ಲಲಿತಾ ತ್ರಿಶತೀ -13 ಓಂ ಕಂದರ್ಪಜನಕಾಪಾಂಗವೀಕ್ಷಣಾಯೈ ನಮಃ

    ಅಪಾಂಗ ವೀಕ್ಷಣವೆಂದರೆ ಅಲ್ಪವಾದ ನೋಟವು, ದೇವಿಯು ಮನ್ಮಥನನ್ನು ಸೃಷ್ಟಿಸುವ ಅಲ್ಪಮಾತ್ರ ದರ್ಶನವುಳ್ಳವಳು, ಇದರಿಂದ ಕುರೂಪಿಗಳಾದ ಜಡ ಜನರು ದೇವಿಯ ಸಕೃದ್ದರ್ಶನಕ್ಕೆ ಪಾತ್ರರಾಗಿ ಮನ್ಮಥನಂತೆ ರೂಪ, ಯೌವನ, ಸಾಮರ್ಥ್ಯ, ಲಕ್ಷ್ಮೀ ಮುಂತಾದ ಅನೇಕ ಗುಣಪೂರ್ಣರಾಗುವರು, ಎಂಬ ದೇವಿಯ ಮಹಿಮೆಯು ವರ್ಣಿತವಾಗುವುದು ಅಥವಾ ಮನ್ಮಥನಿಗೆ ಜನಕನಾದ ನಾರಾಯಣನು ಹುಬ್ಬಿನ ಚಲನೆಯಿಂದ ಪ್ರೇರೇಪಿಸುವುದೆಂಬ ದೇವಿಯ ಅಪಾಂಗ ವೀಕ್ಷಣಕ್ಕೆ ಅಧೀನನಾಗಿ ಜಗದ್ರಕ್ಷಣಾದಿ ಕಾರ್ಯವನ್ನು ಆಚರಿಸಿ ಆಜ್ಞೆಯನ್ನು ಪಾಲಿಸುವನು, ಆದ್ದರಿಂದ ಆಜ್ಞಾಕರನಾದ ನಾರಾಯಣನುಳ್ಳವಳೂ ಅಥವಾ ಕಂದರ್ಪ ಜನಕಳಾದ ಮಹಾ ಲಕ್ಷ್ಮಿಯು ದೇವಿಯ ಅಪಾಂಗ ವೀಕ್ಷಣದಿಂದ ಪ್ರೇರಿಸಲ್ಪಡುವವಳಾಗಿ ಇರುವಳು ಅಥವಾ ಕಂದರ್ಪ ವಿಕಾರವನ್ನು ಉಂಟುಮಾಡುವ ಗಂಧ ಪುಷ್ಪ ಮೊದಲಾದ ಭೋಗ್ಯವಸ್ತುಗಳ ಸಮೃದ್ಧಿಯನ್ನು ಕೊಡುವ ಅಪಾಂಗ ದರ್ಶನವುಳ್ಳವಳು ಅಥವಾ ಚಂದ್ರನು ವಾಮನೇತ್ರ ರೂಫನಾಗಿರುವುದರಿಂದ ವೀಕ್ಷಣವು ಚಂದ್ರಿಕಾ ರೂಪವಾಗುವುದು. ಮನ್ಮಥ ವಿಕಾರ ಜನಕವಾದ ಚಂದ್ರಿಕೆಯನ್ನು ಚೆಲ್ಲುವ ವಾಮನೇತ್ರವುಳ್ಳವಳು ಅಥವಾ ಕಂದರ್ಪಜನಕ ಶಬ್ದಕ್ಕೆ ಲಕ್ಷಣಾ ವೃತ್ತಿಯಿಂದ ಲಕ್ಷ್ಮಿಯ ಆಧಾರವಾದ ಕಮಲ ಎಂದು ಅರ್ಥ. ಆ ಕಮಲದಂತಿರುವ ನೋಟದಿಂದ ಜಗತ್ಸಂಜೀವನವನ್ನುಂಟು ಮಾಡುವ ವೀಕ್ಷಣವುಳ್ಳವಳು. "ಅಪಾಂಗಾಭ್ಯಾಂ ವೀಕ್ಷಣಮ್, ಕಂದರ್ಪಸ್ಯ ಜನಕಂ ಅಪಾಂಗ ವೀಕ್ಷಣಂ ಯಸ್ಯಾಃ, ಕಂದರ್ಪ ಜನಕಃ ಅಪಾಂಗ ವೀಕ್ಷಣೇ ಯಸ್ಯಾಃ, ಕಂದರ್ಪ ಜನಕಾ ಅಪಾಂಗ ವೀಕ್ಷಣೇ ಯಸ್ಯಾಃ ಕಂದರ್ಪ, ಜನಕಾಃ ಅಪಾಂಗ ವೀಕ್ಷಣಾತ್ ಯಸ್ಯಾಃ, ಕಂದರ್ಪ ಜನಕವತ್ ಅಪಾಂಗಂತೇನ ವೀಕ್ಷಣಂ ಯಸ್ಯಾಃ" ಎಂಬುದಾಗಿ ಅಯಾಯ ಅರ್ಥಗಳಲ್ಲಿ ಉಚಿತವಾದ ವಿಗ್ರಹ ವಾಕ್ಯಗಳನ್ನು ಇಟ್ಟುಕೊಳ್ಳಬೇಕು.

(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ