Posts

Showing posts from 2017

ಮೂವತ್ತು ಭಾವಗೀತೆಗಳ ಪುಷ್ಪಮಾಲೆ

Image
ತೂಮಣಿ ಮಾಡುತ್ತು ಚುಟ್ರುಮ್ ವಿಳಕ್ಕೆರಿಯ ದೂಪಮ್ ಕಮಳ್ ತ್ತುಯಿಲಣೈ ಮೇಲ್ ಕಣ್ವಳರುಮ್ ಮಾಮಾನ್ ಮಗಳೇ ಮಣಿಕ್ಕದವಂ ತಾಳ್ ತೆರುವಾಯ್ ಮಾಮಿರ್ ಅವಳೈ ಎಳುಪ್ಪೀರೋ, ಉನ್ ಮಗಳ್ ತಾನ್ ಊಮೆಯೋ ಅನ್ರಿ ಚ್ಯೆವುಡೋ ಅನನ್ದಲೋ ಏಮಪ್ಪೆರುನ್ದುಯಿಲ್ ಮನ್ದಿರಪ್ಪಟ್ಟಾಳೋ ಮಾಮಾಯನ್ ಮಾದವನ್ ವೈಗುನ್ದ ನೆನ್ನೆನ್ರು ನಾಮಮ್ ಪಲವುಮ್ ನವಿನ್ರೇಲೋ ರೆಮ್ಬಾವಾಯ್     ಎಂತಹ ಸುಂದರವಾದ ವರ್ಣನೆ. ಒಳಗೆ ಮಾನವ ಮಗಳು ನಿದ್ರಿಸುತ್ತಿದ್ದಾಳೆ. ಆ ಗೃಹವಾದರೋ ಪರಿಶುದ್ಧವಾದ ಮಾಣಿಕ್ಯದಿಂದ ಕಟ್ಟಲ್ಪಟ್ಟಿದೆ. ಸುತ್ತಲೂ ದೀಪಗಳು ಉರಿಯುತ್ತಿವೆ. ಅಗರು, ಹಾಲು ಮಡ್ಡಿ ಮುಂತಾದ ಧೂಫ ಘಮಘಮಿಸುತ್ತಿದೆ. ಅವಳು ಹಂಸತೂಲಿಕಾಕಲ್ಪದಲ್ಲಿ ಮಲಗಿ ನಿದ್ರಿಸುತ್ತಿದ್ದಾಳೆ. ಹೊರಗಿನಿಂದ ಬಾಲೆಯರು ಅವಳನ್ನು ಎಬ್ಬಿಸುತ್ತಿದ್ದಾರೆ. "ಏಳು, ಮಾವನ ಮಗಳೇ, ಚಿಲಕವನ್ನು ತೆಗೆಯುವವಳಾಗು." ಉಹುಂ, ಶ್ರೀ ಕೃಷ್ಣಾನುಭಾವದ ರಸದಲ್ಲಿ ತಲ್ಲಿನಳಾಗಿರುವ ಅವಳು ಏಳುವುದಿಲ್ಲ. ಆಗ ಬಾಲೆಯರು ಅವಳ ತಾಯಿಗೆ ಹೇಳುತ್ತಾರೆ. 'ಅತ್ತೆಯವರೆ ನೀವಾದರೂ ಅವಳನ್ನು ಎಬ್ಬಿಸಿ. ಅವಳೇನು ಮೂಕಿಯೋ, ಕಿವುಡಿಯೋ ಅಥವಾ ಸೋಮಾರಿಯೋ ಕೇಳಿ ಯಾರಾದರೂ ಇವಳಿಗೆ ಮಂಕುಬೂದಿ ಚೆಲ್ಲಿದ್ದಾರೇನು? ಮಂತ್ರ ಮಗ್ಧಳನ್ನಾಗಿ ಮಾಡಿದ್ದಾರೇನು? ಅಥವಾ ಇವಳ ನೆರೆಮನೆಯಲ್ಲೇ ಶ್ರೀಕೃಷ್ಣನಿರುವುದರಿಂದ ರಾತ್ರಿಯೆಲ್ಲಾ, ಅವನು ಇವಳೊಡನಿದ್ದು ಈಗ ತಾನೇ ಎದ್ದು ಹೋಗಿರಬಹುದಾದ್ದರಿಂದ ಈಕೆ ಇನ್ನೂ ಅದೇ ತನ್ಮಯತೆಯಲ್ಲಿದ್ದಾಳೋ...

ಲಲಿತಾ ತ್ರಿಶತೀ ( ಏಕಾರಾದಿನಾಮ ) - 3. ಓಂ ಏಕಾನೇಕಾಕ್ಷರಾಕೃತಯೇ ನಮಃ

ಏಕ, ಮತ್ತು ಅನೇಕವಾದ ಅಕ್ಷರಗಳು ಅಜ್ಞಾನವಿಶೇಷಗಳು ಈಶ್ವರ ರೂಪವಾದ ಚೈತನ್ಯ ಪ್ರತಿ ಬಿಂಬಕ್ಕೆ ಉಪಾಧಿಯಾಗಿರುವ ಶುದ್ಧ ಸತ್ತ್ವ ಪ್ರಧಾನವಾದ ಅಜ್ಞಾನವು ಏಕಾಕ್ಷರವು, ಜೀವ ಪ್ರತಿಬಿಂಬೋಪಾಧಿ ರೂಪವಾಗಿರುವ ಮಲಿನ ಸತ್ತ್ವ ಪ್ರಧಾನವಾದ ಅಜ್ಞಾನಗಳು ಅನೇಕಾಕ್ಷ್ರಗಳು. "ಮಾಯಾ ಚಾವಿದ್ಯಾ ಚ ಸ್ವಯಮೇವ ಭವತಿ" ಎಂದು ಶ್ರುತಿಯಿಂದ ಜೀವೇಶ್ವ್ರ ಪ್ರತಿಬಿಂಬೋಪಾಧಿಗಳ ಭೇದವು ವ್ಯಕ್ತವಾಗುವುದು. ಇವು ಮಾಯಾ ಶಬ್ದದಿಂದ ಕರೆಯಲ್ಪಡುವುವೂ ಪ್ರಕೃತಿ ರೂಪಗಳೂ ಆಗಿವೆ. ಮಾಯಾಂತು ಪ್ರಕೃತಿಂ ಎಂಬ ಶ್ರುತಿಯು ಈ ಅರ್ಥದಲ್ಲಿ ಪ್ರಮಾಣವಾಗಿರುವುದು. ಆ ಅಕ್ಷರವೆಂಬ ಅಜ್ಞಾನಗಳಲ್ಲಿ ಚೈತನ್ಯವು ಪ್ರತಿಬಿಂಬ ಅಥವಾ ಅವಚ್ಛಿನ್ನ ರೂಪವನ್ನು ಹೊಂದುವುದು. ಗಡಿಗೆಯಲ್ಲಿರುವ ನೀರಿನಲ್ಲಿ ಆಕಾಶವು ಪ್ರತಿ ಬಿಂಬರೂಪ ಅಥವಾ ಅವಚ್ಛಿನ್ನರೂಪಗಳಿಂದ ಇರುವುದು. ಅದರಂತೆ ಇರುವ ಚೈತನ್ಯವುಳ್ಳವಳು ಅಥವಾ ಪ್ರಣವ ಮುಂತಾದುದು ಏಕಾಕ್ಷರವು. ಅಕಾರ ಮೊದಲುಗೊಂಡು ಕ್ಷಕಾರ ಪರ್ಯಂತವಿರುವ ವರ್ಣಗಳು ಅನೇಕಾಕ್ಷರಗಳು ಅಂತಹ ಎಲ್ಲ ವರ್ಣಗಳು ಸ್ವರೂಪವಾಗಿ ಉಳ್ಳವಳೂ "ಅಕಾರಾದಿ ಕ್ಷಕಾರಾಂತಾ ಮಾತೃಕೇತ್ಯಭಿಧೀಯತೇ" ಎಂಬ ವಚನದಿಂದ ವರ್ಣಗಳೆಲ್ಲವೂ ಮಾತೃಕಾ ರೂಪವಾದ್ದರಿಂದ ಮಾತೃಕಾಕಾರವುಳ್ಳವಳೂ ಎಂದು ಅರ್ಥವು ಅಥವಾ "ಏ" + "ಕ" ಎಂಬ ಎರಡು ವರ್ಣಗಳು, ಮಿಕ್ಕ ಅನೇಕಾಕ್ಷರಗಳು ಸೇರಿ ಹದಿನೈದು ವರ್ಣಸ್ವರೂಪವಾದ ಮಂತ್ರದ ಆಕೃತಿಯುಳ್ಳವಳು. ಅಥವಾ ಏಕಭೂತವಾಗಿ ಅ...

ಧಾತ್ರೀಹವನದ ವೈಶಿಷ್ಟ್ಯ

Image
   ಅಭ್ಯುದಯಕ್ಕಾಗಿ ಮಾನವನು ಪ್ರಕೃತಿಮಾತೆಗೆ ಸಲ್ಲಿಸುವ ಧಾತ್ರೀಹವನವು ಕಾರ್ತಿಕಮಾಸದಲ್ಲಿ ಆಚರಿಸಲ್ಪಡುತ್ತದೆ. ಈ ಸಮಯವನ್ನು 'ಕೌಮುದೀ ಮಹೋತ್ಸವ' ಕಾಲವೆಂದೂ ಕರೆಯುತ್ತಾರೆ. ಕು - ಎಂದರೆ ಭೂಮಿ, ಮುದ್ - ಎಂದರೆ ಸಂತೋಷ. ಪೈರು-ಫಸಲುಗಳು ಕೈಗೆ ಬಂದಾಗ ಉತ್ತು ಬಿತ್ತಿದ ರೈತನು ಹಿಗ್ಗಿನ ಬುಗ್ಗೆಯಾಗಿ ಕಾರ್ತಿಕದೀಪವನ್ನು ಬೆಳಗಿ ಹಬ್ಬಗಳನ್ನು ಆಚರಿಸುತ್ತಾನೆ. ದೀಪಾವಳಿ, ಬಲಿಪಾಡ್ಯಮಿ, ತುಳಸೀಹುಣ್ಣಿಮೆ - ಇವೇ ಆ ಹಬ್ಬಗಳು.     ಪುಣ್ಯತಮವಾದ ಕಾರ್ತಿಕಮಾಸದಲ್ಲಿ ಅಭಕ್ಷ್ಯಭಕ್ಷಣ, ಅಪೇಯಪಾನ ಮುಂತಾದ ದೋಷಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮತ್ತು ಭೂಮಿಯನ್ನು ಅಗೆಯುವದು, ಕಡಿಯುವದು, ತುಳಿಯುವದೇ ಮುಂತಾದ ನಿರಂತರವಾದ ಹಿಂಸೆಯನ್ನು ಸಹಿಸಿಕೊಂಡು ನಮಗೆ ಸುಜಲ-ಸುಫಲಗಳನ್ನಿತ್ತು ರಕ್ಷಿಸಿ ಸಸ್ಯ ಶ್ಯಾಮಲೆಯಾಗಿ ಕಂಗೊಳಿಸುವ ಭೂಮಾತೆಯಲ್ಲಿ ಕ್ಷಮಾಯಾಚನೆಗಾಗಿ, ಹಾಗೂ ಕಾರ್ತಿಕದಾಮೋದರನ ಪ್ರೀತಿಗಾಗಿ ಸಮಸ್ತ ಪ್ರಕೃತಿಯ ಸಂಕೇತವಾದ ನೆಲ್ಲಿಯಮರದ ಬುಡದಲ್ಲಿ ಮಾಡುವ ಪೂಜಾ-ಹೋಮಗಳೇ ಧಾತ್ರಿಹವನವೆನಿಸುವದು. ಭೂಮಾತೆದಯಾಪಾಲಿಸಿದ ಪೈರನ್ನು ನಾವು ಉಪಯೋಗಿಸುವ ಮುಂಚೆ "ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎಂಬ ದಾಸವಾಣಿಯಂತೆ ಅಲ್ಪಭಾಗವನ್ನಾದ್ರೂ ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗುವ ಸಂದರ್ಭವೇ ಈ ಧಾತ್ರಿಯ ಆರಾಧನೆಯಾಗಿದೆ. ಅಲ್ಲದೆ ಪೈರನ್ನು ಕೊಯ್ಯುವ, ಕುಟ್ಟುವ, ಒಕ್ಕಲಿಕ್ಕುವ, ಬೇಯಿಸುವ, ಅರೆಯುವದೇ ಮುಂತಾದ...

ಲಲಿತಾ ತ್ರಿಶತೀ ( ಏಕಾರಾದಿನಾಮ ) - 2. ಓಂ ಏಕಾಕ್ಷರ್ಯೈ ನಮಃ

ಮುಖ್ಯವಾದ ಅಕ್ಷರ ಅಥವಾ ಮಾಯೆಯೆಂಬ ಉಪಾಧಿಯುಳ್ಳವಳು. ಮಾಯೆಯು ಈಶ್ವ್ರನಿಗೆ ಉಪಾಧಿಯಾಗಿ ಪ್ರತಿಬಿಂಬದಲ್ಲಿ ಸರ್ವಜ್ಞತ್ವ ಮುಂತಾದ ವಿಶೇಷಗಳನ್ನು ಉಂಟುಮಾಡುವುದು. ಅಂತಹ ಮಾಯೆಯು ಆತ್ಮ ಜ್ಞಾನದಿಂದ ಮುಕ್ತಿಯು ಲಭಿಸುವವರೆಗೂ ನಾಶವಾಗದಿರುವುದರಿಂದ ಕೂಟಸ್ಥವೆಂಬ ಅರ್ಥವನ್ನು ಬೋಧಿಸುವ ಅಕ್ಷ್ರ ಶಬ್ದದಿಂದ ಕರೆಯಲ್ಪಡುವುದು ಅಥವಾ ಓಂಕಾರವೆಂಬ ಏಕಾಕ್ಷರವುಳ್ಳವಳು ಸಕಲ ಶಬ್ದಗಳಿಗೂ ಶಬ್ದಗಳ ಮೂಲಕ ಅರ್ಥಗಳಿಗೂ ಪ್ರಕೃತಿಯು ಓಂಕಾರವು ಇದನ್ನು ಪ್ರತ್ಯೇಕವಾಗಿ ಅವಲಂಬಿಸಿ ಪರ-ಅಪರ ಬ್ರಹ್ಮವಸ್ತುವನ್ನು ಉಪಾಸನೆ ಮಾಡಿ ಪರಾಪರ ಬ್ರಹ್ಮತಾದಾತ್ಮ್ಯವನ್ನು ಹೊಂದಬಹುದು. ಆದ್ದರಿಂದ ದೇವಿಯು ಶಬ್ದಬ್ರಹ್ಮರೂಪವಾದ ಪ್ರಣವಾಕ್ಷರವುಳ್ಳವಳು ಅಥವಾ, ಅಖಂಡಾನಂದ ಚೈತನ್ಯರೂಪನಾದ, ಅನಶ್ವರನಾದ ಪರಮೇಶ್ವ್ರನು ಅರ್ಧ ಶರೀರ ಭಾಗದಲ್ಲಿರುವಳು ಅಥವಾ ಮಾಯಾಬೀಜ ಮುಂತಾದ ವರ್ಣಗಳನ್ನು ಉಪಾಸನಾ ಪ್ರತೀಕವನ್ನಾಗಿ ಹೊಂದಿರುವವಳು ಅಥವಾ ಅಖಂಡಾಕಾರವಾದ ವೃತ್ತಿಯಲ್ಲಿ ಚೈತನ್ಯವು ಪ್ರತಿಬಿಂಬಿಸುವುದರಿಂದ ಅಂತಹ ವೃತ್ತಿವ್ಯಾಪ್ತಿ ಮಾತ್ರ ವಿವಕ್ಷೆಯಿಂದ ಅಕ್ಷರ ಪದದ ಅರ್ಥವಾದ ಚೈತನ್ಯಕ್ಕೆ ವಿಷಯಳಾಗುವವಳು. "ಅಥಪರಾ ಯಯಾ ತದಕ್ಷ್ರಮಧಿಗಮ್ಯತೇ" ಎಂಬ ಶ್ರುತಿಯು ವೃತ್ತಿ ವ್ಯಾಪ್ತಿಯನ್ನು ಅಕ್ಷರ ರೂಪ ಪರಬ್ರಹ್ಮ ವಸ್ತುವಿನಲ್ಲಿ ವರ್ಣಿಸುವುದು. ಸುಗುಣ ಬ್ರಹ್ಮ ವಸ್ತುವಿನಲ್ಲಿರುವ ವಿಶೇಷಣ ಧರ್ಮಗಳು ನಿರ್ಗುಣ ಬ್ರಹ್ಮ ವಸ್ತುವಿನಲ್ಲಿಯೂ ಕಲ್ಪಿತವಾಗಿ ಸಂಸಕ್ತವಾಗುವುವು ಎಂಬುದನ...

ಲಲಿತಾ ತ್ರಿಶತೀ (ಏಕಾರಾದಿನಾಮ) - 1. ಓಂ ಏಕಾರರೂಪಾಯೈ ನಮಃ

Image
ಮಂತ್ರದಲ್ಲಿ ದ್ವಿತೀಯಾಕ್ಷರವಾಗಿದ್ದು ಮಂತ್ರ ಶರೀರಳಾದ ದೇವಿಯನ್ನು ಭೋಧಿಸುವುದರಿಂದ ದೇವಿಯು ಏಕಾರವೆಂಬ ರೂಪವುಳ್ಳವಳು. ಏಕಾರಃ ರೂಪಂ ಯಸ್ಯಾಃ ಎಂದು ವಿಗ್ರಹವು

ಲಲಿತಾ ತ್ರಿಶತೀ -20 ಓಂ ಕರ್ಮಫಲಪ್ರದಾಯೈ ನಮಃ

Image
ಕಾಲಾಂತರದಲ್ಲಿ ಉಂಟಾಗುವ ಫಲಗಳಿಂದ ಕೂಡಿದ ಸತ್ಕರ್ಮಗಳ ಫಲವನ್ನು ಅನುಗ್ರಹಿಸುವಳು. ಅದೃಷ್ಟವು ಕರ್ಮಫಲವನ್ನು ಕೊಡುವುದೆಂದು ಕರ್ಮ ಮಿಮಾಂಸಾ ಶಾಸ್ತ್ರಕಾರ್ರ ಸಿದ್ಧಾಂತವು. ಅದು ಸಮಂಜಸವಾಗಲಾರದು. ಅಚೇತನವೂ ಜಡವೂ ಆದ ಅದೃಷ್ಟಕ್ಕೆ ಚೇತನ ಧರ್ಮವಾದ ಕರ್ಮಫಲದಾನ ಶಕ್ತಿಯು ಸಂಭವಿಸುವುದಿಲ್ಲ. ಶಾಸ್ತ್ರ ಪ್ರಮಿತವಾದ ಕರ್ಮಗಳು ಫಲವನ್ನು ಅವಶ್ಯವಾಗಿ ಕೊಡಬೇಕಾದುದರಿಂದ ಕರ್ಮಾಧ್ಯಕ್ಷಳಾದ ಪರದೇವತೆಯನ್ನು ಅಪೇಕ್ಷಿಸುವುದು. ಪರದೇವತೆಯು ಕರ್ಮಫಲವನ್ನು ಕೊಡುವುದೆಂಬುದನ್ನು  "ಕರ್ಮಾಧ್ಯಕ್ಷಃ"  "ಮಯೈವ ವಿಹಿತಾನ್ ಹಿ ತಾನ್" "ಫಲಮತ ಉಪಪತ್ತೇಃ" ಎಂಬ ಶ್ರುತಿ, ಸ್ಮೃತಿ, ನ್ಯಾಯಗಳು ಸಾರಿ ಹೇಳುವುವು ಆದ್ದರಿಂದ ದೇವಿಯು ಕರ್ಮ ಫಲ ಪ್ರದಾನ ಮಾಡುವವಳು. ಕರ್ಮಣಾಂ ಫಲಂ ಪ್ರದದಾತಿ ಎಂದು ವಿಗ್ರಹವು. ( ಮುಂದುವರೆಯುವುದು...)

ಲಲಿತಾ ತ್ರಿಶತೀ - 19 ಓಂ ಕಾರಯಿತ್ರ್ಯೈ ನಮಃ

Image
ಸ್ರಷ್ಟವ್ಯ ವಸ್ತುವಿನ ಸೃಷ್ಟಿ ವ್ಯಾಪಾರವು ಹುಟ್ಟಲು ಕಾರಣವಾದ ಪೂರ್ವ ಕರ್ಮೋದ್ಬೋಧಕವಾದ ವಿಧಿಪ್ರತ್ಯಯ ರೂಪವಾದ ಶಬ್ದ ಧರ್ಮ ಅಥವಾ ಶಾಸ್ತ್ರ ಸಂಕೇತದಂತೆ ವಿಧಿ ಭಾವನೆಯು ಕಾರ್ಯವನ್ನು ಮಾಡಿಸುವುದು. ಆದರೆ ಅಚೇತನ ಶಬ್ದಗಳಿಎ ಅಜ್ಞಾಪಕತ್ವ ಧರ್ಮವು ಅಸಂಗತವಾದ್ದರಿಂದ ಶಬ್ದಧಿಷ್ಟಾನ ಚೈತನ್ಯ ರೂಪದಿಂದ ವೇದಗಳಿಗೆ ಕಾರಯಿತೃತ್ವವು ಬರುವುದು. "ಸರ್ವೇ ವೇದ ಯತ್ರೈಕಂ ಭವಂತಿ" ಎಂಬ ಶ್ರುತಿ ಪ್ರಮಾಣದಿಂದ ವೇದಗಳು ಆತ್ಮ ಸ್ವರೂಪವಾಗಿವೆ. ಆದ್ದರಿಂದ ಸ್ವಪ್ರಕಾಶಗಳಾದ ವೇದಗಳು ತಮ್ಮ ಅರ್ಥವನ್ನೂ ಮತ್ತು ತನ್ನ ಅರ್ಥಜ್ಞಾನದಲ್ಲಿ ಪ್ರಾಮಾಣ್ಯವನ್ನೂ ಪ್ರಕಾಶಪಡಿಸಿ ಚೈತನ್ಯ ರೂಪದಿಂದ ಪ್ರೇರಕವಾಗಿ ಕರ್ಮಗಳನ್ನು ಮಾಡಿಸುತ್ತವೆ. ಅಂತಹ ಪ್ರೇರಕವಾದ ವೇದ ಶಬ್ದಗಳಿಗೆ ಚೈತನ್ಯ ರೂಪವನ್ನು ಕೊಟ್ಟವಳು.

ಪಿತೃಪಕ್ಷ

Image
    ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ.     ವೇದಗಳಲ್ಲಿ ದೇವಯಾನ, ಪಿತೃಯಾನ ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ. ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ - ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ.     ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು; ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರು ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯ ಪಕ್ಷವೆಂದು ಕರೆಯುವ ವಾಡಿಕೆಯೂ ಇದೆ.     ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತ...

ಲಲಿತಾ ತ್ರಿಶತೀ - 18 ಓಂ ಕರ್ಮಾದಿಸಾಕ್ಷಿಣ್ಯೈ ನಮಃ

Image
ಕರ್ಮವು ಆದಿಯಾಗಿರುವ ಉಪಾಸನಾ, ಯೋಗ, ಶ್ರವಣ, ಮನನ, ನಿದಿಧ್ಯಾಸನ ಮುಂತಾದವುಗಳಿಗೆ ಸಾಕ್ಷಿ ರೂಪಳು. ಈ ಅರ್ಥದಲ್ಲಿ "ಸಾಕ್ಷೀ ಚೇತಾ" ಎಂಬ ಶ್ರುತಿಯು ಪ್ರಮಾಣವು ಅಥವಾ ಸೃಷ್ಟಿ ಮಾಡುವ ಜಗತ್ತಿಗೆ ಕಾರಣವಾದ ಜೀವಾತ್ಮನಲ್ಲಿರುವ ಕರ್ಮಾದಿಗಳು ಅಕರ್ಮಾತ್ಮ ದರ್ಶನಕ್ಕೆ ಸಾಧನಗಳಾದ್ದರಿಂದ ಸಾಕ್ಷಿಗಳುಳ್ಳವಳು. ಕರ್ಮ ಆದಿರ್ಯೇಷಾಂತಾನಿ, ತೇಷಾಂ ಸಾಕ್ಷಿಣೀ, ಕರ್ಮಾದಯಃ ಸಾಕ್ಷಿ ಭೂತಾಃ ಯಸ್ಯಾಸ್ಸಾ ಎಂದು ವಿಗ್ರಹವು.

ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು

    ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು : ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ ಸರ್ವಭೂತದಯಾ ಪುಷ್ಪಂ ಸತ್ಯಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ಧ್ಯಾನಪುಷ್ಪಂ ತಪಃ ಪುಷ್ಪಂ ಕ್ರಿಯಾಪುಷ್ಪಂ ಆರ್ಚತಿ ತುಷ್ಯತಿ ಕೇಶವ ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ. ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ...

ಲಲಿತಾ ತ್ರಿಶತೀ - 17 ಓಂ ಕಮ್ರವಿಗ್ರಹಾಯೈ ನಮಃ

Image
ಗಾಂಭೀರ್ಯ, ಧೈರ್ಯ, ಮಾಧುರ್ಯ, ಮುಂತಾದ ಬಹು ಗುಣಗಳಿಂದ ಕೂಡಿ ಅತ್ಯಂತ ಮನೋಹರವಾದ ಮೂರ್ತಿಯುಳ್ಳವಳು. "ಆನಂದ ರೂಪಮಮೃತಂ ಯದ್ವಿಭಾತಿ" ಎಂಬ ಶ್ರುತಿಯು ಬ್ರಹ್ಮ ಸ್ವರೂಪವನ್ನು ಆನಂದ ರೂಪವೆಂದು ಭೋಧಿಸಿ ಅತಿ ಮನೋಹರತ್ವವನ್ನು ಸೂಚಿಸುತ್ತದೆ. ಆದ್ದರಿಂದ ಆನಂದ ರೂಪತ್ವದಿಂದ ಅತಿ ಮನೋಹರವಾದ ಮೂರ್ತಿಯುಳ್ಳವಳು. ಲಲಿತಾ ರೂಪಳು ಎಂದು ತಾತ್ಪರ್ಯವು, ಕಮ್ರಃ ವಿಗ್ರಹಃ ಯಸ್ಯಾಃ ಎಂದು ವಿಗ್ರಹವು (ಮುಂದುವರೆಯುವುದು...)

ಲಲಿತಾ ತ್ರಿಶತೀ -16 ಓಂ ಕಂಜಲೋಚನಾಯೈ ನಮಃ

Image

ನಂಬಿಕೆ, ಅರಿವುಗಳೆರಡೂ ಶ್ರೇಯಸ್ಸಾಧನವೇ......

    'ನಂಬು, ನಂಬು - ನಾರಾಯಣನ' ಎಂದು ಭಕ್ತರು ಹಾಡಿರುತ್ತಾರೆ. ಇಲ್ಲಿ ನಂಬಿಕೆ - ಎಂಬುದು ಯಾವದು? ನಾರಾಯಣನೆಂದರೆ ಯಾರು? ನಾರಾಯಣನೆಂದರೆ ನರರಿಗೆಲ್ಲ ಆಶ್ರಯನಾಗಿರುವ ಪರಮಾತ್ಮನು. ಪರಮಾತ್ಮನೊಬ್ಬನಿದ್ದಾನೆ; ಅವನು ನಮಗೆಲ್ಲ ಅಂತರಾತ್ಮನು. ಆತನಲ್ಲಿ ಶ್ರದ್ಧಾ ಭಕ್ತಿಗಳುಂಟಾದರೆ ನಮಗೆ ಇಹಲೋಕದಲ್ಲಿ ಸುಖವೂ ಪರದಲ್ಲಿ ಶ್ರೇಯಸ್ಸೂ ಉಂಟಾಗುತ್ತದೆ - ಎಂಬ ದೃಢವಿಶ್ವಾಸವೇ ನಂಬಿಕೆ.     ಇದೊಂದು ಮಹಾತತ್ತ್ವವು. ಇದನ್ನು ಸುಮ್ಮನೆ ನಂಬಿಕೊಂಡಿರುವದಕ್ಕೂ ಅರಿತುಕೊಳ್ಳುವದಕ್ಕೂ ಹೆಚ್ಚು ಕಡಿಮೆಯಿದೆ. ಸಮಿಪದ ಕಾಡಿನಲ್ಲಿ ಒಂದು ಹುಲಿಯಿದೆ - ಎಂದು ಆ ಊರಿನವರಿಗೆಲ್ಲ ನಂಬಿಕೆಯಿರಬಹುದು, ಆದರೆ ಕಾಡಿನಲ್ಲಿ ಕಟ್ಟಿಗೆಯನ್ನು ತರುವದಕ್ಕೆಂದು ಹೋದವನೊಬ್ಬನು ದೂರದಲ್ಲಿ ಹುಲಿಯನ್ನು ಕಂಡರೆ ಅವನಿಗೆ ಅದರ ಅರಿವೂ ಆಗುವದು. ಹೀಗೆಯೇ ಪರಮೇಶ್ವರನನ್ನು ನಂಬುವದಕ್ಕೂ ಆತನ ಸ್ವರೂಪವನ್ನು ಅರಿತುಕೊಳ್ಳುವದಕ್ಕೂ ವ್ಯತ್ಯಾಸವಿದೆ.     ನಂಬಿಕೆಯು ಅರಿವಲ್ಲವಾದರೂ ಅರಿವನ್ನು ಸಂಪಾದಿಸಿಕೊಳ್ಳುವದಕ್ಕೆ ಅದು ಒಂದು ದೊಡ್ಡ ಸಾಧನವಾಗಿರುತ್ತದೆ. ಯಾವನಿಗೆ ಭಗವಂತನ ಇರುವಿಕೆಯಲ್ಲಿ ನಂಬಿಕೆಯಿಲ್ಲವೋ ಯಾವನಿಗೆ ಭಗವಂತನಿಂದ ಪುರುಷಾರ್ಥಪ್ರಾಪ್ತಿಯಾಗುವದೆಂಬ ವಿಶ್ವಾಸವಿಲ್ಲವೋ ಅವನಿಗೆ ಭಗವಂತನನ್ನು ಅರಿತುಕೊಳ್ಳುವದು ಎಂದಿಗೂ ಸಾಧ್ಯವಿಲ್ಲ. ಅವನು ಎಂದೆಂದಿಗೂ ಭಗವಂತನನ್ನು ಅರಿಯುವದಕ್ಕೆ ಪ್ರಯತ್ನಮಾಡುವ ಸಂಭವವೂ ಇಲ್ಲ....

ನಾಗರ ಪಂಚಮಿ ವ್ರತ

Image
    ಈ ವ್ರತವನ್ನು ಶ್ರಾವಣ ಶುಕ್ಲ ಪಂಚಮಿ ದಿನ ಪ್ರತಿ ವರ್ಷವೂ ಭಕ್ತರು ಆಚರಿಸುತ್ತಾರೆ. ಉಳಿದ ಎಲ್ಲಾ ವ್ರತಗಳಿಗಿಂತಲೂ ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಮಾಡುವರು. ಅಣ್ಣ, ತಮ್ಮ, ಅಕ್ಕ, ತಂಗಿಯಂದಿರುಗಳುಳ್ಲವರು ಈ ದಿನ ಒಟ್ಟುಗೂಡಿ ನಾಗದೇವತೆಯನ್ನು ಪೂಜಿಸಿ 'ತನಿ'ಎರೆದು ತಾವೂ ಎರೆಸಿಕೊಳ್ಳುವ ಪದ್ಧತಿಯಿದೆ.     ವ್ರತಚೂಡಾಮಣಿಯಲ್ಲಿರುವಂತೆ ಹೇಮಾದ್ರಿ - ಎಂಬ ಗ್ರಂಥದ ಪ್ರಭಾಸಖಂಡದಲ್ಲಿರುವ ಭಾಗವೇ ಈ ವ್ರತಕ್ಕೆ ಮೂಲಪ್ರಮಾಣವು. ಅದರಲ್ಲಿ ಶ್ರಾವಣ ಶುಕ್ಲ ಪಂಚಮಿಯ ಷಷ್ಠೀಯುಕ್ತವಾಗಿದ್ದ ದಿನ ನಾಗಪೂಜೆಯನ್ನು ಮಾಡಬೇಕೆಂದೂ ನಾಗಗಳಲ್ಲದ ಸರ್ಪಗಳ ಪೂಜೆಗೆ ಚತುರ್ಥೀ ತಿಥಿಯು ಶ್ರೇಷ್ಠವೆಂದೂ ಹೇಳಿದೆ. ಸಾಮಾನ್ಯವಾಗಿ ಹೆಡೆಯುಳ್ಳ ಹಾವುಗಳನ್ನು ನಾಗಗಳೆಂದೂ ಉಳಿದ ಜಾತಿಯ ಹಾವುಗಳನ್ನು ಸರ್ಪಗಳೆಂದೂ ಕರೆಯುತ್ತಾರೆ. ಹೀಗೆ ನಾಗಪೂಜೆಯನ್ನು ಮಾಡುವವನು ಚತುರ್ಥೀ ದಿನ ಬೆಳಗ್ಗೆ ನಿರಾಹಾರನಾಗಿದ್ದು ರಾತ್ರೆ ಭೋಜನಮಾಡಿ ಪಂಚಮಿ ದಿನ ನಾಗಪೂಜೆಯನ್ನು ಮಾಡಬೇಕು. ಐದು ಹೆಡೆಗಳುಳ್ಳ ಐದು ಹಾವುಗಳನ್ನು ಪೂಜಿಸಬೇಕು. ಇವುಗಳನ್ನು ಬೆಳ್ಳಿಯಿಂದ ಅಥವಾ ಮರದಿಂದ ಮಾಡಿ ಬಿಳಿಯ ಬಣ್ಣವನ್ನು ಹಾಕಿ ಸಿದ್ಧಗೊಳಿಸಿದ ಅಥವಾ ಮಣ್ಣಿನಿಂದ ಮಾಡಿದ ಬಿಂಬಗಳಲ್ಲಿ ಅಥವಾ ರಂಗೋಲಿಯಲ್ಲಿ ಚಿತ್ರವನ್ನು ಬರೆದು ಅರ್ಚಿಸಬೇಕು. ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ - ಮುಂತಾದ ಸುಪ್ರಸಿದ್ಧ ನಾಗಗಳನ್ನು ಈ ಪೂಜೆಯಲ್ಲಿ ಆಹ್ವಾನಿಸಬೇಕು. ಅರಿಸ...

ಶನೈಶ್ಚರ

Image
    ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು.     'ಶನಿ...

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

Image
ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥     ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥     (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ...

ಅಜಾತಿವಾದ

    ವೇದಾಂತಸಂಪ್ರದಾಯದಲ್ಲಿ ಶ್ರೀ ಗೌಡಪಾದರಿಗೆ ಬಹಳ ಉನ್ನತವಾದ ಸ್ಥಾನವಿದೆ. ಈ ಮಹನೀಯರು ರಚಿಸಿರುವ ಮಾಂಡೂಕ್ಯೋಪನಿಷತ್ತಿನ ವ್ಯಾಖ್ಯಾನ ರೂಪವಾದ ಕಾರಿಕೆಗಳು ವೇದಾಂತಸಿದ್ದಾಂತಪ್ರಪಂಚದಲ್ಲಿ ಚಿಂತಾಮಣಿರತ್ನದಂತೆ ಮುಮುಕ್ಷುಗಳಿಗೆ ಅಪೂರ್ವಲಾಭವಾಗಿವೆ. ಶ್ರೀಗೌಡಪಾದರವರ ವೇದಾಂತ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ 'ಅಜಾತಿವಾದ' ಎಂಬ ಒಂದೇ ಮಾತಿನಲ್ಲಿ ಅಡಕಮಾಡಿಬಿಡಬಹುದು. ಆದ್ದರಿಂದ ಅಜಾತಿವಾದವೆಂದರೇನು?     ನ ಕಶ್ಚಿಜ್ಜಾಯೆತೇ ಜೀವಃ ಸಂಭವೋsಸ್ಯ ನ ವಿದ್ಯತೇ | ಏತತ್ತದುತ್ತಮಂ ಸತ್ಯಂ ಯತ್ರ ಕಿಂಚಿನ್ನ ಜಾಯತೇ ||             'ಯಾವನೊಬ್ಬ ಜೀವನೂ ಹುಟ್ಟಿರುವದಿಲ್ಲ. ಇವನಿಗೆ ಹುಟ್ಟೆಂಬುದೇ ಇಲ್ಲ. ಹೀಗೆ ಹುಟ್ಟು ಎಂಬುದು ಇಲ್ಲವೇ ಇಲ್ಲ; ಏನೊಂದೂ ಹುಟ್ಟಿರುವದಿಲ್ಲ - ಎಂಬಿದೇ ಪರಮಾರ್ಥವಾದ ಉತ್ತಮಸತ್ಯವು' ಎಂಬಿದು ಮೇಲಿನ ಕಾರಿಕೆ ಅಕ್ಷರಾರ್ಥವು.         ಹೀಗೆ ಹುಟ್ಟು - ಎಂಬಿದನ್ನೇ ಹುಟ್ಟಡಗಿಸಿರುವ ಸತ್ಯದ ತಿರುಳೇನು? ಎಂಬಿದು ವಿಚಾರಣೀಯವಾಗಿದೆ. ಏಕೆಂದರೆ ವ್ಯವಹಾರದೃಷ್ಟಿಯಲ್ಲಿ ಇದು ತೀರ ವಿರುದ್ಧವಾಗಿ ಕಂಡುಬರುತ್ತದೆ. ಲೌಕಿಕರು, ಅಜ್ಞಾನಿಗಳು - ಹಾಗಿರಲಿ; ವಿವೇಕಿಗಳೂ ವಿದ್ಯಾವಂತರೂ ಪ್ರಾಜ್ಞರೂ ಸಹ ಜಗತ್ತು ಹುಟ್ಟಿದೆ - ಎಂದೇ ತಿಳಿದಿದ್ದಾರೆ. ವೇದಾಂತಿಗಳನ್ನು ಬಿಟ್ಟರೆ ಉಳಿದ ದ...

ಅದ್ವೈತ ಮತ್ತು ದೇವತಾರಾಧನೆ

Image
    ಜೀವನದಲ್ಲಿ ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಎಂಬ ಮೂರು ವಿಧಾನಗಳು ಲಭ್ಯವಾಗಿದ್ದು ನಮ್ಮ ವೈಯಕ್ತಿಕ ಪ್ರವೃತ್ತಿಗನುಗುಣವಾಗಿ ಒಂದನ್ನು ಆರಿಸಿಕೊಳ್ಳುತ್ತೇವೆ. ಈ ಮೂರು ಮಾರ್ಗಗಳು ನಮ್ಮನ್ನು ಬೆಳೆಸುತ್ತವೆ, ಉಳಿಸುತ್ತವೆ. ಇವುಗಳಲ್ಲಿ ಭಕ್ತಿಮಾರ್ಗಮಾತ್ರವೇ ಶೀಘ್ರಫಲದರ್ಶನ ನೀಡುತ್ತದೆ. ಇದರಲ್ಲಿ ಮತಿಗೆ ವ್ಯಥೆಯಿಲ್ಲ. ಅಂತೆಯೇ ಹೆಚ್ಚು ಜನರನ್ನು ಇದು ಆಕರ್ಷಿಸುತ್ತದೆ. ಅಬಾಲವೃದ್ಧರೂ, ಸ್ತ್ರೀಯರೂ ಈ ಮಾರ್ಗವನ್ನು ಅನುಸರಿಸಬಹುದಾದ್ದರಿಂದ ಇದರ ವ್ಯಾಪ್ತಿಯು ದೊಡ್ಡದು.     ಹೀಗಾಗಿ ಆಚಾರ್ಯ ಶಂಕರರು ಸಕಲ ಜನರ ಉದ್ಧಾರಕ್ಕಾಗಿ ಹಲವಾರು ದೇವಸ್ಥಾನಗಳನ್ನು ಸ್ಥಾಪಿಸಿದರು; ಹಲವನ್ನು ಜೀಣೋದ್ಧಾರ ಮಾಡಿಸಿದರು, ಹಲವು ದೇವಾಲಯಗಳಲ್ಲಿನ ಕ್ರೂರಪದ್ಧತಿಗಳನ್ನು ಮಾರ್ಪಡಿಸಿ, ಶುದ್ಧವಾಗಿಸಿದರು. ಇಷ್ಟಲ್ಲದೆ, ಸುಂದರ, ರಸಗರ್ಭಿತ, ಮಂಜುಳ, ಲಯಬದ್ಧ ಗಾನಸುಧೆಗಾಗಿ ಹಲವು ಸ್ತೋತ್ರಗಳನ್ನು ರಚಿಸಿ ಭಗವಂತನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಲಹರಿ, ಅಷ್ಟಕ, ಪಂಚಕ, ಪಂಜರಿಕಾ, ಅಪರಾಧ ಕ್ಷಮಾಪಣಾ.... ಹೀಗೆಯೇ ಹಲವಾರು ಶೈಲಿಯ, ಅರ್ಥಗಾಂಭೀರ್ಯದ, ಭಕ್ತಿರಸಪೂರ್ಣವಾದ ಸ್ತವಕುಸುಮಗಳನ್ನು ನೀಡಿ ಉಪಕರಿಸಿದ್ದಾರೆ.     ಪ್ರತ್ಯೇಕ ವ್ಯಕ್ತಿಯು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸುವುದು ಸೂಕ್ತವಾದರೂ, ಇತರ ದೇವತೆಗಳು ಕಡಿಮೆಯವೆಂದು ಪರಿಗಣಿಸಬಾರದು. ಪರಮತ ಸಹಿಷ್ಣುತೆ ನಮ್...

ರಾಮರಹಸ್ಯೋಪನಿಷತ್

Image
    ಪ್ರತಿವರ್ಷವೂ ಯುಗಾದಿಯಿಂದ ಆರಂಭವಾಗುವ ಚೈತ್ರಮಾಸದಲ್ಲಿ ಶ್ರೀರಾಮ ನವರಾತ್ರಿಯ ಉತ್ಸವವು ದೇಶದಲ್ಲೆಲ್ಲ ನಡೆಯುತ್ತದೆ. ಶ್ರೀರಾಮನವಮಿವರೆಗೆ ಅನುಷ್ಠಾನಮಾಡಿ ಪಟ್ಟಾಭಿಷೇಕವನ್ನು ನೆರವೇರಿಸುವ ಪದ್ಧತಿಯನ್ನು ಗರ್ಭ ನವರಾತ್ರಿಯೆಂದೂ ನವಮಿಯಿಂದಲೇ ಉತ್ಸವಾರಂಭವನ್ನು ಮಾಡಿ ಒಂಭತ್ತು ದಿನಗಳ ಅನಂತರ ಪಟ್ಟಾಭಿಷೇಕವನ್ನು ನೆರವೇರಿಸುವ ಕ್ರಮವನ್ನು ಜನ್ಮನವರಾತ್ರಿಯೆಂದೂ ಕರೆಯುತ್ತಾರೆ. ಈ ಕಾಲದಲ್ಲಿ ಶ್ರೀಮದ್ರಾಮಾಯಣಪಾರಾಯಣ, ಹರಿಕಥೆ, ಸಂಗೀತ, ಭಜನೆ - ಮುಂತಾದ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ. ಈಚೆಗೆ ಟಿ.ವಿ ರಾಮಾಯಣ ಫಿಲಂ ಪ್ರದರ್ಶನವೂ ಜಾರಿಗೆ ಬಂದಿದೆ. ಆದರೆ ವಿಶೇಷವಾಗಿ ರಾಮಮಂತ್ರ ಜಪ, ಪುರಶ್ಚರಣೆ, ರಾಮತತ್ತ್ವ ಕಥಾವ್ಯಾಖ್ಯಾನ, ರಾಮರಹಸ್ಯ, ರಾಮತಾಪಿನ್ಯಾದಿ ಉಪನಿಷತ್ತುಗಳ ಪಾರಾಯಣ - ಮುಂತಾದವು ನೆರವೇರುವದು ಅಪರೂಪವಾಗಿರುತ್ತದೆ. ಆದ್ದರಿಂದ ಈ ಲೇಖನದಲ್ಲಿ ರಾಮರಹಸ್ಯೋಪನಿಷತ್ತಿನ ಬಗ್ಗೆ ಸ್ಥೂಲವಾಗಿ ಪರಿಚಯಮಾಡಿಕೊಡಲು ಪ್ರಯತ್ನಿಸಿದೆ.     ಅಷ್ಟೋತ್ತರಶತೋಪನಿಷತ್ತುಗಳಲ್ಲಿ ಇದು 56ನೆಯದಾಗಿದೆ. ಇದು ಅಥರ್ವ ವೇದಕ್ಕೆ ಸೇರಿದ್ದು. 'ಭದ್ರಂ ಕರ್ಣೇಭಿಃ' ಎಂಬ ಶಾಂತಿಪಾಠವುಳ್ಳದ್ದಾಗಿದೆ. ಇದರಲ್ಲಿ ಒಟ್ಟು ಐದು ಅಧ್ಯಾಯಗಳು 145 ಮಂತ್ರಗಳೂ ಇವೆ. ಎರಡನೆಯ ಅಧ್ಯಾಯವೊಂದರಲ್ಲಿಯೇ 106 ಮಂತ್ರಗಳಿವೆ. ಮೂರನೆಯ ಅಧ್ಯಾಯವೆಲ್ಲ ಒಂದೇ ಮಂತ್ರ ರೂಪವಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಸನಕಾದಿಯೋಗಿಗಳ...

ಶ್ರೀ ವೈಷ್ಣವ 108 ದಿವ್ಯದೇಶಗಳ ದಿವ್ಯದಂಪತಿಗಳು

    'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರಾದ ಪುರಂದರ ದಾಸರು ಅಪ್ಪಣೆ ಕೊಟ್ಟಿದ್ದಾರೆ. ಅನೇಕ ಜನುಮಗಳ ನಂತರ ಲಭಿಸಿದ ಈ ಮಾನವ ಜನ್ಮ ಆದ್ದರಿಂದಲೇ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಜನ್ಮಸಾರ್ಥಕ್ಯವನ್ನು ಪಡೆಯುವುದು ಹೇಗೆಂದು ತಿಳಿದುಕೊಳ್ಳುವುದು ಮಾನವನ ಪ್ರಥಮ ಕರ್ತವ್ಯ.     ಭಗವಂತನು ಸರ್ವಾಂತರ್ಯಾಮಿ. ಅವನು ಅನುಗ್ರಹಿಸಿದ ಈ ಜನ್ಮದಲ್ಲಿ ಅವನನ್ನು ಸ್ತುತಿಸಿ, ಧ್ಯಾನಿಸಿ, ಅವನ ನಾಮ ಜಪಮಾಡಿ, ಅವನು ಅರ್ಚಾರೂಪಿಯಾಗಿ ನಿಂತಿರುವ ದೇವಾಲಯಗಳನ್ನು ಸಂದರ್ಶಿಸಿ ಅವನ ಮೂರ್ತಿಗಳಲ್ಲಿ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡು ಐಹಿಕ ಆಮುಷ್ಮಿಕ ಫಲಗಳನ್ನು ಪಡೆದು ಆ ದೇವನಲ್ಲಿಯೇ ಸೇರಿದರೆ ಮಾತ್ರ ಜನ್ಮ ಸಾರ್ಥಕವಾಗುವುದು.     ನಮ್ಮ ಭರತಖಂಡವು ಪುಣ್ಯಭೂಮಿ, ಭಾರತ ಮಾತೆಯು ಪಾವನಿ, ಆ ತಾಯಿಯು ಉದ್ದಗಲಕ್ಕು ವ್ಯಾಪಿಸಿರುವ ನದಿಗಳ, ಗಿರಿಪರ್ವತಗಳ, ನದೀಸಂಗಮಗಳಲ್ಲಿ ಕಾಣಿಸಿಗುವ ದೇವಾಲಯಗಳಲ್ಲಿ ಭಗವಂತನು ಆರ್ಚಾರೂಪಿಯಾಗಿ ನಿಂತು ದರ್ಶನಕ್ಕಾಗಿ ಬರುವ ಭಕ್ತವೃಂದಕ್ಕೆ ವರಗಳನ್ನು ದಯಪಾಲಿಸಿ ಇಷ್ಟಾರ್ಥ ಪ್ರಾಪ್ತಿಯನ್ನು ಅನಿಷ್ಠಾರ್ಥ ನಿವಾರಣೆಯನ್ನೂ ಉಂಟುಮಾಡುತ್ತಿದ್ದಾನೆ. ಆದ್ದರಿಂದ ಮಾನವರೆಲ್ಲರೂ ತೀರ್ಥಯಾತ್ರೆ ಮಾಡಿ ತೀರ್ಥಕ್ಷೇತ್ರಗಳನ್ನೂ ಪುಣ್ಯಸ್ಥಳಗಳನ್ನು ಸಂದರ್ಶಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಜನ್ಮಸಾರ್ಥಕ ಪಡಿಸಿಕೊಳ್ಳ...

ಲಲಿತಾ ತ್ರಿಶತೀ - 15 ಓಂ ಕಲಿದೋಷಹರಾಯೈ ನಮಃ

Image

ಸಪ್ತ ಶ್ಲೋಕೀ ಗೀತಾ

ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ | ಯ: ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||೧||     ಓಂ ಎಂಬ ಏಕಾಕ್ಷರ ರೂಪದ ಬ್ರಹ್ಮನ ಹೆಸರನ್ನು ಉಚ್ಚರಿಸುತ್ತಾ ಹಾಗೂ ಓಂಕಾರಕ್ಕೆ ಅರ್ಥ ಸ್ವರೂಪನೂ ಆಗಿರುವ ನನ್ನನ್ನು ಸ್ಮರಿಸುತ್ತಾ ಯಾವಾತನು ದೇಹವನ್ನು ತ್ಯಜಿಸುವನೋ ಅವನು ಅತ್ಯುನ್ನತ ಶ್ರೇಷ್ಠ ಪದವಿಯೆನಿಸಿದ ಮೋಕ್ಷವನ್ನು ಪಡೆಯುವನು. ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಾಜತೇ ಚ | ರಕ್ಷಾಂಸಿ ಭೀತಾನಿ ದಿಶೋ ಧವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾ: ||೨||     ಎಲೈ ಹೃಷಿಕೇಶ! ನಿನ್ನ ಗುಣಗಳ ಸಂಕೀರ್ತನೆಯಿಂದ ಬ್ರಹ್ಮಾಂಡವು ಸ್ವಚ್ಚವಾಗಿದೆ ಮತ್ತು ಸ್ನೇಹಪೂರಿತವಾಗಿದೆ.ಹಾಗೂ ಅದು ಸರಿಯಾದುದೂ ಆಗಿದೆ. ಈ ರಕ್ಕಸರು ಭಯಭೀತರಾಗಿ ಸಮಸ್ತ ದಿಸೆಗಳತ್ತ ಓಡುತ್ತಲಿರುವರು. ಹೀಗಿರುತ್ತಾ ಸಮಸ್ತ ಸಿದ್ಧಗಣ ಸೇನೆಯು ನಿನಗೆ ನಮಸ್ಕರಿಸುತ್ತಲಿವೆ. ಸರ್ವತ: ಪಾಣಿಪಾದಂ ತತ್ಸರ್ವತೋಕ್ಷಿ ಶಿರೋಮುಖಮ್ | ಸರ್ವತ: ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||೩||     ಅವನು ಸಮಸ್ತ ಕಡೆಗೂ ಹಸ್ತ ಪಾದಗಳುಳ್ಳವನು;ಹಾಗೆಯೇ ಎಲ್ಲ ಕಡೆಗೂ ಕಣ್ಣು.ತಲೆ,ಮುಖಗಳುಳ್ಳವನು.ಅವನು ಸರ್ವತ್ರ ವ್ಯಾಪಕಸ್ವರೂಪನಾಗಿ ಶ್ರವಣೇಂದ್ರಿಯಗಳುಳ್ಳವನೂ ಆಗಿರುವನು. ಅವನು ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡವನು. ಕವಿಂ ಪುರಾಣಮನುಶಾಸಿತಾರಮಣೋರಣೀಯಾಂ ಸಮನುಸ್ಮರೇದ್ಯ: | ಸರ್ವಸ...

ಸಂಕಷ್ಟನಾಶನ ವಿಷ್ಣು ಸ್ತೋತ್ರಮ್

ನಾರದ ಉವಾಚ:- ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: | ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು: ||೧|| ನಾರದರು ಹೇಳಿದರು:- ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು ಪ್ರಾರಂಬಿಸಿದರು. ದೇವಾ ಊಚು:- ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ ಕಾರ್ಯೋದ್ಯತಾಯಾರ್ತಿಹಂತ್ರೇ | ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ ತೇಸ್ತು ||೨|| ದೇವತೆಗಳು ಹೇಳುವರು:- ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ ನಿನಗೆ ಪ್ರಣಾಮಗಳು. ರಮಾವಲ್ಲಭಾಯಾsಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ ಪೀತಾಂಬರಾಯ | ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೩||     ರಮಾವಲ್ಲಭನಿಗೆ,ಅಸುರ ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು ನಮಸ್ಕರಿಸುವೆವು. ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ ವಿಷ್ಣವೇ ತೇ | ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ...

ಶ್ರೀ ವಿಷ್ಣು ಶತನಾಮಸ್ತೋತ್ರಮ್

ನಾರದ ಉವಾಚ:- ಓಂ ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ | ಜನಾರ್ಧನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಢ ಧ್ವಜಮ್ ||೧|| ನಾರದರು ಹೇಳಿದ್ದು:- ವಾಸುದೇವ,ಹೃಷೀಕೇಶ,ವಾಮನ,ಜಲಧಿಶಯನ,ಜನಾರ್ಧನ,ಹರಿ,ಕೃಷ್ಣ,ಶ್ರೀವಕ್ಷ,ಗರುಢಧ್ವಜ...... ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ | ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್ ||೨||     ವಾರಾಹ,ಪುಂಡರೀಕಾಕ್ಷ,ನೃಸಿಂಹ,ನರಕಾಂತಕ,ಅವ್ಯಕ್ತ,ಶಾಶ್ವತ,ವಿಷ್ಣು,ಅನಂತ, ಅಜ,ಅವ್ಯಯ.............. ನಾರಾಯಣಂ ಗದಾಧ್ಯಕ್ಷಂ ಗೋವಿಂದಂ,ಕೀರ್ತಿಭಾಜನಮ್ | ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್ ||೩||     ನಾರಾಯಣ,ಗದಾಧ್ಯಕ್ಷ,ಗೋವಿಂದ,ಕೀರ್ತಿಭಾಜನ,ಗೋವರ್ಧನೋದ್ಧಾರಕ ದೇವ,ಭೂಧರ,ಭುವನೇಶ್ವರ......... ವೇತ್ತಾರಂ,ಯಜ್ಞಪುರುಷಂ ಯಜ್ಞೇಶಂ ಯಜ್ಞವಾಹಕಮ್ | ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್ ||೪||     ವೇತ್ತಾರ,ಯಜ್ಞಪುರುಷ,ಯಜ್ಞೇಶ,ಯಜ್ಞವಾಹಕ,ಚಕ್ರಪಾಣಿ,ಗದಾಪಾಣಿ, ಶಂಖಪಾಣಿ,ನರೋತ್ತಮ........... ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಮ್ | ತ್ರಿವಿಕ್ರಮಂ ತ್ರಿಕಾಲಜ್ಞಂ ತ್ರಿಮೂರ್ತಿಂ ನಂದಿಕೇಶ್ವರಮ್ ||೫||     ವೈಕುಂಠ,ದುಷ್ಟದಮನ,ಭೂಗರ್ಭ,ಪೀತಾಂಬರಧಾರಿ,ತ್ರಿವಿಕ್ರಮ,ತ್ರಿಕಾಲಜ್ಞ, ತ್ರಿಮೂರ್ತಿ, ನಂದಿಕೇಶ್ವರ........ ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ | ಶ್ರೀಪತಿಂ ಶ್ರೀಧರಂ...

ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್

Image
ಅರ್ಜುನ ಉವಾಚ:- ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: | ಯಾನಿ ನಾಮಾನಿ ದಿವ್ಯಾನಿ ತಾನಿ ಚಾssಚಕ್ಷ್ವ ಕೇಶವ ||೧||     ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು. ಭಗವಾನುವಾಚ:- ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ | ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨||     ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ----- ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ | ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩||     ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ----------- ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ | ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್ ||೪||     ವಿಶ್ವರೂಪ, ವಾಸುದೇವ, ರಾಮ, ನಾರಾಯಣ, ಹರಿ, ದಾಮೋದರ, ಶ್ರೀಧರ, ವೇದಾಂಗ, ಗರುಢಧ್ವಜ---------- ಅನಂತಂ ಕೃಷ್ಣಗೋಪಾಲಂ ಜಪತೋ ನಾಸ್ತಿ ಪಾತಕಮ್ | ಗವಾಂ ಕೋಟಿಪ್ರದಾನಸ್ಯ ಅಶ್ವಮೇಧಶತಸ್ಯ ಚ ||೫||     ಅನಂತ, ಕೃಷ್ಣಗೋಪಾಲ ಎಂಬೀ ಇಪ್ಪತ್ತೆಂಟು ನಾಮಗಳನ್ನು ...

ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್

Image
ಔಷಧೇ ಚಿಂತಯೇದ್ವಿಷ್ಣುಂ ಭೋಜನೇಚ ಜನಾರ್ಧನಮ್ | ಶಯನೇ ಪದ್ಮನಾಭಂಚ ವಿವಾಹೇ ಚ ಪ್ರಜಾಪತಿಮ್ ||೧||     ಔಷಧಿಯನ್ನು ಸ್ವೀಕರಿಸುವ ಕಾಲದಲ್ಲಿ ವಿಷ್ಣುವನ್ನು, ಆಹಾರವನ್ನು ಸ್ವೀಕರಿಸುವಾಗ ಜನಾರ್ಧನನನ್ನು,ಮಲಗುವ ಸಮಯದಲ್ಲಿ ಪದ್ಮನಾಭನನ್ನು, ವಿವಾಹದ ಸಮಯದಲ್ಲಿ ಪ್ರಜಾಪತಿಯನ್ನು ಸ್ಮರಿಸಬೇಕು. ಯುದ್ಧೇ ಚಕ್ರಧರಂದೇವಂ ಪ್ರವಾಸೇ ಚ ತ್ರಿವಿಕ್ರಮಮ್ | ನಾರಾಯಣಂ ತನು ತ್ಯಾಗೇ ಶ್ರೀಧರಂ ಪ್ರಿಯಸಂಗಮೇ ||೨||     ಯುದ್ಧ ಕಾಲದಲ್ಲಿ ಚಕ್ರಧರ ದೇವನನ್ನು,ಪ್ರವಾಸ ಸಮಯದಲ್ಲಿ ತ್ರಿವಿಕ್ರಮನನ್ನು, ಶರೀರ ತ್ಯಾಗ ಮಾಡುವಾಗ ನಾರಾಯಣನನ್ನು, ಪ್ರೀತಿಯ ವ್ಯಕ್ತಿಗಳು ಸೇರುವಾಗ ಶ್ರೀಧರನನ್ನು ಸ್ಮರಿಸಬೇಕು. ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಮ್ | ಕಾನನೇ ನಾರಸಿಂಹಂ ಚ ಪಾವಕೇ ಜಲಶಾಯಿನಮ್ ||೩||     ಘೋರ ಕನಸ್ಸುಗಳನ್ನು ಕಂಡಾಗ ಗೋವಿಂದನನ್ನು,ಸಂಕಷ್ಟದ ಸಮಯದಲ್ಲಿ ಮಧುಸೂಧನನನ್ನು,ಘೋರಾರಣ್ಯದಲ್ಲಿ ನಾರಸಿಂಹನನ್ನು, ಅಗ್ನಿ ದುರಿತದಲ್ಲಿ ಜಲಶಾಯಿಯನ್ನು ಸ್ಮರಿಸಬೇಕು. ಜಲಮಧ್ಯೇ ವರಾಹಂ ಚ ಪರ್ವತೇ ರಘುನಂದನಮ್ | ಗಮನೇ ವಾಮನಂ ಚೈವ ಸರ್ವ ಕಾರ್ಯೇಷು ಮಾಧವಮ್ ||೪||     ನೀರಿನ ನಡುವೆ ಸಿಲುಕಿದಾಗ ವರಾಹರೂಪಿಯನ್ನು, ಪರ್ವತ ಪ್ರದೇಶದಲ್ಲಿ ರಘುನಂದನನನ್ನು, ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ವಾಮನನನ್ನು, ಮತ್ತು ಸಮಸ್ತ ಕಾರ್ಯಗಳಲ್ಲಿ ಮಾಧವನನ್ನು ಸ್ಮರಿಸಬೇಕು. ಷೋಡಶೈ...

ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರಮ್

Image
ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿ ಲೋಕ ರಕ್ಷಕಂ | ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ||೧||     ಮಂದಹಾಸದಿಂದ ಕೂಡಿದವನಾಗಿ ಮೋದಕವನ್ನು ಕೈಯಲ್ಲಿ ಧರಿಸಿರುವ,ಸದಾ ಮೋಕ್ಕ್ಷವನ್ನು ಕರುಣಿಸುವುದರಲ್ಲಿ ನಿರತನಾಗಿರುವ,ಶಿರದಲ್ಲಿ ಚಂದ್ರನನ್ನು ಆಭರಣೋಪಾದಿಯಲ್ಲಿ ಧರಿಸಿರುವ,ಭಕ್ತಿ ವಿಲಾಸದಲ್ಲಿ ತತ್ಪರರಾದವರನ್ನು ತನ್ನ ಲೀಲಾಮಾತ್ರದಿಂದಲೇ ಪೊರೆಯುವ,ಅನಾಥರ ಏಕಮಾತ್ರ ದಿಕ್ಕಾದ,ಲೋಕ ಕಂಠಕನಾದ ಇಭಾಸುರ ಸಂಹಾರಿಯಾದ,ಶರಣು ಹೊಕ್ಕವರ ಅಶುಭಗಳನ್ನು ತ್ವರಿತವಾಗಿ ನಾಶಗೊಳಿಸುವ ಆ ಸಿದ್ಧಿವಿನಾಯಕನಿಗೆ ನಾನು ನಮಸ್ಕರಿಸುತ್ತೇನೆ. ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ ನಮಸ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ||೨||     ದುರಹಂಕಾರಿಗಳಿಗೆ ಅತಿಭೀಕರನೂ,ಆಗತಾನೇ ಉದಯಿಸುತ್ತಿರುವ ಉದಯಸೂರ್ಯನ ಕಾಂತಿಯನ್ನು ಹೊಂದಿರುವ,ಶರಣಾಗತರಾದ ದೇವದಾನವರ ಘೋರಸಂಕಟಗಳವಿನಾಶಕನಾಗಿರುವ,ಸುರೇಶ್ವರನೂ,ನಿಧೀಶ್ವರನೂ,ಗಜೇಶ್ವರನೂ,ಗಣೇಶ್ವರನೂ,ಮಹೇಶ್ವರನೂ,ಪವಿತ್ರತಮನೂ ಆಗಿರುವ ಆ ಸಿದ್ಧಿದಾಯಕ ವಿನಾಯಕನನ್ನು ನಾನು ಸದಾ ಆಶ್ರಯಿಸುತ್ತೇನೆ. ಸಮಸ್ತಲೋಕ ಶಂಕರಂ ನಿರಸ್ತದೈತ್ಯಕುಂಜರಂ ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ | ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕ...

ಮಹಾ ಮೃತ್ಯುಂಜಯ ಸ್ತೋತ್ರಮ್

Image
ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೧||     ರುದ್ರನನ್ನನು,ಪಶುಪತಿಯನ್ನು,ಸ್ಥಿರರೂಪೀಶಿವನನ್ನು,ನೀಲಕಂಠನನ್ನು, ಉಮಾಪತಿಯನ್ನು,ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೨||     ಕಾಲಕಂಠನನ್ನು,ಕಾಲಮೂರ್ತಿಯನ್ನು,ಕಾಲಾಗ್ನಿಯನ್ನು,ಕಾಲನಾಶಕನನ್ನು ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೩||     ವಾಮದೇವನನ್ನು,ಲೋಕನಾಥನನ್ನು,ಜಗದ್ಗುರುವನ್ನು,ದೇವದೇವನಾದ ಮಹಾದೇವನನ್ನು ನಾನು ಶಿರಸಾ ನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ದೇವದೇವಂ ಜಗನ್ನಾಥಂ ದೇವೇಶಂ ವೃಷಭಧ್ವಜಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೪||     ದೇವದೇವನಾದಜಗನ್ನಾಥನನ್ನುದೇವೇಶನಾದ ಪರಮಶಿವನನ್ನು,ವೃಷಭಧ್ವಜನನ್ನು,ಮಹಾದೇವನನ್ನುನಾನುಶಿರಸಾನಮಸ್ಕರಿಸುವೆ.ಮೃತ್ಯು ನನಗೇನು ಮಾಡಲು ಸಾಧ್ಯ? ಗಂಗಾಧರಂ ಮಹಾದೇವಂ ಶಂಕರಂ ಶೂಲಪಾಣಿನಮ್ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ ||೫||     ಗಂಗಾಧರ...

ಶ್ರೀ ಧನ್ವಂತರಿ ಸ್ತೋತ್ರಮ್

Image
ನಮಾಮಿ ಧನ್ವಂತರಿಮಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಮ್ | ಲೋಕೇ ಜರಾರುಗ್ಭಯಮೃತ್ಯು ನಾಶಂ ದಾತಾರಮೀಶಂ ವಿವಿಧೌಷಧೀನಾಂ ||೧||     ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು. ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ- ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: | ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨||     ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ. ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ | ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩||     ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ...

ಶ್ರೀದತ್ತಾತ್ರೇಯ ಧ್ಯಾನಸ್ತೋತ್ರಮ್

Image
ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತ: | ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್ ||೧||     ಯಾರ ಸ್ಮರಣೆ ಮಾತ್ರದಿಂದಲೇ ಭೂತ ಪ್ರೇತ ಪಿಶಾಚಾದಿಗಳು ದೂರವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ಯನ್ನಾಮಸ್ಮರಣಾದ್ದೈನ್ಯಂ ಪಾಪಂ ತಾಪಶ್ಚ ನಶ್ಯತಿ | ಭೀತಿಗ್ರಹಾರ್ತಿದು:ಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್ ||೨||     ಯಾವಾತನ ಸ್ಮರಣೆ ಮಾತ್ರದಿಂದಲೇ ಪಾಪ,ದೈನ್ಯ,ತಾಪತ್ರಯ,ದು:ಸ್ವಪ್ನಾದಿಗಳು ಪರಿಹಾರಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ದದ್ರು-ಸ್ಪೋಟಕ ಕುಷ್ಠಾದಿ- ಮಹಾಮಾರೀ ವಿಷೂಚಿಕಾ | ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೩||     ಚರ್ಮರೋಗ-ಗೌಪ್ಯವಾಗಿರುವ ಕುಷ್ಠರೋಗ-ಸಾಂಸರ್ಗಿಕ ರೋಗವಾಗಿರುವ ಬಲಿಷ್ಟವಾದ ಮಾರಿಕಾಬೇನೆ[ಕಾಲೆರಾ]ಗಳನ್ನು ನಾಶಮಾಡುವುದರೊಂದಿಗೆ ಇತರ ರೋಗಗಳನ್ನೂ ನಾಶಮಾಡುವ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ. ಸಂಗಜಾ ದೇಶಕಾಲೋತ್ಥಾ ಅಪಿ ಸಾಂಕ್ರಾಮಿಕಾ ಗದಾ: | ಶಾಮ್ಯಂತಿ ಯತ್ ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್ ||೪||     ಸಂಸರ್ಗದಿಂದ ಉಂಟಾಗುವ ಹಾಗೂ ದೇಶಕಾಲ-ನಿಸರ್ಗ ದೋಷಗಳಿಂದುಂಟಾಗುವ ರೋಗಾದಿಗಳು;ವಿಪತ್ತುಗಳಿಗೆ ಸಿಲುಕುವುದರಿಂಟಾಗಬಹುದಾದ ಹಾನಿಗಳು;ಸಾಂಕ್ರಾಮಿಕರೋಗಗಳು,ಆಯುಧಗಳಿಂದುಂಟಾಗಬಹುದಾದ ಬಲಿಷ್ಠವಾದ ಹಾನಿಗಳೆಲ್ಲವೂ ಯಾರ ಸ್ಮರಣೆ ಮಾತ್ರದ...