ಭಕ್ತಿಯಲ್ಲಿ ಭಾವ
ಭಕ್ತಿಯೋಗದಲ್ಲಿ ಶಾಂತಭಾವ, ಮಧುರಭಾವ, ವಾತ್ಸಲ್ಯಭಾವ, ದಾಸ್ಯಭಾವ ಮತ್ತು ಸಖ್ಯಭಾವ ಎಂದು ಐದು ವಿಧವಾದ ಭಾವಗಳಿವೆ. ಮಧುರ ಭಾವವನ್ನು ಕಾಂತಾಭಾವವೆಂದು ಹೇಳುವರು ಮತ್ತು ಸಖ್ಯಭಾವವು ಮಧುರ ಭಾವದ ಗುಂಪಿಗೆ ಸೇರಿದುದು. ನಿಮ್ಮ ಅಭಿರುಚಿ ಮತ್ತು ಸ್ವಭಾವಕ್ಕೆ ಹೊಂದುವ ಯಾವುದಾದರು ಒಂದು ಭಾವವನ್ನು ಆರಿಸಿಕೊಳ್ಳಿ ಮತ್ತು ಭಕ್ತಿಯನ್ನು ಪರಮಾವಧಿ ಮಟ್ಟಕ್ಕೆ ಬೆಳೆಸಿರಿ. ಸನ್ಯಾಸಿ ಭಕ್ತರು ಶಾಂತಭಾವವನ್ನು ಹೊಂದಿರುವರು. ಶಾಂತಭಾವದ ಭಕ್ತನು ಉದ್ವಿಗ್ನತೆಗಳಿಗೆ ಒಳಪಡುವುದಿಲ್ಲ ಮತ್ತು ಹೊರಪಡಿಸುವುದಿಲ್ಲ. ಅವನು ನರ್ತಿಸಲಾರ, ಅಳಲಾರ, ಆದರೂ ಅವನ ಹೃದಯವು ಶ್ರದ್ಧಾಭಕ್ತಿ ಪೂರ್ಣವಾಗಿರುವುದು. ಶ್ರೀ ಅರವಿಂದ ಮಹಾರಾಜರು ಈ ವಿಧದ ಭಾವವನ್ನು ಮೆಚ್ಚಿರುವುದಲ್ಲದೆ ನರ್ತನ ಮತ್ತು ರೋದನವನ್ನು ಮಾನಸಿಕ ದೌರ್ಬಲ್ಯದ ಸ್ಥಿತಿಯೆಂದು ಪರಿಗಣಿಸಿದ್ದಾರೆ. ಮಧುರಭಾವದಲ್ಲಿ ಭಕ್ತನು ಪ್ರೇಮಿ ಮತ್ತು ಪ್ರಿಯತಮ ಎಂಬ ಭಾವನೆಯನ್ನು ಆಹ್ವಾನಿಸುವನು. ತಾನು ರಾಮ ಅಥವ ಕೃಷ್ಣನ ಪತ್ನಿಯೆಂದು ಭಾವಿಸುವನು. ಮಹಮ್ಮದೀಯ ಸೂಫಿಗಳು ಈ ಮನೋ ಧರ್ಮವನ್ನು ಪುರಸ್ಕರಿಸುವರು. ಬೃಂದಾವನ, ಮಥುರಾ ಮತ್ತು ನಾಡಿಯಾದಲ್ಲಿ ಮಧುರ ಭಾವದ ಭಕ್ತರನ್ನು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಅವರು ಸ್ತ್ರೀಯರಂತೆಯೆ ವೇಷಭೂಷಣಗಳನ್ನು ತೊಡುವುದಲ್ಲದೆ ಅವರಂತೆಯೇ ಸಂಭಾಷಿಸುವರು ಮತ್ತು ವರ್ತಿಸುವರು. ತಮಗೆ ಮೂರ್ಛಾವಸ್ಥೆಯುಂಟಾಗುವವರೆಗೂ (swoon) ಬಹುವಾಗಿ ನರ್ತಿಸಿ ಬಹಳ ಬಳ...