ತ್ಯಾಗರಾಜರು ಆಡುವ ತೀಕ್ಷ್ಣ ನುಡಿ - ಪರಸ್ತ್ರೀ ವ್ಯಾಮೋಹ
ಸಾಧಾರಣವಾಗಿ ಪುರುಷರು ರಕ್ತಮಾಂಸಾದಿ ಮಾಲಿನ್ಯದಿಂದ ಕೂಡಿದ ಸ್ತ್ರೀ ಶರೀರದಿಂದ ಮೋಹಿತರಾಗುತ್ತಾರೆ. ಸ್ತ್ರೀಯರು ತಮ್ಮ ಹಾವಭಾವ ಮಾಯಾವಿಲಾಸದಿಂದ, ಕಣ್ಣೋಟವೆಂಬ ಬಾಣದಿಂದ ಪುರುಷನನ್ನು ಗೆದ್ದು ಎಷ್ಟೋ ಅಕೃತ್ಯಗಳಿಗೆ ಕಾರಣರಾಗುತ್ತಾರೆ. ಆದ್ದರಿಂದ 'ಎಲೈ ಮನಸ್ಸೇ, ಸ್ತ್ರೀಯರ ಶರೀರ ಕಂಡು ಮೋಸಹೋಗಬೇಡ' - ಇದು ಸ್ತ್ರೀಯರ ಅಪಾಯಕಾರೀ ಸ್ವಭಾವದ ಬಗೆಗೆ ತ್ಯಾಗರಾಜರು ಆಡುವ ತೀಕ್ಷ್ಣ ನುಡಿ. ಮೇನು ಜೂಚಿ ಮೋಸಪೋಕುಮೀ ಮನಸಾ ಲೋನಿ ಜಾಡ ಲೀಲಾಗು ಗಾದಾ ಹೀನಮೈನ ಮಲಮೂತ್ರ ರಕ್ತಮುಲ ಕಿರವಂಚು ಮಾಯಾಮಯಮೈನ ಚಾನ ಕನಲನೇಟಿ ಯಂಪಕೋಲ ಚೇತ ಗುಚ್ಚ ಚನುಲನೆಡಿ ಗಿರುಲ ಶಿರಮುನುಂಚಿ ಪನುಲ ಚೇತುರಟ ....... (ಮೇನುಜೂಚಿ) ಮೇಲಿನ ಈ ಸಾಲುಗಳು ಪುರುಷನನ್ನು ಆಕರ್ಷಿಸುವಲ್ಲಿ ಸ್ತ್ರೀಗಿರುವ ಶಕ್ತಿಯನ್ನು ಮನದಟ್ಟು ಮಾಡುತ್ತದೆ. ಪುರುಷನ ಬದುಕನ್ನು ವ್ಯರ್ಥಗೊಳಿಸುವಲ್ಲಿ ಸ್ತ್ರೀಶಕ್ತಿ ಅದ್ಭುತವಾದು್ಉ. ಆಧ್ಯಾತ್ಮ ಸಾಧನೆಗೆ ಹೊರಟವನನ್ನೂ ದಾರಿತಪ್ಪಿಸಿ ಪ್ರಾಪಂಚಿಕ ಸ್ಥಿತಿಯಲ್ಲೇ ಓಲಾಡುವಂತೆ ಮಾಡುವ ಮೋಹವಿದು ಇಂತಹ ಮೋಹದಿಂದ ಪುರುಷನು ಔನ್ನತ್ಯಕ್ಕೆ ಏರುವ ಬದಲು ಅಧೋಗತಿಗೆ ಇಳಿಯುತ್ತಾನೆ. ಹೀಗೆಂದೇ ತ್ಯಾಗರಾಜರು ಸ್ತ್ರೀವ್ಯಾಮೋಹವನ್ನು ತುಚ್ಛೀಕರಿಸುತ್ತಾರೆ. ತ್ಯಾಗರಾಜರಂತಹ ಅನುಭಾವಿಗಳ ಗುರಿ ಎಂದಿಗೂ ಅಧ್ಯಾತ್ಮವಾಗಿರುತ್ತದೆ. ಈ ಧ್ಯೇಯಸಾಧನೆಗೆ ...