ಕಾಲಭೈರವಾಷ್ಟಕಮ್
ದೇವರಾಜಸೇವ್ಯಮಾನಪಾವನಾಂಘ್ರಿ ಪಂಕಜಂ |
ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ |
ನಾರದಾದಿಯೋಗಿ ವೃಂದವಂದಿತಂ ದಿಗಂಬರಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||1||
ದೇವೇಂದ್ರನಿಂದ ಸೇವಿಸಲ್ಪಡುತ್ತಿರುವ, ಪವಿತ್ರ ಚರಣಾಂಬುಜಗಳುಳ್ಳ, ಉರುಗನನ್ನು ಯಜ್ಞೋಪವೀತವನ್ನಾಗಿ ಧರಿಸಿರುವ ಕೃಪಾಕರನನ್ನು, ನಾರದಾದಿ ಯೋಗಿಗಳ ಸಮೂಹದಿಂದ ವಂದಿಸಲ್ಪಡುತ್ತಿರುವವನನ್ನು, ದಿಗಂಬರನನ್ನು, ಕಾಶಿಯ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಭಾನು ಕೋಟಿ ಭಾಸ್ಕರಂ ಭವಾಬ್ಧಿ ತಾರಕಂ ಪರಂ |
ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್ ||
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||2||
ಕೋಟಿಸೂರ್ಯ ತೇಜಸ್ಸುಳ್ಳವನನ್ನು, ಭಕ್ತರನ್ನು ಭವಸಾಗರದಿಂದ ಪಾರುಮಾಡುವನನ್ನು, ಶ್ರೇಷ್ಠನನ್ನು, ನೀಲಕಂಠನನ್ನು, ಇಚ್ಛಿತ ಫಲನೀಡುವವನನ್ನು, ಮುಕ್ಕಣ್ಣನನ್ನು, ಕಾಲನಿಗೆ ಕಾಲನಾಗಿರುವವನನ್ನು, ಕಮಲದಂತಹ ಕಣ್ಣುಗಳುಳ್ಳವನನ್ನು, ರುದ್ರಾಕ್ಷಿ-ತ್ರಿಶೂಲಧರನನ್ನು, ಅವಿನಾಶಿಯನ್ನು, ಕಾಶಿಪಟ್ಟಣದ ಸ್ವಾಮಿಯಾದ ಕಾಲಭೈರವನನ್ನು ಭಜಿಸುತ್ತೇನೆ.
ಶೂಲಟಂಕಪಾಶದಂಡಪಾಣಿಮಾದಿಕಾರಣಂ |
ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ ||
ಭೀಮವಿಕ್ರಮಂ ಪ್ರಭುಂ ವಿಚಿತ್ರ ತಾಂಡವ ಪ್ರಿಯಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||3||
ತ್ರಿಶೂಲ, ಕೊಡಲಿ, ಪಾಶ, ದಂಡಗಳನ್ನು ಕೈಗಳಲ್ಲಿ ಹಿಡಿದವನನ್ನು, ಪ್ರಪಂಚದ ಮೂಲಕಾರಣವನ್ನು, ಶ್ಯಾಮವರ್ಣದ ದೇಹದವನ್ನು, ಆದಿದೇವನ್ನು, ನಾಶರಹಿತನನ್ನು, ಕ್ಲೇಶವಿಲ್ಲದವನ್ನು, ಶಂಕರನನ್ನು, ವಿಚಿತ್ರ ತಾಂಡವ ನೃತ್ಯ ಪ್ರಿಯನಾದ ಪ್ರಭುವನ್ನು ಕಾಶೀಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಭುಕ್ತಿ ಮುಕ್ತಿದಾಯಕಂ ಪ್ರಶಸ್ತ ಚಾರು ವಿಗ್ರಹಂ |
ಭಕ್ತ ವತ್ಸಲಂ ಸ್ಥಿರಂ ಸಮಸ್ತಲೋಕ ವಿಗ್ರಹಮ್ ||
ನಿಕ್ವಣನ್ಮನೋಜ್ಞಹೇಮ ಕಿಂಕಿಣೀಲಸತ್ಕಟಿಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||4||
ಭೋಗ-ಮೋಕ್ಷಗಳನ್ನು ಕೊಡುವವನನ್ನು, ಒಳ್ಳೆಯ ಸುಂದರ ಶರೀರವುಳ್ಳವನನ್ನು, ಭಕ್ತವತ್ಸಲನನ್ನು, ಶಾಶ್ವತನನ್ನು, ಲೋಕಗಳೆಲ್ಲವನ್ನೂ ದೇಹವಾಗುಳ್ಳವನನ್ನು, ಮನೋಜ್ಞನನ್ನು, ಶೋಭಿಸವ ಬಂಗಾರದ ನಡುಪಟ್ಟಿಯುಳ್ಳವನನ್ನು, ಕಾಶೀಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಧರ್ಮಸೇತುಪಾಲಕಂ ತ್ವಧರ್ಮ ಮಾರ್ಗನಾಶಕಂ |
ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್ ||
ಸ್ವರ್ಣವರ್ಣಶೇಷ ಪಾಶ ಶೋಭಿತಾಂಗ ಮಂಡಲಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||5||
ಧರ್ಮದನಾಡನ್ನು ರಕ್ಷಿಸುವವನನ್ನು, ಅಧರ್ಮ ಮಾರ್ಗ ನಾಶಮಾಡುವವನನ್ನು ಕರ್ಮ ಬಂಧನದಿಂದ ಬಿಡುಗಡೆ ಮಾಡುವವನನ್ನು, ಸುಖದಾಯಕನನ್ನು, ಸರ್ವಶಕ್ತನನ್ನು, ಹೇಮವರ್ಣದ ಸರ್ಪಪಾಶದಿಂದ ಶೋಭಿತನಾದವನನ್ನು, ಕಾಶೀಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ರತ್ನಪಾದುಕಾಪ್ರಭಾಭಿರಾಮ ಪಾದಯುಗ್ಮಕಂ |
ನಿತ್ಯ ಮದ್ವಿತೀಯ ಮಿಷ್ಟದೈವತಂ ನಿರಂಜನಮ್ ||
ಮೃತ್ಯದರ್ಪನಾಶನಂ ಕರಾಲದಂಷ್ಟ್ರ ಮೋಕ್ಷಣಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||6||
ರತ್ನಕಚಿತ ಪಾದುಕೆಗಳ ತೇಜದಿಂದ ಸುಂದರ ಪಾದಗಳುಳ್ಳವನನ್ನು, ನಿತ್ಯನೂ ಅದ್ವಿತೀಯನನ್ನು, ಇಷ್ಟದೇವತೆಯನ್ನು, ಮೃತ್ಯವಿನ ದರ್ಪನಾಶಮಾಡುವವನನ್ನು, ಮೃತ್ಯವಿನ ಭೀಕರ ಕೋರೆ ಹಲ್ಲುಗಳಿಂದ ಬಿಡುಗಡೆಗೊಳಿಸುವವನನ್ನು, ಕಾಶೀ ಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಅಟ್ಟಹಾಸಭಿನ್ನ ಪದ್ಮ ಜಾಂಡಕೋಶ ಸಂತತಿಂ |
ದೃಷ್ಟಿ ಪಾತನಷ್ಟ ಪಾಪಜಾಲಮುಗ್ರಶಾಸನಮ್ ||
ಅಷ್ಟಸಿದ್ಧಿದಾಯಕಂ ಕಪಾಲ ಮಾಲಿಕಾಧರಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||7||
ಬ್ರಹ್ಮಾಂಡ ಸಮೂಹವನ್ನು ತನ್ನ ಅಟ್ಟಹಾಸದಿಂದ ವಿಭಜಿಸಿದವನನ್ನು, ದೃಷ್ಟಿಕ್ಷೇಪದಿಂದ ಪಾಪಸಮೂಹವನ್ನು ನಾಶಮಾಡುವವನನ್ನು, ಉಗ್ರಶಾಸನವುಳ್ಳವನನ್ನು, ಅಷ್ಟಸಿದ್ಧಿದಯ ಪಾಲಕನನ್ನು ರುಂಡಮಾಲಾಧರನನ್ನು, ಕಾಶೀಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಭೂತಸಂಘನಾಯಕಂ ವಿಶಾಲ ಕೀರ್ತಿದಾಯಕಂ |
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಮ್ ||
ನೀತಿ ಮಾರ್ಗಕೋವಿದಂ ಪುರಾತನಂ ಜಗತ್ಪತಿಂ |
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ ||8||
ಭೂತಸಮೂಹದ ಮುಖ್ಯಸ್ಥನನ್ನು, ಭಕ್ತರಿಗೆ ಹೆಚ್ಚಿನ ಕೀರ್ತಿ ಕೊಡುವವನನ್ನು, ಕಾಶೀ ಪಟ್ಟಣದಲ್ಲಿರುವವರ ಪಾಪ ಪುಣ್ಯಗಳನ್ನು ಶೋಧಿಸುವವನನ್ನು, ನೀತಿಮಾರ್ಗ ನಿಪುಣನನ್ನು, ಅತ್ಯಂತ ಪ್ರಾಚೀನವಾದ ಹಿರಿಯನನ್ನು ಜಗತ್ಪತಿಯನ್ನು, ಕಾಶೀ ಪಟ್ಟಣದ ಸ್ವಾಮಿ ಕಾಲಭೈರವನನ್ನು ಭಜಿಸುತ್ತೇನೆ.
ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ |
ಜ್ಞಾನಮುಕ್ತಿ ಸಾಧನಂ ವಿಚಿತ್ರ ಪುಣ್ಯ ವರ್ಧನಮ್ ||
ಶೋಕಮೋಹಲೋಭದೈನ್ಯ ಕೋಪತಾಪನಾಶನಂ |
ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ಧ್ರುವಮ್ ||9||
ಯಾರು ಈ ಮನೋಹರವಾದ, ಜ್ಞಾನ-ಮುಕ್ತಿಗೆ ಸಾಧಕವಾದ, ಆಶ್ಚರ್ಯಕರ ಕೀರ್ತಿಯಿಂದ ಪುಣ್ಯವನ್ನು ಹೆಚ್ಚಿಸುವ, ಶೋಕ-ಮೋಹ-ಲೋಭ-ಧೈನ್ಯ-ಕೋಪ-ತಾಪಗಳನ್ನು ನಾಶಗೊಳಿಸುವ ಕಾಲಭೈರವಾಷ್ಟಕವನ್ನು ಪಟಿಸುತ್ತಾರೋ ಅವರು ಕಾಲಭೈರವನ ಚರಣ ಸನ್ನಿಧಿಯನ್ನು ಶಾಶ್ವತವಾಗಿ ಹೊಂದುವರು.
Comments
Post a Comment