದಲೂ ಇವಕ್ಕೆ ಕಾರಣವಾಗಿರುವ ರಾಗದ್ವೇಷಾದಿಗಳಿಂದಲೂ ಬಿಡುಗಡೆಯನ್ನು ಹೊಂದುವದೇ ಮುಕ್ತಿ ಎಂದು ಸಾಮಾನ್ಯವಾಗಿ ಎಲ್ಲಾವಾದಿಗಳೂ ಒಪ್ಪುತ್ತಾರೆ. ಈ ಮುಕ್ತಿಯು ನಿತ್ಯವಾಗಿರುತ್ತದೆ ಎಂಬುದೂ ಎಲ್ಲಾ ವಾದಿಗಳಿಗೂ ಸಮ್ಮತವಾಗಿರುತ್ತದೆ ಎಂದಿಟ್ಟುಕೊಳ್ಳಬಹುದು.     ಶ್ರೀ ಶಂಕರಾಚಾರ್ಯರವರಿಗೆ ಸಮ್ಮತವಾದ ಅದ್ವೈತಸಿದ್ದಾಂತದಲ್ಲಿ ಮಾತ್ರ ಒಂದು ವಿಶೇಷರೀತಿಯ ಅಭ್ಯುಪಗಮವಿದೆ. ಬಂಧವು ಪರಮಾರ್ಥವಾಗಿದ್ದರೆ ಅದು ಎಂದಿಗೂ ಹೋಗಲಾರದು; ಏಕೆಂದರೆ ನಿತ್ಯವಾಗಿರುವ ಬಂಧವು ಜೀವನ ಸ್ವಭಾವವಾಗಿದ್ದರೆ ಸೂರ್ಯನಿಗೆ ಸ್ವಭಾವವಾಗಿರುವ ಬಿಸಿ ಬೆಳಕುಗಳು ಹೇಗೆ ತೊಲಗಲಾರವೋ ಹಾಗೆ ಬಂಧವೊ ತೊಲಗಲಾರದೆಂದೇ ಒಪ್ಪಬೇಕಾಗುತ್ತದೆ. ಇದೂ ಅಲ್ಲದೆ ನಿತ್ಯವಾದ ವೋಕ್ಷವು ಸಾಧನದಿಂದ ಉಂಟಾಗುತ್ತದೆ ಎಂದು ಕಲ್ಪಿಸುವದೂ ದೃಷ್ಟವಿರುದ್ಧವಾಗಿರುತ್ತದೆ. ಯಾವದು ಕೃತಕವೋ, ಯಾವದು ಸಾಧನದಿಂದ ಹೊಸದಾಗಿ ಉಂಟಾಗತಕ್ಕದ್ದೋ, ಅದು ಆದಿಯುಳ್ಳದ್ಧಾದ್ದರಿಂದ ಕೊನೆಯುಳ್ಳದ್ದೂ ಆಗಿರಬೇಕು ಎಂಬುದು ಸ್ಪಷ್ಟ. ಆದ್ದರಿಂದ ವೋಕ್ಷವು ಹೊಸದಾಗಿ ಉಂಟಾಗತಕ್ಕದ್ದಲ್ಲ ಎಂಬುದು ಈ ಸಿದ್ದಾಂತದ ಮುಖ್ಯೋಪದೇಶವಾಗಿರುತ್ತದೆ.     ಹಾಗಾದರೆ ಬಂಧಮೋಕ್...

ಯಾವ ಹೆಸರಿನಿಂದ ಕರೆಯಲಿ ?

Image
    ಪರಮೇಶ್ವರನಿಗೆ ಯಾವ ಹೆಸರು ಸಲ್ಲುವದು? ಆತನನ್ನು ಯಾವ ಹೆಸರಿನಿಂದ ಕರೆಯುವದು ಸರಿ? ಶಿವನೆಂದು ಶೈವರು, ವಿಷ್ಣುವೆಂದು ವೈಷ್ಣವರು, ಶಕ್ತಿಯೆಂದು ಶಾಕ್ತೇಯರು, ಸೂರ್ಯನೆಂದು ಸೌರರು, ಗಣಪತಿಯೆಂದು ಗಾಣಾಪತ್ಯರು, ಅರ್ಹಂತನೆಂದು ಜೈನರು, ಬುದ್ಧನೆಂದು ಬೌದ್ಧರು, ಅಹುರಮಜ್ದನೆಂದು ಪಾರ್ಸಿಯರು, ಅಲ್ಲಾಹನೆಂದು ಮುಸಲ್ಮಾನರು, ಯಹೋವನೆಂದು ಯಹೋದಿಯರು, ತಂದೆ ಅಥವಾ ಕರ್ತ ಎಂದು ಕ್ರೈಸ್ತರು - ಹೀಗೆ ಬಗೆಬಗೆಯಾಗಿ ಕರೆದಿರುತ್ತಾರೆ ಇವುಗಳಲ್ಲಿ ಯಾವದನ್ನು ಇಟ್ಟುಕೊಳ್ಳುವದು ಸರಿ ?     ಈ ಪ್ರಶ್ನೆಗೆ ಉತ್ತರವನ್ನು ಹೇಳುವದರಲ್ಲಿ ಕೆಲವರು ತಮ್ಮ ತಮ್ಮ ಧರ್ಮವನ್ನು ಎತ್ತಿಹಿಡಿದು ನಾವು ಇಟ್ಟುಕೊಂಡಿರುವ ಹೆಸರೇ ಸರಿ, ಮಿಕ್ಕವರದು ಸರಿಯಲ್ಲ ಅಥವಾ ನಮ್ಮ ಹೆಸರಿನಷ್ಟು ಉತ್ತಮವಲ್ಲ ಎಂಬ ಅಭಿಪ್ರಾಯವನ್ನು ಹೊರಡಿಸಿರುತ್ತಾರೆ. ಆದರೆ ಪ್ರಪಂಚದಲ್ಲಿರುವ ಧಾರ್ಮಿಕವಾಙ್ಮಯದಲ್ಲೆಲ್ಲ ಅತ್ಯಂತ ಪುರಾತನವಾದ ಋಗ್ವೇದದಲ್ಲಿ ಒಂದು ಋಷಿವಾಕ್ಯವು ಕಂಡುಬರುತ್ತದೆ. "ಏಕಂ ಸದ್ವಿಪ್ರಾ ಬಹುಧಾ ವದನ್ತಿ " ಇರುವದು ಒಂದು¯ ಅರಿತವರು ಅದನ್ನು ಹಲವು ಬಗೆಯಾಗಿ ಕರೆಯುತ್ತಿರುವರು. ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಯಮ, ಮಾತರಿಶ್ವ ಎಲ್ಲಾ ಆತನ ಹೆಸರುಗಳೇ (ಋ.ಮಂ 1-23-164). ಈ ಋಷಿವಾಕ್ಯದ ಅಭಿಪ್ರಾಯವನ್ನು ಸ್ವಲ್ಪ ಒಳಹೊಕ್ಕು ನೋಡುವದಕ್ಕೆ ಪ್ರಯತ್ನಿಸೋಣ.     ಇರವದೆಲ್ಲ ಒಂದೇ, ನಮ್ಮ ಇಡಿಯ ಜಗತ್ತಿಗೆ ...

ಮಹಾಮಸ್ತಕಾಭಿಷೇಕ

Image
    ಜಗತ್ತಿನಲ್ಲಿ ಪ್ರತಿಮೆಗಳು ಪ್ರತೀಕಗಳು ಹಲವಾರು ನ್ಯೂಯಾರ್ಕಿನ ಸ್ವಾತಂತ್ರ್ಯ ದೇವಿ, ಜಪಾನಿನ ಬುದ್ಧ, ಇವುಗಳ ಮಧ್ಯೆ ಶ್ರವಣ ಬೆಳಗೊಳದ ಬಾಹುಬಲಿ ವಿಗ್ರಹವೂ ಇದೆ ಎಂದರೆ ಇಲ್ಲಿನ ಪ್ರಾಚೀನತೆ ಪಾವಿತ್ರ್ಯಗಳಿಂದಾಗಿ ಇದಕ್ಕೆ ಪ್ರಾಮುಖ್ಯ ಪ್ರಾಧಾನ್ಯ ಹೆಚ್ಚು.     ಬಾಹುಬಲಿ ವಿಗ್ರಹಗಳೇ ಹಲವಾರು, ಕಾರ್ಕಳ, ವೇಣೂರು, ಮೂಡಬಿದಿರೆ, ಧರ್ಮಸ್ಥಳ - ಮೊದಲಾದವೆಲ್ಲ ಕಂಡುಬರುವ ವಿಗ್ರಹಗಳೂ ಐತಿಹಾಸಿಕವೇ ಆದ್ರೂ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಹಿನ್ನೆಲೆಯೇ ಬೇರೆ, ಅದರ ಎತ್ತರವೇ ಬೇರೆ. ಔನ್ನತ್ಯಮುಂ ನುತಸೌಂದರ್ಯಮುಂ, ಊರ್ಜಿತ ಅತಿಶಯಮುಂ ತನ್ನಲ್ಲಿ ನಿಂದಿರ್ದುದೇಂ ಕ್ಷಿತಿ ಸಂಪೂಜ್ಯವೋ ಗೊಮ್ಮಟೇಶ್ವರ ಜಿನ ಶ್ರೀ ರೂಪಂ - ಬೊಪ್ಪಣ್ಣ ಪಂಡಿತನಿಂದ ಈ ರೀತಿಯಾಗಿ ಕೀರ್ತಿಸಲ್ಪಟ್ಟ ಮೂರ್ತಿಯನ್ನು ಗಂಗ ರಾಚಮಲ್ಲನ ಸೇನಾಧಿಪತಿ ಚಾವುಂಡರಾಯ ಕ್ರಿ.ಶ. 981ನೇ ವರ್ಷದಲ್ಲಿ ಪ್ರತಿಷ್ಠಾಪಿಸಿದ್ದಾಗಿ ಜಗತ್ಪ್ರಸಿದ್ಧವಾಗಿದೆ. ಇಂದ್ರಗಿರಿಯ ಬೆಟ್ಟದ ತುದಿಯಲ್ಲಿ ನಲವತ್ತು ಕಿಲೋಮೀಟರಿಗೂ ಹೆಚ್ಚು ದೂರಕ್ಕೂ ಬರಿಕಣ್ಣಿಗೆ ಕಾಣುವ ವಿಗ್ರಹ, ತನ್ನ ಸೌಂದರ್ಯದಿಂದ, ಸಮತೂಕದ ಅವಯವ ವಿವರದಿಂದ, ತ್ಯಾಗ ವೈರಾಗ್ಯಗಳ ವಿಪುಲ ಪರಿಪುಷ್ಟಿಯಿಂದ ಮನಸ್ಸಿನಲ್ಲೂ ಪಡಿಮೂಡುತ್ತವೆ. (ಬಾಹುಬಲಿ ಮನ್ಮಥನೇ ಎಂಬುದು ಬೇರೆಯೇ ವಿಷಯ)     ಬಾಹುಬಲಿ ಆದಿ ತೀರ್ಥಂಕರ ವೃಷಭದೇವನ ದ್ವಿತೀಐ ಪುತ್ರ. ಭರತ ಚಕ್ರಿಯ...