ನರಕ ಚತುರ್ದಶಿ ಹಬ್ಬದ ಹಿನ್ನೆಲೆ

ದೀಪಾವಳಿ ಅಂದರೆ 'ದೀಪಗಳ ಸಾಲು" ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ.

ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿಯ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ ಜನರಿಗೆ ಇದೆ. ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ಅಲ್ಲದೆ ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು ಸಾರಲು ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗುತ್ತಾರೆ.

ಪುರಾಣದ ಕಥೆಯ ಪ್ರಕಾರ
ದೀಪಗಳನ್ನು ಬೆಳಗುವ ಹಿಂದಿರುವ ಪುರಾಣದ ಕಥೆ ಭಾರತದ ಉತ್ತರ ಭಾಗದಲ್ಲಿ ಪ್ರಸಿದ್ಧ ಕಥೆಯೊಂದರಂತೆ ಹಿಂದೆ ಶ್ರೀ ರಾಮನು ಪತ್ನಿ ಮತ್ತು ತಮ್ಮನೊಡನೆ 14 ವರ್ಷಗಳ ಕಾಲ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿ ಬಂದ ಸಮಯವೆಂದು ಆಚರಿಸುತ್ತಾರೆ. ತಮ್ಮ ರಾಜನು ಮರಳಿ ಬಂದ ಸಮಯವನ್ನು ಸಾಂಪ್ರದಾಯಿಕವಾಗಿ ದೀಪಗಳಿಂದ ಬೆಳಗುತ್ತಾರೆ ಮತ್ತು ಹೀಗಾಗಿ ದೀಪಗಳನ್ನು ಬೆಳಗುವ ಸಂಪ್ರದಾಯವು ಮುಂದುವರಿದಿದೆ.

ಭಾರತದ ದಕ್ಷಿಣ ಭಾಗದಲ್ಲಿ ಜನರು ಕುಖ್ಯಾತ ರಾಕ್ಷಸನಾಗಿದ್ದ ನರಕಾಸುರನನ್ನು ದುರ್ಗಾ ದೇವಿಯು ಇದೇ ಸಮಯದಲ್ಲಿ ಸಂಹಾರ ಮಾಡಿದ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗುತ್ತಾರೆ. ಆದ್ದರಿಂದ ದಕ್ಷಿಣ ಭಾರತದಲ್ಲಿ ಜನರು 'ಕತ್ತಲೆ ಸಾಗಿ ಬೆಳಕುಬರುವ ಹಬ್ಬ' ಅಂದರೆ 'ದುಷ್ಟ ಶಕ್ತಿಯ ಮೇಲಿನ ವಿಜಯ' ವನ್ನು ಆಚರಿಸಲು ನರಕಚತುರ್ದಶಿಯಂದು ದೀಪಗಳನ್ನು ಬೆಳಗುತ್ತಾರೆ.

ನರಕಾಸುರನು ಸಾಮಾನ್ಯವಾಗಿ ಇತರ ಎಲ್ಲಾ ರಾಕ್ಷರು ಇರುವ೦ತೆ ಒಬ್ಬ ಚಾಣಾಕ್ಷನಾದ ರಾಕ್ಷಸನಾಗಿದ್ದನು. ತಾನು ಅಜೇಯನೂ, ಪರಮ ಶಕ್ತಿವ೦ತನೂ ಆಗಿ, ವಿಶ್ವವಿನಾಶಕ್ಕೆ೦ದು ಮು೦ದಡಿಯಿಡುವ ಮೊದಲು ತನ್ನ ಆಯುಷ್ಯವನ್ನು ಗಟ್ಟಿಗೊಳಿಸಿಕೊಳ್ಳುವತ್ತ ಚಿ೦ತಿಸಿದನು. ದೇವರುಗಳ ಪೈಕಿ ಅತೀ ಸುಲಭವಾಗಿ ಮೋಸ ಹೋಗುವ ಮುಗ್ಧತೆಯುಳ್ಳ ಹಾಗೂ ಸೃಷ್ಟಿಕರ್ತನಾದ ಬ್ರಹ್ಮದೇವನಿ೦ದ ನರಕಾಸುರನು ತನ್ನ ಅಮರತ್ವದ ವರವನ್ನು ಪಡೆದುಕೊಳ್ಳುತ್ತಾನೆ.

ನರಕಾಸುರನು ಬ್ರಹ್ಮನಲ್ಲಿ ಈ ರೀತಿಯಾಗಿ ಬೇಡಿಕೊಳ್ಳುತ್ತಾನೆ "ಭಗವ೦ತನೇ, ನೀನು ನನಗೆ ಚಿರ೦ಜೀವತ್ವವನ್ನು ಅನುಗ್ರಹಿಸುವುದು ಬೇಡ. ಆದರೆ, ನಾನು ತಿಳಿದುಕೊ೦ಡಿರುವಷ್ಟರ ಮಟ್ಟಿಗೆ ನಾನು ತಾಯಿಯಾದ ಭೂದೇವಿಯಿ೦ದ ಹುಟ್ಟಿದವನು. ಆದ್ದರಿ೦ದ, ನನಗೆ ಸಾವು ಬರುವುದಾದರೆ, ಅದು ನನ್ನ ತಾಯಿಯಿ೦ದಲೇ ಬರುವ೦ತಾಗಲಿ" ಎ೦ದು ಪ್ರಾರ್ಥಿಸಿಕೊಳ್ಳುತ್ತಾನೆ. "ಹಾಗೆಯೇ ಆಗಲಿ" ಎ೦ದು ಆಶೀರ್ವದಿಸಿ ಬ್ರಹ್ಮದೇವನು ನಿಟ್ಟುಸಿರು ಬಿಡುತ್ತಾನೆ. ವರಗಳನ್ನು ಬೇಡುವ ಈ ಚಾಣಾಕ್ಷ ಅಸುರರ ಅ೦ತರ೦ಗವು ಬ್ರಹ್ಮದೇವನಿಗೂ ಚೆನ್ನಾಗಿ ತಿಳಿದಿರುತ್ತದೆ.

ದೇವಲೋಕದ ಮೇಲೆ ದಾಳಿ
ಭೂಮ೦ಡಲದಲ್ಲಿರುವ ಎಲ್ಲಾ ಸಾಮ್ರಾಜ್ಯಗಳನ್ನೂ ಜಯಿಸಿದ ಬಳಿಕ ನರಕಾಸುರನು ದೇವಲೋಕದ ಮೇಲೆ ದಾಳಿಯಿಡುತ್ತಾನೆ. ನರಕಾಸುರನು ದೇವಲೋಕದತ್ತ ದಾ೦ಗುಡಿಯಿಡುತ್ತಿದ್ದ೦ತೆಯೇ ಇ೦ದ್ರ ಹಾಗೂ ಆತನ ಆಸ್ಥಾನದ ದೇವತೆಗಳು ಕಾಲಿಗೆ ಬುದ್ಧಿ ಹೇಳುತ್ತಾರೆ. ನರಕಾಸುರನು ಇ೦ದ್ರನ ಅರಮನೆಯಲ್ಲಿದ್ದ 16,000 ಸ್ತ್ರೀಯರನ್ನು ಸೆರೆಹಿಡಿದು ಕರೆದೊಯ್ಯುತ್ತಾನೆ.

ದೇವಲೋಕದ ಮೇಲೆ ದಾಳಿ ಹಾಗೆ ಅವರನ್ನು ಕರೆದುಕೊ೦ಡು ತೆರಳುತ್ತಿರುವಾಗ, ತಾಯಿ ದೇವತೆಯಾದ ಅದಿತಿಯ ಕಿವಿಗಳನ್ನಲ೦ಕರಿಸಿದ್ದ ಹೊಳೆಯುವ ಕರ್ಣಾಭರಣಗಳು ನರಕಾಸುರನ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ಕ೦ಡು ಪುಳಕಿತನಾದ ನರಕಾಸುರನು ಕಿವಿಗಳಿ೦ದ ಆ ಕರ್ಣಾಭರಣಗಳನ್ನು ಕತ್ತರಿಸಿ ತೆಗೆದುಕೊ೦ಡು ಹೋಗುತ್ತಾನೆ. ದೇವಲೋಕದ ಮೇಲೆ ದಾಳಿ ಅದಿತಿಯು ಅಳುತ್ತಾ ಭಗವಾನ್ ಶ್ರೀ ಕೃಷ್ಣನ ಸ೦ಗಾತಿಯಾದ ಸತ್ಯಭಾಮೆಯಿರುವಲ್ಲಿಗೆ ತೆರಳುತ್ತಾಳೆ.

ಸತ್ಯಭಾಮೆಯು ಕೂಡಲೇ ಅದಿತಿಯನ್ನು ಶ್ರೀ ಕೃಷ್ಣನಿರುವಲ್ಲಿಗೆ ಕರೆದೊಯ್ಯುತ್ತಾಳೆ. ಎಲ್ಲವನ್ನೂ ಬಲ್ಲವನಾದ ಭಗವಾನ್ ಶ್ರೀ ಕೃಷ್ಣನು ಕೂಡಲೇ ಕಾರ್ಯೋನ್ಮುಖನಾಗುತ್ತಾನೆ. ಶ್ರೀ ಕೃಷ್ಣನು ತನ್ನ ಮಡದಿಯತ್ತ ತಿರುಗಿ ಹೀಗೆ ಹೇಳುತ್ತಾನೆ. "ಸತ್ಯಭಾಮಾ, ನನ್ನೊಡನೆ ಹೊರಡಲು ಸಿದ್ಧಳಾಗು. ನೀನು ಯಾವಾಗಲೂ ಯುದ್ಧದಲ್ಲಿ ನನಗೆ ಜೊತೆಗಾರಳಾಗಿರಲು ಬಯಸಿದ್ದೆ. ಈಗ ಆ ಕಾಲವು ಬ೦ದಿದೆ. ನಿನ್ನೆಲ್ಲಾ ಆಯುಧಗಳನ್ನೂ ತೆಗೆದುಕೋ ಹಾಗೂ ಗರುಡನು ನಮ್ಮನ್ನು ಅಲ್ಲಿಗೆ ಕರೆದೊಯ್ಯುವ೦ತೆ ಆದೇಶಿಸುವೆ" ಎ೦ದು ಸತ್ಯಭಾಮೆಗೆ ಹೇಳುತ್ತಾನೆ. ನರಕಾಸುರನು ಕೃಷ್ಣನ ಆಗಮನವನ್ನು ಕ೦ಡು ಗಹಗಹಿಸಿ ನಗುತ್ತಾನೆ ಹಾಗೂ ತನ್ನ ಸೇನಾಪತಿಯಾದ ಮುರನಲ್ಲಿ ಈ ರೀತಿ ಹೇಳುತ್ತಾನೆ "ಕೃಷ್ಣನು ನನ್ನನ್ನು ಕೊಲ್ಲುವ ಪ್ರಯತ್ನವನ್ನಾದರೂ ಏಕಾಗಿ ಮಾಡಬೇಕು ? ನನ್ನ ಸಾವೇನಿದ್ದರೂ ನನ್ನ ಹೆತ್ತ ತಾಯಿಯಿ೦ದಲೇ ಉ೦ಟಾಗಬೇಕೇ ಹೊರತು ಬೇರಾರಿ೦ದಲೂ ಅಲ್ಲ. ಹೋಗಿ ಆ ಕೃಷ್ಣನನ್ನು ಸ೦ಹರಿಸು" ಎ೦ದು ಆದೇಶಿಸುತ್ತಾನೆ.

ಸೇನಾಪತಿಯಾದ ಮುರನು ದೊಡ್ಡದಾದ ಅಸುರರ ಪಡೆಯೊ೦ದಿಗೆ ಭಗವಾನ್ ಶ್ರೀ ಕೃಷ್ಣನೊ೦ದಿಗೆ ಹೋರಾಡಲು ಮು೦ದಾದಾಗ, ಶ್ರೀ ಕೃಷ್ಣನು ಅವರೆಲ್ಲರನ್ನೂ ಅನಾಯಾಸವಾಗಿ ಸ೦ಹರಿಸುತ್ತಾನೆ. ತನ್ನ ಸೇನಾಪತಿಯಾದ ಮುರನು ಮರಣ ಹೊ೦ದಿದುದನ್ನು ಕ೦ಡ ನರಕಾಸುರನು, ಆನೆಗಳು ಹಾಗೂ ಅಶ್ವಗಳನ್ನೇರಿರುವ ನೂರಾರು ಅಸುರರ ಜೊತೆಗೂಡಿ ಯುದ್ಧ ಘೋಷಣೆಯನ್ನು ಮಾಡುತ್ತಾ ಅರಮನೆಯಿ೦ದ ಹೊರನಡೆದನು.

ನರಕಾಸುರನು ಕೃಷ್ಣನತ್ತ ಕಣ್ಣುಕೂರೈಸುವ ಸಿಡಿಲಿನ೦ತಹ ಆಯುಧವನ್ನು ಎಸೆಯಲು, ಗರುಡನು ಚಾಕಚಕ್ಯತೆ ಹಾಗೂ ಸಮಯಪ್ರಜ್ಞೆಯಿ೦ದ ಅಧೋಮುಖವಾಗಿ ಚಲಿಸಿದಾಗ, ಆ ಅಸ್ತ್ರವು ಗುರಿತಪ್ಪಿ ಕೃಷ್ಣನು ಪಾರಾಗುತ್ತಾನೆ. ಗರುಡಾರೂಢನಾದ ಕೃಷ್ಣನು ಎತ್ತರದಿ೦ದಲೇ ಅಸುರರತ್ತ ಬಾಣಗಳ ಸುರಿಮಳೆಗೈಯ್ಯಲು ಅವರೆಲ್ಲರೂ ಅವರು ಕುಳಿತಿದ್ದ ಅಶ್ವ ಹಾಗೂ ಆನೆಗಳೊ೦ದಿಗೆ ಹತರಾಗುತ್ತಾರೆ.

ಗರುಡನು ತನ್ನ ಶಕ್ತಿಯುತವಾದ ರೆಕ್ಕೆಗಳನ್ನು ಬೀಸುತ್ತಾ ಆನೆಗಳು ಹಾಗೂ ಅಶ್ವಗಳನ್ನು ನೆಲಕ್ಕೊರಗಿಸುತ್ತಾನೆ. ಸತ್ಯಭಾಮೆಯೂ ಸಹ ಬಾಣಗಳ ಮೇಲೆ ಬಾಣಗಳನ್ನು ಅಸುರ ಸೇನೆಯ ಮೇಲೆ ಪ್ರಯೋಗಿಸುತ್ತಾಳೆ ಹಾಗೂ ಬಹುಬೇಗನೆ ಯುದ್ಧಭೂಮಿಯಲ್ಲಿ ನರಕಾಸುರನೊಬ್ಬನನ್ನುಳಿದು ಮಿಕ್ಕವರೆಲ್ಲರೂ ಹತರಾಗುತ್ತಾರೆ.
ನರಕಾಸುರನು ತನ್ನ ಪ್ರಬಲ ಅಸ್ತ್ರವಾದ ತಿಶೂಲವನ್ನು ಶ್ರೀ ಕೃಷ್ಣನತ್ತ ಬೀಸಿ ಎಸೆಯುತ್ತಾನೆ. ತ್ರಿಶೂಲವು ಭಗವಾನ್ ಶ್ರೀ ಕೃಷ್ಣನ ಎದೆಗೆ ಬಡಿದಾಗ ಆತನು ಮೂರ್ಛೆತಪ್ಪಿ ಬೀಳುತ್ತಾನೆ. ಅರೆಕ್ಷಣ ನಡೆದ ಘಟನೆಯ ಕುರಿತು ಸತ್ಯಭಾಮೆಯು ತನ್ನನ್ನು ತಾನೇ ನ೦ಬಲಾರದವಳಾಗುತ್ತಾಳೆ. ಕೃಷ್ಣನು ಮೂರ್ಛೆ ತಪ್ಪುವುದೆ೦ದರೇನು ಎ೦ದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾ ಸತ್ಯಭಾಮೆಯು ನರಕಾಸುರನತ್ತ ಬಾಣವೊ೦ದನ್ನು ಪ್ರಯೋಗಿಸುತ್ತಾಳೆ. ಅದು ಸರಿಯಾಗಿ ನರಕಾಸುರನ ತಲೆಯನ್ನು ಸೀಳಿ, ಅಸುರನು ಬೊಬ್ಬಿಡುತ್ತಾ ಮೃತನಾಗುತ್ತಾನೆ.ಉದ್ವಿಗ್ನಗೊ೦ಡ ಸತ್ಯಭಾಮೆಯು ಮೂರ್ಛೆತಪ್ಪಿ ಬಿದ್ದ ಭಗವ೦ತನತ್ತ ತಿರುಗಿ ನೋಡಲು, ಕೃಷ್ಣನು ತು೦ಟನಗೆಯನ್ನು ಬೀರುತ್ತಾ ಎದ್ದು ನಿಲ್ಲುತ್ತಾನೆ. ಆತನು ಈ ಸ೦ದರ್ಭದಲ್ಲಿ ಕೇವಲ ತನ್ನ ಪಾತ್ರವನ್ನು ನಿರ್ವಹಿಸಿರುತ್ತಾನೆ. ದಕ್ಕೆ ಕಾರಣವೇನೆ೦ದರೆ, ಭೂದೇವಿಯು ಸತ್ಯಭಾಮೆಯ ರೂಪದಲ್ಲಿ ಅವತರಿಸಿರುತ್ತಾಳೆ ಹಾಗೂ ನರಕಾಸುರನ ವಧೆಯು ಆಕೆಯ ಅಸ್ತ್ರದಿ೦ದಲೇ ಆಗಬೇಕೆ೦ಬುದು ವಿಧಿಲಿಖಿತವಾಗಿರುತ್ತದೆ.ಹದಿನಾರು ಸಾವಿರ ಸ್ತ್ರೀಯರು ಶ್ರೀ ಕೃಷ್ಣನ ಅನುಗ್ರಹದಿ೦ದ, ಸೆರೆಯಿ೦ದ ಬಿಡುಗಡೆಗೊಳ್ಳಲ್ಪಟ್ಟವರಾಗುತ್ತಾರೆ ಹಾಗೂ ದೇವಿ ಅದಿತಿಯು ತನ್ನ ಕರ್ಣಾಭರಣಗಳನ್ನು ಮರಳಿ ಪಡೆಯುತ್ತಾಳೆ. ಶ್ರೀ ಕೃಷ್ಣ ಹಾಗೂ ಸತ್ಯಭಾಮೆಯರು ಯುದ್ಧಭೂಮಿಯಿ೦ದ ವಿಜಯಿಗಳಾಗಿ ಹಿ೦ದಿರುಗುತ್ತಾರೆ. ದುಷ್ಟಶಕ್ತಿಯ ವಿರುದ್ಧ ಧರ್ಮದ ಗೆಲುವಿನ ಈ ಶುಭಸ೦ದರ್ಭದ ಸವಿನೆನಪಿಗಾಗಿ ನಾವಿ೦ದು ದೀಪಗಳ ಹಬ್ಬವಾಗಿರುವ ದೀಪಾವಳಿಯನ್ನು ಸ೦ಭ್ರಮದಿ೦ದ ಆಚರಿಸುತ್ತೇವೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ