ವೇದಗಳಲ್ಲಿ ಸೂರ್ಯವಿಜ್ಞಾನ

    ವೇದಮಂತ್ರಗಳಲ್ಲಿ ಸೂರ್ಯವಿಜ್ಞಾನವಿಷಯ ವಿಪುಲವಾಗಿವೆ. ವೇದಗಳು ಸೂರ್ಯನನ್ನು ಇಡೀ ಚರಾಚರ ಜಗತ್ತಿನ ಉತ್ಪಾದಕನೆಂದು ವರ್ಣಿಸಿವೆ. ನೂನಂ ಜನಾಃ ಸೂರ್ಯೇಣ ಪ್ರಸೂತಾಃ ಮತ್ತು ಇವನನ್ನು ಪ್ರಾಣಃ ಪ್ರಜಾನಾಮ್ ಎನ್ನಲಾಗುತ್ತಿದೆ. ವೇದಗಳಲ್ಲಿ ಸೂರ್ಯನನ್ನು ಇಂದ್ರನೆಂದು ಕರೆಯಲಾಗಿದೆ. "ಇಂದ್ರಾಯ ಗಿರೋ ಅನಿಶಿತಸರ್ಗಾ ಆಪಃ ಪ್ರೇರಣಂ ಸಗರಸ್ಯ ಬುಧ್ನಾತ್" - ಎಂದು ಸೂರ್ಯನನ್ನು ಋಗ್ವೇದವೂ ವರ್ಣಿಸಿದೆ. ಇಲ್ಲಿ ಇಂದ್ರ ಪದವು ಸೂರ್ಯನ ಬೋಧಕವಾಗಿದೆ. ಇಂದ್ರಪದವೂ ಅಂತರಿಕ್ಷ ದೇವತೆ ವಿದ್ಬುತ್ತಿಗಾಗಿ ಪ್ರಯುಕ್ತಗೊಳಿಸಿದೆ. ಇಂದ್ರ ಪದದ ಎರಡೂ ಪ್ರಕಾರಗಳ ಅರ್ಥ ಸಾಯಣಭಾಷ್ಯದಲ್ಲಿ ದೊರಕುತ್ತದೆ. 14 ಬೇಧಗಳಿಂದ ವರ್ಣಿಸಲ್ಪಟ್ಟಿವೆ. ಸಹ ಸ್ವಾನ್ ಹಾಗೂ ಮರುತ್ವಾನ್ ಎಂಬ ಎರಡು ವಿಶೇಷಣಗಳಿವೆ.
    ಪ್ರಕೃತಿಯ ರಹಸ್ಯವನ್ನರಿಯಲು ಸೂರ್ಯನು ಸಾಧನಸ್ವರೂಪನಾಗಿರುವನು. ಸೂರ್ಯನಿಂದಲೇ ಚರಾಚರ ಜಗತ್ತಿನ ಉತ್ಪತ್ತಿಯಾಯಿತೆಂದು ಶ್ರುತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರಸವಧರ್ಮದ ಕಾರಣಕ್ಕಾಗಿ ಸೂರ್ಯನಿಗೆ ಸವಿತಾ ಹೆಸರು ಸಾರ್ಥಕವಾಯಿತೆಂದು ಮೈತ್ರಿ ಉಪನಿಷತ್ತು ಹೇಳುತ್ತದೆ. ಬೃಹದ್ಯೋಗಯಾಜ್ಞವಲ್ಕದಲ್ಲಿ ಕೊಡ -
ಸವಿತಾ ಸರ್ವಭಾವಾನಾಂ
ಸರ್ವಭಾವಾಂಶ್ಚ ಸೂಯತೇ
ಸವನಾತ್ ಪ್ರೇರಣಾಚ್ಛಿವ
ಸವಿತಾ ತೇನ ಚೋಚ್ಯತೇ
    - ಈ ರೀತಿ ವರ್ಣಿಸಲ್ಪಟ್ಟಿದೆ. ಶ್ರುತಿಯಲ್ಲಿ ಪೂರ್ವಾಹ್ನದೊಳಗೆ ಸೂರ್ಯನು ಋಗ್ವಾರಾ, ಮಧ್ಯಾಹ್ನ ಯಜಃದ್ವಾರ ಮತ್ತು ಅಸ್ತಕಾಲದಲ್ಲಿ ಸಾಮದ್ವಾರಾ ಯುಕ್ತನಾಗಿರುವನು. ಸೂರ್ಯ ಸಿದ್ಧಾಂತಕಾರರು ಋಕ್- ಇದು ಸೂರ್ಯನ ಮಂಡಲವಾಗಿದ್ದು ಮತ್ತು ಯಜುರ್ ಹಾಗೂ ಸಾಮವು ಅವನ ಮೂರ್ತಿಯಾಗಿವೆ ಅವನು ಕಲಾತ್ಮಕ, ಕಾಲಕೃತ, ತ್ರಯಿಮಯ ಭಗವಾನ್ ಎಂದು ಹೇಳಿರುವರು.
    ವಸ್ತುತಃ, ಪ್ರಣವದ ಉದ್ಗೀತವು ಸೂರ್ಯನು. ಅವನು ನಾದಬ್ರಹ್ಮವಾಗಿದ್ದು ನಿರಂತರವಾಗಿ ರವವನ್ನು ಮಾಡುವ ಕಾರಣದಿಂದ ರವಿ ಎಂದು ವಿಖ್ಯಾತನಾಗಿರುವನು. ಛಾಂದೋಗ್ಯ ಉಪನಿಷದದ 1-4-15ರಲ್ಲಿ ತ್ರಯಿವಿದ್ಯೆ--ಛಂದೋರೂಪಃ ಮೂರು ವೇದಗಳೂ ಈ ಉದ್ಗೀತವನ್ನು ಆವೃತ್ತಗೊಳಿಸಿವೆ. ಇದರ ಹೊರಗೆ ಮೃತ್ಯುರಾಜ್ಯವಿದೆ. ದೇವತೆಗಳು ಮೃತ್ಯುಭಯದಿಂದ ಹೆದರಿ ಎಲ್ಲಕ್ಕಿಂತ ಮೊದಲು ವೇದಕ್ಕೆ ಶರಣು ಬಂದರು ಮತ್ತು ಛಂದಗಳ ಮೂಲಕ ತಮ್ಮನ್ನು ಅಚ್ಛಾದಿತ ಗೊಳಿಸಿಕೊಂಡು ರಕ್ಷಿಸಿಕೊಂಡರು. ಆದರೂ ಕೂಡ ಮೃತ್ಯುವು ಆ ಜನರನ್ನು ನೋಡಹತ್ತಿದನು. ಉದ್ಗೀತವು ಪ್ರಣವ ಅಂದರೆ ಸೂರ್ಯನು ಸದಾ ಸರ್ವದಾನಾದಮಾಡುತ್ತಿದ್ದು ಈ ಪ್ರಣವ ಸೂರ್ಯನಿಗೆ ಎರಡು ಅವಸ್ಥೆಗಳಿವೆ. ಒಂದು ಅವಸ್ಥೆಯಲ್ಲಿ ಈ ಸೂರ್ಯನ ರಶ್ಮಿಮಾಲೆಯು ನಾಲ್ಕು ಕಡೆ ವಿಕೀರ್ಣಗೊಂಡಿದೆ. ಈ ರಶ್ಮಿಗಳು ನೆಟ್ಟಗಿನ ರಸ್ತೆಯ ಸಮಾನವಾಗಿವೆ. ಯಾವ ರೀತಿಯಾಗಿ ರಸ್ತೆಗಳು ಒಂದು ಊರಿನಿಂದ ಇನ್ನೊಂದು ಊರಿನ ತನಕ ಹರಡುತ್ತವೆಯೋ ಹಾಗೆಯೇ ಈ ರಶ್ನಿಗಳು ಇಹಲೋಕದಿಂದ ಪರಲೋಕದ ತನಕ ಹರಡಿವೆ. ಸೂರ್ಯನ ಒಂದು ಸೀಮೆಯಲ್ಲಿ ಸೂರ್ಯಮಂಡಲವಿದ್ದು ಒಂದು ಗಡಿಗೆ ನಾಡಿಚಕ್ರವಿದೆ. ಸುಷುಪ್ತಿ ಕಾಲದಲ್ಲಿ ಜೀವವು ಈ ನಾಡಿಚಕ್ರವನ್ನು ಪ್ರವೇಶಿಸುತ್ತದೆ ಆ ವೇಳೆಗೆ ಸ್ವಪ್ನವು ಇರಲಾರದು ಕಾಂತಿಯು ಹುಟ್ಟುತ್ತದೆ. ಇದೇ ತೇಜಸ್ಥಾನವಾಗಿದೆ. ದೇಹ ತ್ಯಾಗದ ನಂತರ ಜೀವವು ಈ ಎಲ್ಲ ಕಿರಣಗಳನ್ನು ಅವಲಂಬಿಸಿ ಓಂಕಾರ ಭಾವನೆಯ ಸಹಾಯದ ಮೂಲಕ ಮೇಲಕ್ಕೆ ಏಳುತ್ತದೆ. ಸಂಕಲ್ಪಮಾತ್ರದಿಂದಲೇ ಮನದಲ್ಲಿ ವೇಗವು ಉಂಟಾಗುತ್ತಿದ್ದು ಅದೇ ವೇಗದಿಂದ ಸೂರ್ಯ ತನಕ ಉತ್ಥಾನವಾಗುತ್ತದೆ. ಸೂರ್ಯನು ಬ್ರಹ್ಮಾಂಡದ ದ್ವಾರಸ್ವರೂಪನಾಗಿದ್ದು ಜ್ಞಾನಿಗಳು ಈ ದ್ವಾರವನ್ನು ಬೇಧಿಸಿ ಸತ್ಯದಲ್ಲಿ ಮತ್ತು ಅಮರಧಾಮದಲ್ಲಿ ತಲುಪುವದು. ಅಜ್ಞಾನಿಗಳಿಗೆ ಇದು ಅಸಾದ್ಯ ಹೃದಯದಲ್ಲಿ ನಾಲ್ಕು ಕಡೆ ಅಸಂಖ್ಯನಾಡಿಗಳು ಹರಡಿವೆ. ಕೇವಲ ಒಂದು ಸೂಕ್ಷ್ಮಪಥ ಮೇಲಿನ ಮೂರ್ಧದತ್ತ ಹೋಗಿದೆ. ಇದೇ ಸೂಕ್ಷ್ಮದಾರಿಯಿಂದ ಗಮನಿಸಿದರೆ ಸೂರ್ಯದ್ವಾರ ಅತಿಕ್ರಮವಾಗುತ್ತದೆ. ಅನ್ಯಾನ್ಮದಾರಿಯಲ್ಲಿ ಹೋದನಂತರ ಭುವನ ಕೋಶದಲ್ಲಿಯೇ ಅಬದ್ಧವಾಗಿರಲು ಸಾಧ್ಯ ಯದ್ಯಪಿ ಭುವನಕೋಶದ ಕೇಂದ್ರವು ಸೂರ್ಯನಾದ ಕಾರಣ ಸಮಸ್ತ ಭುವನವು ಒಂದು ಪ್ರಕಾರದಿಂದ ಸೌರಲೋಕದ ಅಂತರ್ಗತವಾಗಿದೆ. ಎರಡನೆಯ ಅವಸ್ಥೆಯಲ್ಲಿ ಸಮಸ್ತರಶ್ಮಿಗಳು ಸಂಹೃತಗೊಂಡು ಮಧ್ಯಬಿಂದುವಿನಲ್ಲಿ ವಿಲೀನವಾಗಿವೆ. ಈ ದ್ವಿತೀಯ ಅವಸ್ಥೆಯೇ ಪ್ರಣವದ ಕೈವಲ್ಯಶುದ್ಧಾವಸ್ಥೆಯಾಗಿದೆ.
    ಓಂಕಾರವು ಪರ ಮತ್ತು ಅಪರ ಬ್ರಹ್ಮವಾಗಿದೆ. ಓಂ ಅಕ್ಷರದ ಮೂಲಕ ಪರಮಪುರುಷನ ಅಭಿಧ್ಯಾನದ ಪ್ರಭಾವದಿಂದ ತೇಜ ಅಥವಾ ಸೂರ್ಯನಲ್ಲಿ ಸಂಪತ್ತು ಉತ್ಪನ್ನವಾಗುತ್ತದೆ. ಆ ವೇಳೆಗೆ ಸಾಧಕನು ಸೂರ್ಯನ ಜತೆಗೆ ತಾದಾತ್ಮ ಹೊಂದುವನು. ಜಾತಿಯಲ್ಲಿ ಹಾಗೂ ಸಂಖ್ಯೆಯಲ್ಲಿ ಅನಂತವಾದ ಸೂರ್ಯರಶ್ಮಿಗಳ ಮೂಲಪ್ರಭೇಯು ಒಂದೇ ಆಗಿದೆ. ಈ ಮೂಲವರ್ಗವು ಶುಕ್ಲವರ್ಣವೇ ಆಗಿದೆ. ಈ ಮೂಲ ಶುಕ್ಲವರ್ಣವು ನೀಲಿ ಮೊದಲಾದ ಪರಸ್ಪರ ಕೂಡಿಕೊಂಡ ಕಾರಣ ವಿಭಿನ್ನ ಉಪವರ್ಣಗಳ ರೂಪದಲ್ಲಿ ಬೆಳಗಿದೆ. ಶುಕ್ಲದಿಂದ ಕೆಂಪು ನೀಲ ಪ್ರಭೃತಿ ಪ್ರಥಮಸ್ತರದಲ್ಲಿ ಆವಿರ್ಭವಗೊಂಡಿತು. ಸೂರ್ಯ ವಿಜ್ಞಾನದ ಮೂಲಸಿದ್ಧಾಂತ ಅರಿಯಲು ಅವರ್ಣ ಶುಕ್ಲವರ್ಣ ಮೂಲಕ ವಿಚಿತ್ರವರ್ಣ ವಿಚಿತ್ರ ಉಪವರ್ಣ, ಇತ್ಯಾದಿಗಳ ಅರಿವು ಮಾಡಿಕೊಳ್ಳಬೇಕು. ವರ್ಣದಿಂದ ಮಂತ್ರ, ಮಂತ್ರದಿಂದ ಪದದ ವಿಕಾಸ. ಈ ಪ್ರಕಾರ ವಾಚಕ ಭೂಮಿಯ ಮೇಲೆ ಆಗುವಂತೆ ವಾಚ್ಯವು ಭೂಮಿಯ ಮೇಲೆ ಕಲೆಯಿಂದ ತತ್ವ ಮತ್ತು ತತ್ವದಿಂದ ಭುವನ ಹಾಗೂ ಕಾರ್ಯ ಪದಾರ್ಥದ ಉತ್ಪತ್ತಿ ಮಾಡುತ್ತದೆ. ವಾಕ್ ಮತ್ತು ಅರ್ಥದ ನಿತ್ಯಸಂಯುಕ್ತದ ಕಾರಣದಿಂದ ವರ್ಣವನ್ನು ಅಧಿಕೃತಗೊಳಿಸಿದ್ದಾರೆ ಹಾಗೂ ಕಲೆಯನ್ನು ಕೂಡ ಅಧಿಕೃತಗೊಳಿಸಿರುವರು.
    ಪ್ರತಿಯೊಂದು ವಸ್ತುವಿನಲ್ಲೂ ಒಂದು ಪ್ರಕಾರದ ಶಕ್ತಿಯಿದೆ. ಹೀಗಾಗಿ ಕೆಲ ವಸ್ತುಗಳು ಸೂರ್ಯ ಕಿರಣಗಳ ತುಸು ರೂಪವನ್ನು ಪಡೆದುಕೊಳ್ಳುತ್ತದೆ. ರೂಪಗಳ ಆಧಾರ -- ರೂಪಗಳನ್ನು ರಚಿಸುವಲ್ಲಿ ಸೂರ್ಯಕಿರಣಗಳ ಪಾತ್ರವು ಹಿರಿದಾಗಿದೆ.
    ಈ ವೇದ ವರ್ಣದಲ್ಲಿ ರೂಪ ವಿಜ್ಞಾನದ ಅಂಶವಿದೆ ಅಲ್ಲದೇ ಸೂರ್ಯಕಿರಣಗಳ ಮೂಲಕ ವಿದ್ಯುತ್ತನ್ನು ಉತ್ಪಾದಿಸಬಹುದು ಎಂದು ವೇದಗಳಲ್ಲಿ ಅಲ್ಲಲ್ಲಿ ಹೇಳಲಾಗಿದೆ. ಅಂದಮೇಲೆ ನಮ್ಮ ವೈದಿಕ ಋಷಿವರ್ಯರು ಇಂದಿನ ವಿಜ್ಞಾನಿಗಳಿಗಿಂತ ಮೇಲ್ಮಟ್ಟವವರೆಂದು ಹೇಳಲೇಬೇಕು. ಕಲ್ಪವೃಕ್ಷತುಲ್ಯವೆನಿಸುವ ಕಿರಣಗಳನ್ನು ನೀಡುವ ಸೂರ್ಯದೇವನಿಗೆ ಇದೋ ನಮನಗಳು.
ಸರ್ವೇತಿ ನಾಮ್ನಾ ಭಗವಾನ್ ನಿಗದ್ಯತೇ
ಸೂರ್ಯೋಪಿ ಸರ್ವೇಷು ವಿಭಾತಿ ಭಾಷಯಾ
ಬ್ರಹ್ಮೆವ ಸೂರ್ಯಃ ಸಮುದೇತಿ ನಿತ್ಯಶಃ
ತಸ್ಮೆ ನಮೋಧ್ವಾಂತ ವಿಮೋಚಕಾರಿಣೇ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ