ಬೇಲೂರು ವೈಕುಂಠದಾಸ, ಬೇಲೂರು (ಕ್ರಿ.ಶ 1500)

ಬೇಲೂರಿನಲ್ಲೇ ಇದ್ದುಕೊಂಡು ಕನ್ನಡದ ಅನ್ನಮಾಚಾರ್ಯರಾಗಿ ಎಲ್ಲರಿಂದಲೂ ಗೌರವಾನ್ವಿತರಾದ 'ದಾಸೋತ್ತಮನು ನೀನೇ ವೈಕುಂಠದಾಸೋತ್ತಮನು ನೀನೇ'. ವಿಶಿಷ್ಟಾದ್ವೈತ ತತ್ವದಲ್ಲಿ ಕೀರ್ತನೆಗಳನ್ನು ರಚಿಸಿದ್ದರೂ ಈವರೆಗೆ ಸಾಹಿತ್ಯ ಚರಿತ್ರೆಯಲ್ಲಿ ಹೆಚ್ಚಿನ ಚರ್ಚೆಗಳು ಆಗದೇ ಇರುವುದು ಬೇಸರದ ಸಂಗತಿ.
ಶ್ರೀವೈಷ್ಣವ ಕಲ್ಪನೆಯಾದ ಲಕ್ಷ್ಮೀಸಮೇತ ವಿಷ್ಣುನನ್ನು ಕಂಡಿದ್ದಾರೆ ಸೌಂದರ್ಯ ವರ್ಣನೆ ದಾಸರಿಗೆ ಅತ್ಯಂತ ಪ್ರಿಯವಾದ ಆಸಕ್ತಿ.
'ಶ್ರೀದೇವಿಗೆ ಯೌವನವರೆಯಹುದೆಂದು ರವಿಶಶಿಗಳ ನೀ ಪಡೆದೆ
.... ಇಂದ್ರಾದಿಗಳ ನೀನೇ ಪಡೆದೆ ವಾಯು ವಿರಂಚಿ ಮೊದಲಾದವರ ಪಡೆದೆ
ಶ್ರೀದೇವಿಯನೆದೆಗೇರಿಸಿಕೊಂಡೆ .....ಪೇರ ಧರಿಸಿಕೊಂಡೆ'
ಎಂಬ ಈ ಉಗಾಭೋಗದಲ್ಲಿ ಈ ಎರಡೂ ಲಕ್ಷಣಗಳಿರುವುದನ್ನು ನೋಡಬಹುದು.
    ದಾಸರು ಲಕ್ಷ್ಮಿಯನ್ನು ಕುರಿತು ರಚಿಸಿರುವ ಎರಡೇ ಕೃತಿಗಳೂ ಅತ್ಯಂತ ಮಧುರವಾಗಿವೆ. 'ಅಂತು ಸಿಂಗರವ ಮಾಡಿ' ಮತ್ತು 'ಗಾಡಿ ಎತ್ತಲಿಂದ ಬಂದದೇ' ಈ ಎರಡೂ ಲಕ್ಷ್ಮಿಯ ಸೌಂದರ್ಯ ವರ್ಣನೆಯನ್ನೇ ಹೇಳುತ್ತವೆ. ದಾಸರು ರಚಿಸಿರುವ ಒಂದೇ ಒಂದು ನಿಂದಾಸ್ತುತಿ ಭಕ್ತನೊಬ್ಬನ ಆಧ್ಯಾತ್ಮಶಕ್ತಿಯು ದ್ಯೋತಕವಾಗಿ ಬಂದಿದೆ. ಶ್ರೀಹರಿಯನ್ನು ವರ್ಣಿಸುವಲ್ಲಿ ತೋರಿದ ಸೌಂದರ್ಯಪ್ರಿಯತೆಯನ್ನೇ ಅವಗುಣವಾಗಿಸಿ ದೇವರನ್ನು ಜಗ್ಗಿಸುವಪರಿ ಅದ್ಭುತವಾದ ಪ್ರತಿಮಾ ಲೋಕವನ್ನು ಸೃಷ್ಟಿಸುತ್ತದೆ.
ಲೋಕನೀತಿಯನ್ನು ಕುರಿತ ಕೀರ್ತನೆಗಳೂ ವೈಕುಂಠದಾಸರಲ್ಲಿದ್ದು ಆ ಮೂಲಕ ಅವರ ಕೀರ್ತನೆಗಳು ಸಮಾಜಮುಖಿಯಾಗಿರುವುದನ್ನು ಗಮನಿಸಬಹುದು.
ಕಟಾಕಟಾ ಕಂಡೆವಲ್ಲ
ಕುಟಿಲವರ್ತನ ಕೆಲಕೆಲವು ಈ ಕಲಿಯುಗದಿ
ಎಂಬುದು ಅತ್ಯಂತ ಮುಖ್ಯವಾದ ಸಾಮಾಜಿಕ ಚಿಂತನೆಯ ಕೃತಿಯಾಗಿದೆ.
'ಮಳೆಯಲ್ಲ ಬಂದರಿಳೆ ಬೆಳೆಯದು ಬೆಳಯೆ ಧರಣಿ
ಹುಲಿಸಿಲ್ಲ ಹುಲಿಸಾದರಿಲ್ಲ ಪ್ರಜೆಗೆ
ಸಲುವಕೊರಲ್ಪವನು ಬಿಡರು ರಾಜರುಗಳ ಹಾ
ಮಳಿಯಲುಳುಹಿಲ್ಲಯನ್ನಂತು ಕೃಷಿಕರಿಗೆ'
ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. 'ಭಯ, ಮಮತೆ', 'ಸ್ವಾಮಿದ್ರೋಹ', 'ಬಾಯುಬಡುಕತನ' ಮುಂತಾದ ಸಾಮಾಜಿಕ ಕ್ಲೀಷೆಗಳನ್ನು ದಾಸರು ಅರ್ಥಪೂರ್ಣವಾಗಿ ಬಯಲಿಗೆಳೆದಿದ್ದಾರೆ.
'ಮಸುಮತಿಯ ಸುರವಧೆ ಘನವಾಯಿತಲ್ಲ'
ಎಂಬ ಸಾಲಿಗೆ ಸಮಾಜದಲ್ಲಿ ನಡೆಯುವ ನೈತಿಕ ಅಧಃಪತನವನ್ನು ಹೇಳುವ ಹಾಗೆಯೇ ಸಮಕಾಲಿನ ರಾಜಕೀಯ ಅರಾಜಕತೆಯನ್ನು ಹೇಳಬಹುದಾಗಿದೆ, ಆಗಿನ ಮುಸಲ್ಮಾನ ದಾಳಿಯನ್ನು ಇದು ಸೂಚಿಸುತ್ತಿರುವಂತಿದೆ.
'ಮಾಡು ದಾನ ಧರ್ಮ ಪರಉಪಕಾರ'
'ಏನು ನೆಲೆಯೆನುತಿಹೆ ಮನುಜ'
'ಸತ್ಯಂ ವದ ಧರ್ಮಂ ಚರ'
'ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ'
ಇತ್ಯಾದಿ ಕೀರ್ತನೆಗಳಲ್ಲಿ ಸಮಾಜಕ್ಕೆ ಒಳಿತನ್ನು ಬಯಸುವ ಆಶಯಗಳಿವೆ. ಲೋಕ ವ್ಯವಹಾರಗಳನ್ನು ತಿದ್ದುವುದಕ್ಕಿಂತ ಅದರ ವಾಸ್ತವಸ್ಥಿತಿಯನ್ನು ತಿಳಿಸುವ ರೀತಿಯಲ್ಲಿ ದಾಸರ ಸಾಮಾಜಿಕ ಸ್ಪಂದನವಿದೆ.

ಬೈರವಿ ರಾಗದಲ್ಲಿರುವ ಏಕ ತಾಳದಲ್ಲಿರುವ ಉಗಾಭೋಗ
ಶ್ರೀದೇವಿಗೆ ಯೌವನವರೆಯದುಹೆಂದು ರವಿಶಶಿಗಳ ನೀ ಪಡದೆ
ಶ್ರೀದೇವಿಗೆ ಯೌವನವರೆಯಹುದೆಂದು ಇಂದ್ರಾಗ್ನಿಗಳ ನೀನೇ ಪಡೆದೆ
ಶ್ರೀದೇವಿಗೆ ಯೌವನವರೆಯಹುದೆಂದು ವಾಯುವಿರಿಂಚಿ ಮೊದಲಾದವರ ಪಡದೆ
ಶ್ರೀದೇವಿಯನೆದೆಗೇರಿಸಿಕೊಂಡೇ ಶ್ರೀದೇವಿಯ ಪೇರ ಧರಿಸಿಕೊಂಡೆ
ಶ್ರೀದೇವಿಗೆ ಮಾರುವೋದೇ ವೇಲಾಪುರವಾಸ ವೈಕುಂಠರಮಣಾ
ನಿನ್ನೊಲವತಿ ಪೋಸ'ತಯ್ಯಾ'

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ