ಶ್ರೀ ಶ್ರೀಕಂಠೇಶ್ವರಸ್ವಾಮಿ - ನಂಜನಗೂಡು

ಪಾರ್ವತೀಪರಮೇಶ್ವರರು ಸಂಚಾರಮಾಡುತ್ತಿರುವಾಗ್ಗೆ, ಶ್ರೀ ಪಾರ್ವತಮ್ಮನವರು ತಮಗೆ ಸುಖದಾಯಕವಾದ ಕ್ಷೇತ್ರಗಳಲ್ಲಿ ಪರಮಪವಿತ್ರವಾದ ಮತ್ತು ಪರಮೋತ್ಕೃಷ್ಟವಾದ ಕ್ಷೇತ್ರವಾವುದೆಂದು ಕೇಳಿದ್ದಕ್ಕೆ, ಕಪಿಲಾ ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮಪಾವನವಾದ ಕ್ಷೇತ್ರವು ಕೇಶೀರಾಕ್ಷಸಸಂಹಾರಕಾಲಕ್ಕೆ ಅಲ್ಲಿಗೆ ಹೋಗಿ ನೋಡೋಣವೆಂದು ಸ್ವಾಮಿಯವರು ಹೇಳಿದರು.
ತ್ರಿಯಂಬಕ ರಾಕ್ಷಸನ ಮಗನಾದ ಕೇಶೀಯೆಂಬ ರಾಕ್ಷಸನು ಮಹಾಗರ್ವಿಯಾಗಿ ದೇವತೆಗಳನ್ನು ಋಷಿಗಳನ್ನು ಬಹಳವಾಗಿ ಹಿಂಸಿಸುತ್ತಾ, ಯಾಗಾದಿ ಕರ್ಮಗಳನ್ನು ಕೆಡಿಸುತ್ತಾ ಇದ್ದುದರಿಂದ ದೇವಗಣಗಳು ಬ್ರಹ್ಮನಲ್ಲಿಯೂ, ವಿಷ್ಣುವಿನಲ್ಲಿಯೂ ಮೊರೆಯಿಡಲು ಈ ರಾಕ್ಷಸ ಸಂಹಾರವು ಮಹದೇವನಿಗೆ ಹೊರತು ತಮಗಾಗಲೀ ಮತ್ತಾರಿಗಾಗಲೀ ಸಾಧ್ಯವಿಲ್ಲವೆಂದು ತಿಳಿಸಿ, ಅವರೊಡನೆ ತಾವು ಗಿರಿಜಾ ವಲ್ಲಭನ ಬಳಿಗೆ ಹೊರಟು ಕೇಳಿಕೊಳ್ಳಲು ಪರಮೇಶ್ವರನು ಅವರುಗಳಿಗೆಲ್ಲಾ ಕಪಿಲಾ ಕೌಂಡಿನಿ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಅಪ್ಪಣೆಕೊಟ್ಟನು. ಯಜ್ಞವನ್ನು ನಡೆಸುತ್ತಿರುವಲ್ಲಿ ಹವಿಸ್ಸನ್ನು ತಿನ್ನುವುದಕ್ಕೂ ಯಜ್ಞವನ್ನು ಕೆಡಿಸುವುದಕ್ಕೂ ಬಂದ ಕೇಶೀರಾಕ್ಷಸನನ್ನು ಪರಮೇಶ್ವರನು ಆ ಯಜ್ಞಕುಂಡದಲ್ಲಿಯೇ ಹಾಕಿ ಸೋಂಕಿದ ಎಲ್ಲರನ್ನು ಕೊಲ್ಲತೊಡಗಿತು. ಅದನ್ನು ಸಹ ಲೋಕೋಪಕ್ಕಾರಕ್ಕಾಗಿ ಸದಾಶಿವನೆ ಸವಿದನು. ಇದರಿಂದ ಪರಮೇಶ್ವರನಿಗೆ “ ಶ್ರೀ ಕಂಠ “ “ ನಂಜುಂಡ “ ಎಂಬ ಹೆಸರುಗಳುಂಟಾದುವು.
ಶೌನಕಾದಿ ಋಷಿಗಳು ಸೂತಪುರಾಣಿಕರನ್ನು “ ಈ ಕ್ಷೇತ್ರಕ್ಕೆ ‘ ಗರಳಪುರಿ’ ಎಂಬ ಹೆಸರು ಹೇಗೆ ಉಂಟಾಯಿತು? “ ಎಂದು ಕೇಳಿದಕ್ಕೆ ಸೂತ ಪುರಾಣಿಕರು ಹೀಗೆ ಹೇಳಿದರು:- ಸಮುದ್ರಮಥನ ಕಾಲದಲ್ಲಿ ಅಮೃತ ಲಕ್ಷ್ಮಿ ಉಚ್ಚೈಸ್ರವಸ್ಸು ಮುಂತಾದೆಲ್ಲವೂ ಹುಟ್ಟಿದುವಲ್ಲದೇ ಕಾಲಕೂಟವೆಂಬ ವಿಷವೂ ಹುಟ್ಟಿತು. ಪರಮೇಶ್ವರನು ಲೋಕೋದ್ಧಾರಕ್ಕಾಗಿ ಆಕಾಲಕೂಟವನ್ನು ಧರಿಸುವಲ್ಲಿ ಒಂದು ತೊಟ್ಟು ವಿಷವು ದರ್ಭೆಯ ಮೇಲೆ ಬಿತ್ತು. ಅಮೃತವನ್ನು ಹಂಚುತ್ತಿದ್ದ ಮೋಹಿನಿಯನ್ನು ಕೇಶೀ ರಾಕ್ಷಸನು ಮೋಹಿಸಲು ಒಂದು ತೊಟ್ಟು ವಿಷವನ್ನು ಅವನಿಗೆ ಕುಡಿಸಿದಳು. ಶ್ರೀ ನಾರಾಯಣ ಹಸ್ತಸ್ಪರ್ಶವಾದ್ದರಿಂದ ಇವನು ಬಲಿಷ್ಠನಾದ್ದನು. ಆ ವಿಷಸಂಭಂದ ಇಲ್ಲಿ ನಿಂತಿದ್ದರಿಮದ ಇದಕ್ಕೆ “ ಗರಳಪುರಿ” ಅಥವಾ “ ನಂಜನಗೂಡು” ಎಂಬ ಹೆಸರು ಬಂದಿತು. ಪಾತಾಳದಲ್ಲಿ ಕಪಿಲ ಋಷಿಗಳು ತಪಸ್ಸು ಮಾಡುವಾಗ್ಗೆ ಸಗರ ಚಕ್ರವರ್ತಿಯ 64 ಸಾವಿರ ಮಕ್ಕಳು ಅವರ ತಪ್ಪಸಿಗೆ ವಿಘ್ನಮಾಡಿದುದಕ್ಕಾಗಿ ಸುಟ್ಟು ಬೂದಿಯಾದರು. ಕಪಿಲ ಋಷಿಗಳು ತಪೋವಿಘ್ನವಾದುದರಿಂದ ಅಲ್ಲಿ ಬಿಟ್ಟು ನೀಲಾಚಲವನ್ನು ಸೇರಿ ತಪಸ್ಸು ಮಾಡಲು, ಪರಮೇಶ್ವರನು ಪ್ರತ್ಯಕ್ಷನಾಗಿ “ ನಿನ್ನ ಬ್ರಹ್ಮರಂಧ್ರರಿಂದ” ಎಂದು ಅನುಗ್ರಹಿಸಿದಂತೆಯೇ ತುಳಸಿ ವೃಕ್ಷವು ಅಮೃತೋಪಮಯವಾದ ಜಲವುಳ್ಳ ಕಪಿಲಾ ನದಿಯೂ ಹುಟ್ಟಿ ಹರಿದು ತಿರುಮಕೂಡ್ಲು ಬಳಿ ಕಾವೇರಿ ಸಂಗಮವಾಗುತ್ತದೆ. ಈ ಸಂಗಮದಲ್ಲಿ ತಾನು ವಾಸಿಸುವುದಾಗಿ ಪರಮೇಶ್ವರನು ಕಪಿಲಾಋಷಿಗಳಿಗೆ ಹೇಳಿದನು.
ಶ್ರೀರಾಮನು ಸೀತೆಯನ್ನು ಹುಡುಕುವಾಗ್ಗೆ ಈ ಕಪಿಲಾ ನದಿಯಲ್ಲಿ ಸ್ನಾನಮಾಡಿ ನಿತ್ಯಕರ್ಮಗಳನ್ನು ನೆರವೇರಿಸಿ ಶುಚಿಭೂರ್ತನಾಗಿ ಹೊರಟಿದ್ದರಿಂದ ಪರಮಾಶ್ಚರ್ಯವಾದ ಸೇತುವೆಯನ್ನು ಕಟ್ಟಿಸಿ ಲಂಕೆಯನ್ನು ಪ್ರವೇಶಿಸಿ ರಾವಣಾದಿರಾಕ್ಷಸರನ್ನು ಸಂಹರಿಸಿ, ಸಖನಾದ ವಿಭೀಷಣನಿಗೆ ರಾಜ್ಯಾಭೀಷೇಕಮಾಡಿ ಈ ರೀತಿಯಾಗಿ ಎಲ್ಲಾ ಕಾರ್ಯಗಳಲ್ಲಿಯೂ ಜಯಶೀಲನಾಗಿ ಸೀತೆಯನ್ನು ಕರೆದುಕೊಂಡು ಬಂದನು. ವಾಪಸ್ಸು ಕಪಿಲಾಶ್ರಮದಲ್ಲಿದ್ದು ನದಿ ಸ್ನಾನಮಾಡಿ ಪಶ್ಚಿಮವಾಹಿನಿ ತೀರದಲ್ಲಿ ಸೈಕತಲಿಂಗಪ್ರತಿಷ್ಠೆ ಮಾಡಿ ಅನಂತರ ಆಂಜನೇಯನು ತಂದ ಲಿಂಗವನ್ನು ಪ್ರತಿಷ್ಠಿಸಿ ದಕ್ಷಿಣವಾಹಿನೀ ಮಾರ್ಗವಾಗಿ ಭೃಗುಸಂಗಮತೀರದಲ್ಲಿ ಸ್ನಾನವನ್ನೂ ಶಿವಪೂಜೆಯನ್ನು ಮಾಡಿದನು. ಉತ್ತರವಾಹಿನಿಗೆ ಬರಲು ಬ್ರಹ್ಮನು ಶ್ರೀರಾಮನ ಭೇಟಿ ಮಾಡಿದನು. ಈ ಸ್ಥಳಕ್ಕೆ “ ರುದ್ರ ಪುಷ್ಕರಣಿ” ಎಂದು ಹೆಸರು. ಆನಂತರ ಸಂಗಮಸ್ನಾನಮಾಡಿ ಶ್ರೀ ಆದಿಕೇಶವ ಶ್ರೀ ಶ್ರೀಕಂಠೇಶ್ವರರ ದರ್ಶನಮಾಡಿ, ಶಿವಪೂಜೆ ನೆರವೇರಿಸಿ ಭಾರ್ಯಾಭ್ರಾತೃಗಳ ಸಮೇತ ಅಯೋಧ್ಯೆಗೆ ಸೇರಿ ಚಕ್ರವರ್ತಿಯಾಗಿ ಪ್ರಕಾಶಿಸಿದನು. ವಶಿಷ್ಠ ಪತ್ನಿಯಾದ ಅರುಂಧತಿಯೂ ಇಂಧ್ರ ಪತ್ನಿಯಾದ ಶಚಿದೇವಿಯೂ ಈ ನದಿಯಲ್ಲಿ ಸ್ನಾನಮಾಡಿ ರೂಪವತಿಯರಾಗಿ ಬೆಳಗಿದರು. ಕಶ್ಯಪಪತ್ನಿಯಾದ ಅದಿಥಿಯೂ ಪುತ್ರಾರ್ಥಿನಿಯಾಗಿ ಈ ನದಿ ಸಂಗಮದಲ್ಲಿ ಮುಳುಗಿ ದೇವರಾಜಾದಿ ಸುತರನ್ನು ಪಡೆದಳು .
ಕೌಂಡಿನ್ಯ ಋಷಿಗಳು ಪತ್ನಿ ಸುಶೀಲಾದೇವಿಯೂ ಅನಂತನ ವ್ರತವನ್ನು ಮಾಡಿ ಸಕಲ ಇಷ್ಟಾರ್ಥವನ್ನೂ ಪಡೆದಳು. ಅದು ತಮ್ಮ ತಪಶ್ಯಕ್ತಿಯಿಂದ ಲಭಿಸಿತ್ತೆಂದು ಯೋಚಿಸಿ ಹೆಂಡತಿಯ ಕೈಯಲ್ಲಿದ ದಾರವನ್ನು ಕಿತ್ತು ಬೆಂಕಿಯಲ್ಲಿ ಹಾಕಿದರು. ಸುಶೀಲೆಯೂ ತಕ್ಷಣವೇ ಆ ದಾರವನ್ನು ತೆಗೆದುಕೊಂಡು ಹಾಲಿನಲ್ಲಿ ಹಾಕಿ ಪುನಃ ಕಟ್ಟಿಕೊಂಡಳು. ಆ ದಿವಸ ರಾತ್ರಿಯೇ ಮನೆಗೆ ಕಳ್ಳರು ಬಿದ್ದು ಇದ್ದುದನ್ನೆಲ್ಲಾ ಅಪಹರಿಸಿಕೊಂಡು ಹೋದರು. ಮನೆಗೂ ಬೆಂಕಿಹತ್ತಿ ಸುಟ್ಟು ಬೂದಿಯಾಯಿತ್ತು. ಆಗ ಋಷಿಯೂ ಬಹು ಸಂಕಟಪಟ್ಟು ಸುಶೀಲೆಯ ಕೋರಿಕೆಯಂತೆ ತೀರ್ಥಸ್ನಾನಗಳನ್ನು ಮಾಡುತ್ತಾ ಶಿವ ಕ್ಷೇತ್ರಗಳಲ್ಲಿ ತಿರುಗಿ ಪೂಜೆಗಳನ್ನು ಮಾಡುತ್ತಾ ಇರುವಲ್ಲಿ ಶ್ರೀ ಮದ್ದನಂತಪದ್ಮನಾಭಸ್ವಾಮಿಯೂ ಋಷಿಗೆ ಪ್ರತ್ಯಕ್ಷನ್ನಾಗಿ ಅನಂತನ ವ್ರತಾಚರಣೆಯನ್ನು ನಿರೂಪಿಸಿ ಗೋವರ್ಧನ ಪರ್ವತದಲ್ಲಿ ಆ ವ್ರತವನ್ನು ಸಾಂಗವಾಗಿ ಆಚರಿಸಿ ಪುನಃ ಸಕಲ ಸಂಪತ್ತನ್ನು ಹೊಂದಿ ಸುಖಿಯಾಗಿ ಕಪಿಲಾ ಕೌಂಡಿನಿ ಸಂಗಮಕ್ಕೆ ಬಂದು ಸ್ನಾನ, ಜಪ ಪೂಜಾದಿಗಳನ್ನು ಮಾಡಿ ಶ್ರೀ ಶ್ರೀಕಂಠೇಶ್ವರಸ್ವಾಮಿ ಆದಿಕೇಶವಮೂರ್ತಿ ಯನ್ನು ಸೇರಿಸಿ ಮುಕ್ತಿಹೊಂದಿದನು.
ಸಮಸ್ತ ದೇವರ್ಷಿಗಳೂ ಶಿವನ ದರ್ಶನಕ್ಕಾಗಿ ಕೈಲಾಸಕ್ಕೂ ವಿಷ್ಣು ದರ್ಶನಕ್ಕಾಗಿ ವೈಕುಂಠಕ್ಕೂ ಹೋಗಿ ಅಲ್ಲಿ ಅವರನ್ನು ವಿಚಾರಿಸಲು ಕಪಿಲಾ ಕೌಂಡಿನಿ ಸಂಗಮ ಸ್ಥಾನವಾದ ಗರಳಪುರಿಯಲ್ಲಿ ಶಂಕರನಾರಾಯಣರೀರ್ವರು ವಿಹರಿಸುತ್ತಿದ್ದದನ್ನು ಕಂಡರು. ಭೂ ದೇವಿಯೂ ತನ್ನ ಮೇಲೆ ಬಿದ್ದ ವಿಷವನ್ನು ಸೇವೆಸಿ ಮಹದುಪಕಾರ ಮಾಡಿದುದ್ದಕ್ಕಾಗಿ ಶ್ರೀ ಶಂಕರನನ್ನು ಬಹಳವಾಗಿ ಸುತ್ತಿಸಿ, ತನ್ನಲ್ಲಿಯೇ ವಾಸಿಸಬೇಕೆಂದು ಕೇಳಿಕೊಂಡಳಾದ್ದರಿಂದ ಸಾಂಭಮೂರ್ತಿಯೂ ಈ ಗರಳಪುರಿಯಲ್ಲಿಯೇ ನಿಂತುಬಿಟ್ಟನು. ಈ ಕ್ಷೇತ್ರವೂ ಕೇಶೀಸಂಹಾರ ಸ್ಥಳವಾದ್ದರಿಂದ ಭೂಮಿಯೂ ಮೃತ್ತಿಕೆಯಾಗಿ ಇದರಿಂದ ಸಮಸ್ತಭೀಷಣವಾದ ರೋಗಗಳೂ ನಿವಾರಣೆಯಾಗುವಂತೆ ಪರಶಿವನು ವರವಿತ್ತಿ ಶ್ರೀ ಸಂಗಮೇಶ್ವರನೆಂಬ ಹೆಸರಿನಲ್ಲಿ ಅಲ್ಲಿ ನೆಲೆಸಿದ್ದಾನೆ.
ಪಾರ್ವತೀಪರಮೇಶ್ವರರು ಕಪಿಲಾನದಿಯಲ್ಲಿ ಜಲಕ್ರೀಡೆಯಾಡುವಾಗ್ಗೆ ಸ್ವಾಮಿಯ ಕಿರೀಟದಲ್ಲಿ ಒಂದು ಮಣಿಯು ಬಿದ್ದು ಹೋಯಿತು. ಆ ಜ್ಞಾಪಕಾರ್ಥವಾಗಿ ಮಣಿಕರ್ಣಿಕಾಘಟ್ಟ ಎಂದು ಹೆಸರು ಬಂದಿತು. ಪರಮೇಶ್ವರನ ಅಪ್ಪಣೆಯಂತೆ ಗಂಗೆಯೂ ಇಲ್ಲಿ ಗುಪ್ತಗಾಮಿನಿಯಾಗಿ ಇಲ್ಲಿ ನಿಂತಳು. ಕಾಶಿ ಕ್ಷೇತ್ರದಲ್ಲಿ 3 ದಿವಸ ಸ್ನಾನ ಮಾಡಿದರೆ ಮುಕ್ತಿಯಾಗುವಲ್ಲಿ ಇಲ್ಲಿ ಒಂದು ಸ್ನಾನಮಾಡಿ ಇಂದು ರಾತ್ರಿ ವಾಸಮಾಡಿದರೆ ಮುಕ್ತಿಯಾಗುವಂತೆ ಶಿವನವರವಾಯಿತಲ್ಲದೆ. ಈ ನದಿಯಲ್ಲಿ ವೃಶ್ಚಿಕ ಸಂಕ್ರಮಣದಲ್ಲಿ ಒಂದು ತಿಂಗಳು ಸ್ನಾನ ಮಾಡಿ ನನ್ನ ದರ್ಶನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಕಾರ್ತೀಕ ಸೋಮವಾರ ಪೌರ್ಣಮಿ ನನಗೆ ಪ್ರೀತಿಯಾದ ದಿವಸ ಆ ದಿವಸದಲ್ಲಿ ಅರುಣೋದಯದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಸೋಮವಾರ ನಕ್ತ ಮಾಡಿದರೆ ಕ್ರತುಮಾಡಿದ ಫಲವಾಗುತ್ತದೆ. ಎಂದು ವರವನಿತ್ತನು. ಆದ್ದರಿಂದ ವೃಶ್ಚಿಕಮಾಸದಲ್ಲಿ ಸಂಕ್ರಮಣದ ದಿವಸ ಅಷ್ಟತೀರ್ಥ ನಡೆಯುತ್ತದೆ. ಇದಕ್ಕೆ ಚತುಷ್ಟತೀರ್ಥಾಲಂಕೃತ ಮಣಿಕರ್ಣಿಕಾತೀರ್ಥ ಎಂದು ಹೆಸರು ಬಂದಿತು.
ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯೂ ತಪಸ್ಸು ಮಾಡಿ ಗಂಡನನ್ನು ಪಡೆಯಲು ಕ್ಷೀರಸಮುದ್ರ ರಾಜನ ಅಪ್ಪಣೆಯಂತೆ ಈ ಸಂಗಮ ಭೂ ಕೈಲಾಸ ಕ್ಷೇತ್ರದಲ್ಲಿ ತಪಸ್ಸು ಮಾಡಲು ಪರಮೇಶ್ವರನು ಲಕ್ಷ್ಮಿಗೆ ಪ್ರತ್ಯಕ್ಷನ್ನಾಗಿ ಆಕೆಯ ಇಷ್ಟಪ್ರಕಾರ ಶ್ರೀಮನ್ನಾರಾಯಣನಿಗೆ ಲಕ್ಷ್ಮಿ ಕಲ್ಯಾಣ ಮಾಡಿಸಿದನು.
ದೈತ್ಯರ ಸಂಹಾರ ಕಾಲದಲ್ಲಿ ಶ್ರೀಮನ್ನಾರಾಯಣನಿಗೂ ಆತನ ಸುದರ್ಶನವೆಂಬ ಚಕ್ರಕ್ಕೂ ಸಂವಾದ ನಡೆದು ಚಕ್ತವೂಕ್ಋತವೀರ್ಯನ ಮಗನಾಗಿ ಹುಟ್ಟಿತು. ಶ್ರೀ ಮನ್ನಾರಾಯಣನು ಜಮದಗ್ನಿಯ ಮಗನಾದ ಪರಶುರಾಮನಾಗಿ ಅವತರಿಸಿದನು. ಪರಶುರಾಮನು ತಂದೆಯ ಆಜ್ಞಾನುಸಾರವಾಗಿ ತಾಯಿಯಾದ ರೇಣುಕಾ ದೇವಿಯ ಶಿರವನ್ನು ಛೇದಿಸಿ ಕೂಡಲೇ ತಂದೆಯ ವರದಿಂದ ಆಕೆಯನ್ನು ಬದುಕಿಸಿಕೊಂಡನು. ಭೂ ಕೈಲಾಸವಾದ ಈ ಗರಳಪುರಿ ಕ್ಷೇತ್ರಕ್ಕೆ ಬಂದು ತಪೋಸ್ಥಳವನ್ನು ನಿರ್ಮಾಣ ಮಾಡುವುದಕ್ಕಾಗಿ ವಿಷಪ್ರಕರಿ ಗಿಡವನ್ನು ತನ್ನಕೊಡಲಿಯಿಂದ ತರಿಯಲು ಸ್ವಾಮಿಯ ತಲೆಗೆ ಏಟು ಬಿದ್ದು ರಕ್ತ ಹರಿಯಿತು. ಪರಶುರಾಮನಿಗೆ ಗಾಬರಿಯಾಗಿ ದಿಕ್ಕುತೋರದೆ ನಿಂತಿರಲು ಸ್ವಾಮಿಯು ಪ್ರತ್ಯಕ್ಷನ್ನಾಗಿ ಕೇಶಿಸಂಹಾರಸ್ಥಳದ ಮೃತ್ತಿಕೆ ತಂದು ಗಾಯಕ್ಕೆ ಹಚ್ಚಿಕೊಂಡು ಮಾತೃಹತ್ಯಾದೋಷವನ್ನು ನಿವಾರಣೆ ಮಾಡಿದನು. ಆ ನಂತರ ಪರಶುರಾಮನು ದೇವರಿಗೆ ಅಭಿಷೇಕಾದಿ ಅರ್ಚನೆಗಳನ್ನು ಮಾಡಿ ಬಹಳಕಾಲವಿದ್ದೂ ಯಜ್ಞ, ಯಾಗ, ಧಾನ, ಧರ್ಮಾದಿಗಳನ್ನು ಮಾಡಿ ಈಶ್ವರಾಜ್ಞೆಯಂತೆ ತನ್ನ ಹೆಸರಿನಲ್ಲಿ ಕ್ಷೇತ್ರವನ್ನು ನಿರ್ಮಾಣ ಮಾಡಿ ಪಶ್ಚಿಮಸಮುದ್ರಕ್ಕೆ ಪ್ರಯಾಣಮಾಡಿದನು.
ಶ್ರೀ ಶ್ರೀಕಂಠೇಶ್ವರಸ್ವಾಮಿ ಮೂಲವರ ಗುಡಿ ಎಡಪಾರ್ಶ್ವದ ಗುಡಿಯಲ್ಲಿರುವ ಶ್ರೀ ನಾರಾಯಣಸ್ವಾಮಿಯ ಮೂಲವರು ಉದ್ಬವಮೂರ್ತಿಯೆಂದೂ ಆದಿಕೇಶವಮೂರ್ತಿಯೆಂದೂ ಹೇಳುತ್ತಾರೆ. ದೇವಸ್ಥಾನದಲ್ಲಿರುವ ಉತ್ಸವ ವಿಗ್ರಹಗಳನ್ನು ಯಾರು ಎಲ್ಲಿಂದ ಯಾವಾಗ ತಂದರು ಎಂಬುದು ಯಾರಿಗೂ ತಿಳಿಯದು. ಈ ವಿಷಯದಲ್ಲಿ ಕಾಗದ ಪತ್ರಗಳು ಇಲ್ಲ ಅವುಗಳು ಸಹ ಬಹು ಅನಾದಿಯಾಗಿವೆಯೆಂದು ಇಲ್ಲಿ ತಿಳಿದು ಬರುತ್ತದೆ. ಶ್ರೀ ಚಂದ್ರಶೇಖರ ಉತ್ಸವಮೂರ್ತಿ ಮತ್ತು ಅಮ್ಮನವರು ಸಹ ಗೌತಮರ ಆರಾಧನೆಯಲ್ಲಿ ಇದ್ದುವೆಂದು ಪ್ರತೀತಿ ಇರುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ