ವಸುಮತಿಯ ಸುರರ ಮಧೆ ಘನವಾಯಿತಲ್ಲ

ವೈಕುಂಠದಾಸರ ಈ ಕೃತಿ ಸಾಮಾಜಿಕವಾಗಿ ಮುಖ್ಯವೆನಿಸುತ್ತದೆ. ಇಲ್ಲಿ ಬರುವ 'ವಸುಮತಿಯ ಸುರರ ಮಧೆ ಘನವಾಯಿತಲ್ಲ' ಎಂಬ ಸಾಲು ವಿಜಯನಗರದರಸರ ಅವನತಿಯ ಕಾಲದ ಸಾಮಾಜಿಕ ಏಳುಬೀಳುಗಳತ್ತ ಈ ಕೃತಿ ಬೆಳಕು ಚೆಲ್ಲುತ್ತಿದೆ ಬಯಲ ಮಮತೆ ಬಾಯಿಬಡುಕರು ಮುಂತಾದ ವಿಶಿಷ್ಟ ಪದಪ್ರಯೋಗದಿಂದ ಈ ಕೃತಿ ಅತ್ಯಂತ ಮಹತ್ವವಾದ ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವಂತಿದೆ.

(ಮುಖಾರಿ     ಝಂಪೆ)
ಕಟಕಟಾ ಕಂಡೆವಲ್ಲ ಈ
ಕುಟಿಲವರ್ತನ ಕೆಲಕೆಲವು ಕಲಿಯುಗದೀ  ||ಪ||

ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ
ಹುಲುಸಲ್ಲ ಹುಲುಸಾದರಿಲ್ಲ ಪ್ರಜೆಗೆ
ಸಲುವ ಕೋರಲ್ಪವನು ಬಿಡರು ರಾಜರುಗಳ ಹಾ
ವಳಿಯಲುಳಿಹಿಲ್ಲ ಇನ್ನೆಂತು ಕೃಷಿಕರಿಗೆ      ||1||

ಧನವ ಗಳಿಸಿಯೆ ಪಡುವುದನ್ಯಾಯವೇ ಮೊದಲು
ಮನವರಿತು ಪಾತಕಂಗಳ ಮಾಡುತಿಹರು
ಇತಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು
ಜನಪರೊಡಯರು ಬಯಲ ಮಮತೆಗಳ ಬಿಡರು  ||2||

ಹುಸಿ ನುಸುಳು ಕಳೆವು ಕಕ್ಯುಲತೆ ಪರನಿಂದೆ ರಾ
ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ
ಪಿಸುಣತೆ ಕುಹಕ ಕುಟಿಲ ಕುಮದ ಸ್ಮಾಮಿದ್ರೋಹ
ವಸುಮತಿಯ ಸುರರ ವಧೆ ಘನವಾಯಿತಲ್ಲ    ||3||

ತೋಡುವಡವೆಗಳ ಬೇಡಲೊಡನೆರಡು ಕಂಗಳಲಿ
ಕಿಡಿಸೂಸಿ ಬಾಯಿಸೊರೆಸುತ್ತಿ ಗರ್ಜಿಸುತಾ
ಜಡಿವಕೋಪದಿ ಮಧುಪರಂತೆ ಜರೆವೀ ಬಾಯ
ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ  ||4||

ರಸನ ಬಿಡುವರು ಕಸವ ಪಿಡಿವರೊರೆಯನು ಪಿಡಿದು
ಬಿಸುಡುವರಲಗ ರುಸವನು ಬಿಟ್ಟು ಕಲ್ಲಾ
ಮಸೆದು ಬಿಡುವರು ಶ್ರೀವೈಕುಂಠಕೇಶವನಿರಲು
ನುಸಿದೈವಗಳ ಭಜಿಸಿ ಹಸಗೆಡುತಲಿಹರು  ||5||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ