"ಸೌಂದರ್ಯಲಹರೀ" ಮಹಾ ದಿವ್ಯ ಸ್ತೋತ್

"ಸೌಂದರ್ಯಲಹರೀ" ಈ ಮಹಾ ದಿವ್ಯ ಸ್ತೋತ್ರ ಮಂಜರಿಯು ದೇವಿಯ ವರ್ಣನೆ ಮಾಡಿ, ಆಕೆಯ ಪಾದದರ್ಶನದಿಂದ ನಮ್ಮ ಪಾಪಶೇಷಗಳು ಕಳೆದು ಪುಣ್ಯ ಸಂಪಾದಿಸುವ ಮಹಾಮಾರ್ಗವಾಗಿದೆ.
ಈ ಸ್ತೋತ್ರದ ಮೂಲಕ ಆದಿಶಂಕರರು ದೇವಿಯ ಆರಾಧನೆಯನ್ನು ಮಾಡಿ ಸಾಕ್ಷಾತ್ ದೇವಿಯ ಪ್ರತ್ಯಕ್ಷ ರೂಪವನ್ನೇ ದರ್ಶಿಸಿ ಸಂತೋಷಗೊಂಡಿರುವರು.
ಇದರಲ್ಲಿ ಬರುವ 100 ಮಹಾ ಮಂತ್ರಗಳು ಸಕಲ ವಿಧವಾದ ಆಪತ್ತುಗಳಿಂದಲೂ ನಮ್ಮನ್ನು ರಕ್ಷಿಸಿ, ನಾವು ಕೋರುವ ಇಷ್ಟಾರ್ಥಗಳನ್ನು ಪೂರೈಸಿ, ನಮ್ಮನ್ನು ಸನ್ಮಾರ್ಗಕ್ಕೆ ಕರೆದೊಯ್ದು ಭಕ್ತಿಮಾರ್ಗಗಳನ್ನು ನೀಡುವ ದಿವ್ಯ ಮಂತ್ರಗುಚ್ಛವಾಗಿದೆ.
ಇದನ್ನು ಅನವರತ ಅನುಷ್ಠಾನಿಸಿದ ಮಹಾಮಹಿಮ ಸಂಪನ್ನರಾದ ಎ.ಆರ್. ಕೃಷ್ಣಶಾಸ್ತ್ರಿಗಳು ತಮ್ಮ ಬಾಳಿನ ಅಂತ್ಯದವರೆಗೂ ದೇವಿಯ ದರ್ಶನ ಪಡೆದು ಆಕೆಯ ಮೂಲಕವಾಗಿ ಮಹಾಕಾವ್ಯ ಎನಿಸಿದ ವಚನಭಾರತವನ್ನು ರಚಿಸಿದರು.
ಇನ್ನು ಈ ಸ್ತೋತ್ರಮಾಲೆಯಲ್ಲಿ ಕೇವಲ ಒಂದೇ ಮಂತ್ರವನ್ನು ಅನುಷ್ಠಾನ ಮಾಡಿಕೊಂಡು ದೈವ ಸಾಕ್ಷಾತ್ಕಾರ ಪಡೆದುಕೊಂಡಿರುವ ಶ್ರೀಚಕ್ರಾರಾಧಕರು ಬೆಳ್ಳಾವೆ ನರಹರಿ ಶಾಸ್ತ್ರಿಗಳು.
ಹೀಗೆ ಇನ್ನೂ ಅನೇಕರು ನಮ್ಮ ಎದುರಿನಲ್ಲೇ ಇದರ ಉಪಾಸನೆಯಿಂದ ದೇವಿಯ ವರವನ್ನು ಪಡೆದು ದಿಗ್ದಂತಿಗಳಾಗಿ ಬಾಳಿದವರು ಇದ್ದಾರೆ.
ಇದು ಶಕ್ತಿಯ ಮಹಾಮಂತ್ರಕ್ಕೆ ಸಮಾನ !
ಆದ್ದರಿಂದ ಎಲ್ಲರೂ ಇದನ್ನು ಅನುಷ್ಠಾನ ಮಾಡಿ ದೈವಸಾಕ್ಷಾತ್ಕಾರಕ್ಕೆ ಪಾತ್ರರಾದರೆ ಅದಕ್ಕಿಂತ ಸಂತಸದ ವಿಷಯ ಬೇರೆ ಇದೆಯೇನು?
ಧರ್ಮದೇವತೆಯ ಸಾಕ್ಷಾತ್ಕಾರವೇ ಇದಾಗಿದೆ. ಇದು ಬಡವ-ಬಲ್ಲಿದ, ಸ್ತ್ರೀ-ಪುರುಷ, ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಆಚರಿಸಬಹುದಾದಂತಹ ಸುಲಭಸಾಧ್ಯ ರಾಜ ಮಾರ್ಗವಾಗಿದೆ.
ಆದ್ದರಿಂದ ಭಕ್ತಮಹಾಶಯರು ತಾಯಿಯ ಗುಣಗಾನವಾದ ಈ ಶ್ಲೋಕಗಳನ್ನು ಭಕ್ತಿಯಿಂದ ಪಠಿಸಿದರೆ ಜಾತಕದಲ್ಲಿರುವ ದರಿದ್ರತೆಯು ನೀಗಿ ಸುಖಿಸಬಹುದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ