ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ
#ಶ್ರೀ_ಕೇದಾರೇಶ್ವರ_ವ್ರತ_ಶುಭಾಶಯಗಳು
ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ
ಆರತಿಯ ಬೆಳಗಿರೆ ದೇವಗೆ ।।
ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ
ಆರತಿಯ ಬೆಳಗಿರೆ ದೇವಗೆ ।।
ಪಾರ್ವತಿಯ ಅರ್ಧ ದೇಹ ಪಡೆದಂತ ದೇವಗೆ
ಪ್ರಥಮಗೈಯೇ ಸಕಲ ಭಾಗ್ಯ ಕೊಡುವಂತ ಈಶಗೆ ।
ನಂದಿ - ಸ್ಕಂದ - ಗಣಪರೊಡನೆ ಕೈಲಾಸದಿ ಇರುವಗೆ
ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।।
ಪ್ರಥಮಗೈಯೇ ಸಕಲ ಭಾಗ್ಯ ಕೊಡುವಂತ ಈಶಗೆ ।
ನಂದಿ - ಸ್ಕಂದ - ಗಣಪರೊಡನೆ ಕೈಲಾಸದಿ ಇರುವಗೆ
ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।।
ನಂಜನುಂಡು ಲೋಕ ಹಿತವ ಬಯಸಿದಂತ ಹರನಿಗೆ
ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ ।
ಭಕ್ತಿಯಿಂದ ಬೇಡೇ ಒಡನೆ ಓಡಿಬರುವ ಈಶಗೆ
ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।।
ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ ।
ಭಕ್ತಿಯಿಂದ ಬೇಡೇ ಒಡನೆ ಓಡಿಬರುವ ಈಶಗೆ
ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।।
ವ್ರತವಗೈಯೇ ಮಾಂಗಲ್ಯದ ಭಾಗ್ಯ ಕೊಡುವ ಸ್ವಾಮಿಗೆ
ಭಜಿಸಿ ಬೇಡೇ ಸಂತಾನವ ಕೊಡುವ ಅಮಿತಗೆ ।
ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ
ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।।
ಭಜಿಸಿ ಬೇಡೇ ಸಂತಾನವ ಕೊಡುವ ಅಮಿತಗೆ ।
ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ
ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।।
ಕೋಟಿ ಕೋಟಿ ಜೀವಗಳಿಗೆ ಅನ್ನ ನೀಡೋ ದಾತಗೆ
ಉಪವಾಸದ ವ್ರತವಗೈಯೇ ಒಲಿದು ಬರುವ ಈಶಗೆ ।
"ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ
ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।।
ಉಪವಾಸದ ವ್ರತವಗೈಯೇ ಒಲಿದು ಬರುವ ಈಶಗೆ ।
"ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ
ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।।
ನಾದಲೋಲ ನಾಟ್ಯರಾಜ" ಓಂ"ಕಾರದ ರೂಪಗೆ
ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ ।
ನಂದಿ ಅರ್ಧ ರೂಪದಲ್ಲಿ ಕೇದಾರದಿ ಇರುವಗೆ
ಪಾಂಡವರ ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।।
ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ ।
ನಂದಿ ಅರ್ಧ ರೂಪದಲ್ಲಿ ಕೇದಾರದಿ ಇರುವಗೆ
ಪಾಂಡವರ ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।।
"ಓಂ ನಮಃ ಶಿವಾಯ" ಓಂ ಕೇದಾರದ ಲಿಂಗಗೆ
ಮಂಗಳದ ದೀಪ ಬೆಳಗಿ ಶ್ರೀ ಗೌರಿರಮಣಗೆ ।
"ಓಂ ನಮಃ ಶಿವಾಯ" ಓಂ ಗಣಪನ ಪ್ರಿಯ ಪಿತನಿಗೆ
ಶುಭಮಂಗಳವೆನ್ನಿರೇ ಶ್ರೀ ಸ್ಕಂದನ ಜನಕಗೆ ।।ಮಂಗಳವ।।
ಮಂಗಳದ ದೀಪ ಬೆಳಗಿ ಶ್ರೀ ಗೌರಿರಮಣಗೆ ।
"ಓಂ ನಮಃ ಶಿವಾಯ" ಓಂ ಗಣಪನ ಪ್ರಿಯ ಪಿತನಿಗೆ
ಶುಭಮಂಗಳವೆನ್ನಿರೇ ಶ್ರೀ ಸ್ಕಂದನ ಜನಕಗೆ ।।ಮಂಗಳವ।।
Comments
Post a Comment