ಶ್ರೀ ಜಗನ್ನಾಥ ದಾಸರು

ಜುಲೈ 8ರಂದು ಶ್ರೀ ಜಗನ್ನಾಥ ದಾಸರು ಜನಿಸಿದ ಪರಮ ಪವಿತ್ರ ಬ್ಯಾಗವಟ್ ಕ್ಷೇತ್ರದಲ್ಲಿ.

“ಹರಿಕಥಾಮೃತಸಾರ”ದ ಕರ್ತೃ ಶ್ರೀ ಜಗನ್ನಾಥದಾಸರು ಅನೇಕ ದೇವರನಾಮಗಳನ್ನು ರಚಿಸಿರುವುದಲ್ಲದೆ, ತ್ರಿಪದಿ ಛ೦ದಸ್ಸಿನ ನೂರಾರು ತತ್ವಸುವ್ವಾಲಿಗಳನ್ನು ಭಾಮಿನೀ ಷಟ್ಪದಿಯಲ್ಲಿ (೯೮೮) ರಚಿಸಿದವರು.

ಜಗನ್ನಾಥದಾಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬ್ಯಾಗವಟ್ಟಿ ಎ೦ಬ ಗ್ರಾಮದಲ್ಲಿ ೨೭.೭.೧೭೨೮ ರ೦ದು ತಿರುಪತಿಯ ಶ್ರೀನಿವಾಸನ ದಯೆಯಿ೦ದ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನದ ಇವರ ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮದಲ್ಲಿ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದರೆಂದು ತಿಳಿದುಬಂದಿದೆ. ಶ್ರೀನಿವಾಸನ ವಿದ್ಯಾಭ್ಯಾಸ ಮ೦ತ್ರಾಲಯದ ಸುಪ್ರಸಿಧ್ಧ ಶ್ರೀ ರಾಘವೇ೦ದ್ರ ಸ್ವಾಮಿಗಳವರ ಶ್ರೀ ಮಠದ ಪೀಠದಲ್ಲಿ ಅ೦ದು

ವಿರಾಜಮಾನರಾಗಿದ್ದ ಶ್ರೀ ವರದೇ೦ದ್ರ ತೀರ್ಥ ಶ್ರೀಪಾದ೦ಗಳವರಲ್ಲಿ ನಡೆದಿದ್ದು, “ಆಚಾರ್ಯ” ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬ೦ದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನಪ೦ಡಿತರೆ೦ದು ಪ್ರಸಿದ್ಧರಾದರು. ಇವರು ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದೂ ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಈ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಕಂಭ ಇದೆ. ಜಗನ್ನಾಥ ದಾಸರನ್ನು ಕುರಿತು ಹೇಳಬೇಕೆಂದರೆ..

ಜಲಜೇಷ್ಟ ನಿಭಾಕಾರಂ | ಜಗದೀಶ ಪದಾಶ್ರಯಂ
ಜಗತಿತಲ ವಿಖ್ಯಾತಂ | ಜಗನ್ನಾಥ ಗುರುಂ ಭಜೇ ||

“ಶ್ರೀ ಜಗನ್ನಾಥ ದಾಸರು” ಎಂಬ ಪದದಲ್ಲಿ ಒಂದೊಂದು ಅಕ್ಷರವೂ ಏನನ್ನು ತಿಳಿಸುತ್ತದೆ ಎಂಬುದನ್ನು ನೋಡಿದರೆ :

ಶ್ರೀ - ಶ್ರೀನಿವಾಸಾಚಾರ್ಯ (ಪೂರ್ವಾಶ್ರಮದ ಹೆಸರು)
ಜ - ಜಡವಾದ ಜಲದಲ್ಲಿ ಜಡವಾದ ಶಿಲಾಫಲಕೆಯಲ್ಲಿ “ಜಗನ್ನಾಥ ವಿಟ್ಠಲ” ಎಂಬ ಅಂಕಿತ ಪಡೆದು
ಜಗನ್ನಾಥದಾಸರಾಗಿ ಈ ಗ್ರಂಥ ರಚಿಸಲು ಪ್ರೇರಣೆ ಪಡೆದವರು
ಗ - ಗೋಪಾಲದಾಸರು ಮಾಡಿದಂತ ಆಯುರ್ಧಾನ..
ನ್ನಾ - ನಾವೆಯಂತಿರುವ “ಹರಿಕಥಾಮೃತಸಾರ”ವೆಂಬ ಕೃತಿಯು ಇವರಿಂದ ರಚಿತವಾಗಿದೆ
ಥ - ಥಳಥಳಿಸುವ ಭಕ್ತಿ ಸಾಹಿತ್ಯದ ಕಳಶವಾಗಿ ಜೀವರುಗಳಿಗೆ
ದಾ - ದಾರಿ ದೀಪವಾಗಿ ಮುಕ್ತಿಗೆ ಸೋಪಾನವಾಗಿ
ಸ - ಸಂಸಾರ ಸಾಗರವನ್ನು ದಾಟಿಸಿ
ರು - ರಮಾ ನಾರಾಯಣರ ವೈಕುಂಠ ಪುರಿಯನ್ನು ತಲುಪುವಲ್ಲಿ ನಾಂದಿಯಾಗುತ್ತದೆ ಎಂಬ ನಂಬಿಕೆ.
ದಾಸರು ರಚಿಸಿದ ಕೃತಿಗಳು.......
೧) ಹರಿಕಥಾಮೃತಸಾರ
೨) ೧೯೪ ಕೀರ್ತನೆಗಳು
೩) ೧೯ ತತ್ವ ಸುವ್ವಾಲಿಗಳು
೪) ೨ ಉಗಾಭೋಗಗಳು
೫) ೩ ಸುಳಾದಿಗಳು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ