ಋಣ ಮೋಚಕ ಮಂಗಲ ಸ್ತೋತ್ರಮ್
#ಅಂಗಾರಕ_ಜಯಂತಿ
#ಶುಭಾಶಯಗಳು
|| ಋಣಮೋಚಕ ಮಂಗಲ ಸ್ತೋತ್ರಮ್ ||
ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದ: |
ಸ್ಥಿರಾಸನೋ ಮಹಾಕಾಯ: ಸರ್ವ ಕರ್ಮಾವರೋಧಕ: ||೧||
ಭಾವಾರ್ಥ:-ಮಂಗಳ,ಭೂಮಿಪುತ್ರ,ಋಣನಾಶಕ,ಧನದಾಯಿ,ಸ್ಥಿರಾಸನ,
ಮಹಾಕಾಯ, ಸರ್ವಕರ್ಮಗಳಿಗೆ ತಡೆಯನ್ನುಂಟುಮಾಡುವವ,...
ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರ: |
ಧರಾತ್ಮಜ: ಕುಜೋ ಭೌಮೋ ಭೂತಿದೋ ಭೂಮಿ ನಂದನ: ||೨||
ಭಾವಾರ್ಥ:-ಲೋಹಿತ,ಲೋಹಿತಾಕ್ಷ,ಸಾಮವೇದ ಗಾಯಕರಿಗೆ
ಕರುಣೆಯನ್ನು
ತೋರುವವ,ಭೂಮಿತನಯ,ಕುಜ,ಭೌಮ,ಅಭ್ಯುದಯಕಾರಕ,ಭೂಮಿಗೆ
ಸಂತಸವನ್ನು ದಯಪಾಲಿಸುವವ....
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕ: |
ವೃಷ್ಟೇ ಕರ್ತಾsಪಹರ್ತಾಚ ಸರ್ವಕಾಮ ಫಲಪ್ರದ: ||೩||
ಅಂಗಾರಕ,ಯಮ,ಸರ್ವರೋಗವಿನಾಶಕ,ವೃಷ್ಟಿ[ಮಳೆ]ಕಾರಕ,ವೃಷ್ಟ್ಯಾಪ
ಹಾರಕ, ಸಮಸ್ತ ಕಾಮನೆಗಳ ಫಲದಾಯಕ...
ಏತಾನಿ ಕುಜನಾಮಾನಿ ನಿತ್ಯಮ್ ಯ: ಶ್ರದ್ಧಯಾ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಶೀಘ್ರ ಮವಾಪ್ನುಯಾತ್ ||೪||
ಭಾವಾರ್ಥ:-ಕುಜನ ಕುರಿತಾದ ಈ ಹೆಸರುಗಳನ್ನು ಅನುದಿನವೂ
ಶ್ರದ್ಧಾಯುಕ್ತನಾಗಿ ಯಾವಾತನು ಪಠಿಸುವನೋ ಅವನಿಗೆ ಸಾಲಾದಿ
ಋಣಗಳು ಬಾಧಿಸುವುದಿಲ್ಲ. ಅಂತಹವನು ಶೀಘ್ರವಾಗಿ
ಧನವಂತನಾಗುವನು.
ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿ ಹಸ್ತಂಚ ಮಂಗಲಂ ಪ್ರಣಮಾಮ್ಯಹಂ ||೫||
ಭಾವಾರ್ಥ:-ಭೂದೇವಿಯ ಗರ್ಭದಿಂದುದಿಸಿದವನೂ,ವಿದ್ಯುತ್ತಿನ
ಪ್ರಕಾಶದಂತೆ ಬೆಳಗುತ್ತಲಿರುವವನೂ,ಕುಮಾರನೂ,ಶಕ್ತಿಹಸ್ತನೂ
ಆಗಿರುವ ಮಂಗಳನಿಗೆ ನಾನು ನಮಿಸುವೆನು.
ಸ್ತೋತ್ರಮಂಗಾರಕಸ್ಯೈ ತತ್ಪಠನೀಯಂ ಸದಾನೃಭಿ: |
ನ ತೇಷಾಂ ಭೌಮಜಾ ಪೀಡಾ ಸ್ವಲ್ಪಾಪಿ ಭವತಿಕ್ವಚಿತ್ ||೬||
ಭಾವಾರ್ಥ:-ಅಂಗಾರಕನೆಂಬ ಹೆಸರಿನ ಈ ಕುಜ ಸ್ತೋತ್ರವು ಮನುಜರಿಂದ
ಯಾವಾಗಲೂ ಪಠಣ ಮಾಡತಕ್ಕದ್ದಾಗಿದೆ.ಆದರಿಂದ ಕುಜನ ಅನಿಷ್ಟಗಳು
ಅತ್ಯಂತ ವಿರಳವಾಗಿ ಕೂಡಾ ಕಿಂಚಿತ್ತೂ ಬಾಧಿಸದು.
ಅಂಗಾರಕ ಮಹಾಭಾಗ ಭಗವನ್ ಭಕ್ತವತ್ಸಲ |
ತ್ವಾಂ ನಮಾಮಿ ಮಮಾಶೇಷ ಮೃಣಮಾಶು ವಿನಾಶಯ ||೭||
ಭಾವಾರ್ಥ:-ಹೇ ಭಕ್ತವತ್ಸಲನೇ! ಸುಪ್ರಸಿದ್ಧನಾಗಿರುವ
ಭಗವದ್ಸ್ವರೂಪೀ ಕುಜನೇ, ನಿನಗಾನು ನಮಿಸುವೆನು. ನನ್ನ ಸಮಸ್ತ
ರಿಣದ ಹಂಗಿನಿಂದ ನಿ:ಶೇಷವಾಗಿ ಮುಕ್ತಗೊಳಿಸು.
ಋಣರೋಗಾದಿ ದಾರಿದ್ರ್ಯಂ ಯೇ ಚಾನ್ಯೇಹ್ಯಪಮೃತ್ಯವ: |
ಭಯಕ್ಲೇಷ ಮನಸ್ತಾಪಾನಶ್ಯಂತು ಮಮ ಸರ್ವದಾ ||೮||
ಭಾವಾರ್ಥ:-ಹಂಗು[ಸಾಲದಋಣ],ಅನಾರೋಗ್ಯಾದಿ ಅನಿಷ್ಟಗಳು,
ದರಿದ್ರತೆ, ಹಾಗೆಯೇ ಅಪಮೃತ್ಯು, ಭೀತಿ,ದು:ಖ, ಮನೋವ್ಯಥೆ,
ಸೇಡು ಇತ್ಯಾದಿ ಅನ್ಯ ಬಾಧೆಗಳು ಸದಾ ನಾಶವಾಗಲಿ.
ಅತಿವಕ್ರ ದುರಾರಾಧ್ಯ ಭೋಗಮುಕ್ತಾ ಜಿತಾತ್ಮನ: |
ತುಷ್ಟೋದದಾಸಿ ಸಾಮ್ರಾಜ್ಯಂ ರುಷ್ಟೋಹರಸಿ ತತ್ಕ್ಷಣಾತ್ ||೯||
ಭಾವಾರ್ಥ:-ಹೇ ಕುಜನೇ! ನೀನು ಶ್ರೇಷ್ಠನಾಗಿರುವ ಮಂಗಳ
ಗ್ರಹವಾಗಿರುವೆ. ಆರಾಧನೆಗೆ ಎಟಕದವನು. ಸುಖಾನುಭವಗಳಿಂದ
ವಿರಕ್ತನಾದವನು.ಆತ್ಮವನ್ನು ಜಯಿಸಿದಾತನು.ನೀನು
ತೃಪ್ತಿಹೊಂದಿದವನಾದರೆ ಸಾಮ್ರಾಜ್ಯವನ್ನು ದಯಪಾಲಿಸುವೆ.
ಅಸಂತುಷ್ಟನಾದರೆ ಆ ಕ್ಷಣವೇ ಅದನ್ನು ಅಪಹರಿಸುವೆ.
ವಿರಿಂಚಿಶಕ್ರವಿಷ್ಣೂನಾಂ ಮನುಷ್ಯಾಣಾಂತು ಕಾ ಕಥಾ |
ತೇನತ್ವಂಸರ್ವ ಸತ್ವೇನ ಗ್ರಹರಾಜೋ ಮಹಾಬಲ: ||೧೦||
ಭಾವಾರ್ಥ:-ಗ್ರಹಗಳ ಒಡೆಯನಾದ ನೀನು ಸಮಸ್ತ ಬಗೆಯ ಜೀವಿಗಳಲ್ಲಿ
ಅತಿಬಲಿಷ್ಟನು. ನಿನ್ನೆದುರು ಬ್ರಹ್ಮ,ಇಂದ್ರ,ವಿಷ್ಣು, ಹಾಗೂ
ಮನುಷ್ಯರ ಚರಿತ್ರೆ ಎಲ್ಲಿಹುದು?
ಪುತ್ರಾನ್ ದೇಹಿ ಧನಂದೇಹಿ ತ್ವಾಮಸ್ಮಿ ಶರಣಂಗತ: |
ಋಣ ದಾರಿದ್ರ್ಯ ದು:ಖೇನ ಶತ್ರೂಣಾಂ ಚ ಭಯಾತ್ತತ: ||೧೧||
ಭಾವಾರ್ಥ:-ಸ್ವಾಮಿಯೇ ನಿನಗನು ಶರಣಾಗಿರುವೆ. ನನಗೆ ಸಂತತಿಯನ್ನು
ಅನುಗ್ರಹಿಸು. ಸಂಪತ್ತನ್ನು ದಯಪಾಲಿಸು. ಸಾಲ,ದರಿದ್ರತೆ,ಸಂತಾಪ,
ಮತ್ತು ಶತ್ರುಗಳ ಭೀತಿಯಿಂದ ನನ್ನನ್ನು ರಕ್ಷಿಸುವವನಾಗು.
ಏಭಿರ್ದ್ವಾದಶಭಿ: ಶ್ಲೋಕೈರ್ಯ: ಸ್ತೌತಿ ಚ ಧರಾಸುತಂ |
ಮಹತೀಂ ಶ್ರಿಯಮಾಪ್ನೋತಿಹ್ಯಪರೋ ಧನದೋಯುವಾ ||೧೨||
ಭಾವಾರ್ಥ:-ಶ್ರೇಷ್ಠನೂ ಧನದಾಯಿಯೂ ತರುಣನೂ ಆಗಿರುವ
ಮಂಗಳನನ್ನು ಈ ಹನ್ನೆರಡು ಶ್ಲೋಕಗಳಿಂದ ಸ್ತುತಿಸುವವನು ಮಹಾ
ಸಂಪದಗಳನ್ನು ಹೊಂದುವನು.
|| ಇತಿ ಋಣ ಮೋಚಕ ಮಂಗಲ ಸ್ತೋತ್ರಮ್ ||
Comments
Post a Comment